ಗೈರು ಹಾಜರಾದ ಶಿಕ್ಷಕಿಯ ವಿರುದ್ಧ ಕ್ರಮ ಜರುಗಿಸದ ಶಿಕ್ಷಣ ಇಲಾಖೆ


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ  ನಗರದಿಂದ ಕೇವಲ 12 ಕಿಮೀ ದೂರದಲ್ಲಿರುವ ಲಕ್ಕಿನಕೊಪ್ಪ  ಸರ್ಕಾರಿ ಉರ್ದುಕಿರಿಯ ಪ್ರಾಥಮಿಕ   ಶಾಲೆಯ ಸಮಸ್ಯೆಗಳು ಗಂಭೀರವಾಗಿ ಹೊರಹರಿಯುತ್ತಿವೆ. ಈ ಶಾಲೆಗೆ ಸರ್ಕಾರವು ಮೂವರು ಶಿಕ್ಷಕರನ್ನು ನೇಮಿಸಿದ್ದು, ಮಕ್ಕಳ ಭವಿಷ್ಯ ನಿರ್ಮಾಣದ ಹೊಣೆಗಾರಿಕೆ ಕೊಟ್ಟಿದೆ. ಆದರೆ, ಈ ಮೂವರಲ್ಲಿ ಒಬ್ಬರು 5 ತಿಂಗಳಿಂದ ನಾಪತ್ತೆಯಾಗಿದ್ದಾರೆ.

ಶಿಕ್ಷಕಿ 5 ತಿಂಗಳಿಂದ ಕಣ್ಮರೆಯಾಗಿದ್ದಾರೆ

ಜೂನ್ 1, 2024 ರಿಂದ ಜುಲೈ 31, 2024ರವರೆಗೆ ರಜೆ ತೆಗೆದುಕೊಂಡಿದ್ದ ಅರ್ಷಿಯಾ ನಾಜ್ ಎಂಬ ಶಿಕ್ಷಕಿ, ಈಗಾಗಲೇ ಎರಡು ಬಾರಿ ಅಮಾನತಿಗೆ ಒಳಗಾಗಿರುವರು. ಆದರೆ ಈ ಬಾರಿ, ರಜೆ ಮುಗಿದ ಬಳಿಕ ಅವರು ಶಾಲೆಗೆ ಹಾಜರಾಗಿಲ್ಲ. ಅವರ ಮೊಬೈಲ್ ಫೋನ್ ಸ್ವಿಚ್‌ ಆಫ್ ಆಗಿದ್ದು, ಶಾಲೆಯ ಮುಖ್ಯೋಪಾಧ್ಯಾಯರೊಂದಿಗೆ ಯಾವುದೇ ಸಂಪರ್ಕದಲ್ಲಿಲ್ಲ. ಇವರ ನಾಪತ್ತೆಯ ಬಗ್ಗೆ ಮುಖ್ಯೋಪಾಧ್ಯಾಯರು ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆ

ಈ ಶಾಲೆಯಲ್ಲಿ 1 ರಿಂದ 5ನೇ ತರಗತಿಯವರೆಗೆ ಸುಮಾರು 20 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳಿಗೆ ಎರಡು ಉರ್ದು  ಮತ್ತು ಒಂದು ಕನ್ನಡ ವಿಷಯದ ಶಿಕ್ಷಕರನ್ನು ನೇಮಿಸಲಾಗಿದೆ. ಆದರೆ, ಒಬ್ಬ ಶಿಕ್ಷಕಿಯ ಗೈರು ಹಾಜರಾತಿಯಿಂದ, ಉಳಿದವರಿಗೆ ಎಲ್ಲಾ ವಿಷಯಗಳನ್ನು ಬೋಧಿಸುವ ಪ್ರಸ್ಥಿತಿ ನಿರ್ಮಾಣವಾಗಿದೆ 

ಅಧಿಕಾರಿಗಳ ನಿರ್ಲಕ್ಷ್ಯ

ಈ ಘಟನೆ ಕುರಿತು ಸ್ಥಳೀಯ ಶಿಕ್ಷಣಾಧಿಕಾರಿಗಳು (BEO) ಯಾವುದೇ ತಕ್ಷಣದ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಪ್ರದರ್ಶಿಸುತ್ತಿದ್ದಾರೆ. ಈ ಹಿಂದೆ ಮತ್ತೊಂದು ಶಾಲೆಯಲ್ಲಿ ಅಕ್ಕಿ ದೋಚಿದ ಶಿಕ್ಷಕರ ವಿರುದ್ಧ ಕೂಡ ತಕ್ಷಣ ಕ್ರಮ ಕೈಗೊಳ್ಳಲಾಗಿಲ್ಲ. ಲಕ್ಕಿನ್ ಕೊಪ್ಪ   ಶಾಲೆಯ ಶಿಕ್ಷಕಿಯ ಪ್ರಕರಣದಲ್ಲೂ, ತಕ್ಷಣವೇ ಕ್ರಮ ತೆಗೆದುಕೊಳ್ಳದೇ, ಏನನ್ನು ಕಾಯುತ್ತಿದ್ದಾರೆ ಎಂಬುದರ ಬಗ್ಗೆ ಪ್ರಶ್ನೆಗಳು ಏಳುತ್ತಿವೆ.

ನಿರ್ಲಕ್ಷವಹಿಸುತ್ತಿರುವ   ಅಧಿಕಾರಿಗಳಿಗೂ ಕ್ರಮ ಅಗತ್ಯ

"5, ತಿಂಗಳವರೆಗೆ ಕಾಣೆಯಾಗಿರುವ ಶಿಕ್ಷಕರ ಮೇಲೆ ಕ್ರಮವಿಲ್ಲದಿರುವುದು ಏಕೆ?" ಎಂಬ ಪ್ರಶ್ನೆಗಳು ಸುಳಿದಾಡುತ್ತಿವೆ. ಶಿಕ್ಷಕರಷ್ಟೇ ಅಲ್ಲ, ಈ ನಿರ್ಲಕ್ಷ್ಯಮಾಡುತ್ತಿರುವ  ಅಧಿಕಾರಿಗಳ ಮೇಲೂ ಸೂಕ್ತ ತನಿಖೆ ನಡೆಸಿ, ಶಿಕ್ಷೆ ವಿಧಿಸಬೇಕೆಂದು ಶಾಲಾ ಪಾಲಕರು ಆಗ್ರಹಿಸುತ್ತಿದ್ದಾರೆ.

ಇಂತಹ ಪ್ರಕರ್ಣಗಳಲ್ಲಿ  ಶಿಕ್ಷಣ ಇಲಾಖೆಯು ತಕ್ಷಣವೇ ಕ್ರಮ  ನಡೆಸಿದರೆ ಮಾತ್ರ ಮಕ್ಕಳ ಭವಿಷ್ಯ ರಕ್ಷಿಸಲು ಸಾಧ್ಯವಾಗಲಿದೆ. ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ವೀಕರಿಸಿ, ಮಾಹಿತಿ ಹಂಚಿಕೊಳ್ಳುವ ವ್ಯವಧಾನವನ್ನೂ ಕಳೆದುಕೊಂಡಿದೆ. ಶಿಕ್ಷಣ ಸಚಿವರ ತವರು  ಕ್ಷೇತ್ರದಲ್ಲಿ ಲಗಾಮು ಇಲ್ಲವಾದಂತಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close