ಸುದ್ದಿಲೈವ್/ಶಿವಮೊಗ್ಗ
ಹೈದರಾಬಾದ್ ನ ಹೀರಾ ಗೋಲ್ಡ್ ನ ಮಾಲೀಕರಾದ ನೌಹೀರಾ ಶೇಖ್ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 2015 ರಲ್ಲಿ ನಡೆದ ವಂಚನೆಯ ಪ್ರಕರಣ ಈಗ ದಾಖಲಾಗಿದೆ.
2015 ರಲ್ಲಿ ಶಿವಮೊಗ್ಗದ ಆರ್ ಎಂ ಎಲ್ ನಗರದ ವ್ಯಕ್ತಿಗೆ ಭಟ್ಕಳದ ಯಾಸಿನ್ ಶೃಂಗೇರಿಯ ಮೂಲಕ ಹೀರಾ ಗೋಲ್ಡ್ ನ ಹೀರಾ ಗೋಲ್ಡ್ ಎಗ್ಜಿಮ್ ಲಿಮಿಟೆಡ್, ಹೀರಾ ರೀಟೇಲ್ ಹಾಗೂ ಹೀರಾ ಫುಡೆಕ್ಸ್ ಲಿಮಿಟೆಡ್ ಗೆ ಬಂಡವಾಳ ಹಾಕಲು ಹೇಳಿ ಒಂದಿಷ್ಟು ಬಂಡವಾಳದ ಹೂಡಿಕೆ ಬಗ್ಗೆ ವಿವರಿಸಿದ್ದರು.
ಅದರಂತೆ ಶಿವಮೊಗ್ಗದನಿವಾಸಿ ಹೀರಾ ಸಿಎಲ್ ಜಿ ಗೋಲ್ಡ್ ಎಕ್ಸಿಮ್ ನಲ್ಲಿ ಎರಡು ಲಕ್ಷ ಹೂಡಿಕೆ ಮಾಡಿದ್ದು ನಂತರ ಒಂದಿಷ್ಟು ಹೂಡಿಕೆ ಮಾಡಿ 5.50 ಲಕ್ಷ ರೂ ಲಾಭವನ್ನೂ ಪಡೆದಿದ್ದರು. ನಂತರ ಉಳಿದ ಹಣಕ್ಕೆ ಯಾವುದೇ ಲಾಭಬಾರದೆ ಇರುವ ಹಿನ್ನಲೆಯಲ್ಲಿ ಯಾಸಿನ್ ಶೃಂಗೇರಿಗೆ ಕರೆ ಮಾಡಿ ಲಾಭ, ಅಸಲಿನ ಹಣನೂ ಬರ್ತಾಯಿಲ್ಲ ಎಂದು ತಿಳಿಸಿದ್ದಾರೆ.
ಯಾಸಿನ್ ಅವರೇ ಖುದ್ದು ಹೀರಾ ಗೋಲ್ಡ್ ನ ಮಾಲೀಕರಾದ ನೌಹೀರ್ ಶೇಖ್ ಬಳಿ ಮಾತನಾಡಿಸಿ ಹಣಕ್ಕೆ ಗಾಬರಿಯಾಗದಂತೆ ಭರವಸೆ ನೀಡಿದ್ದರು. ಆದರೆ ಹಣ ಬಂದಿಲ್ಲ. ಪತ್ನಿಯ ಹೆಸರಿನಲ್ಲೂ ಹಣ ಬಂಡವಾಳ ಹೂಡಿದ್ದೂ ಬಂದಿಲ್ಲವೆಂದು ಆರೋಪಿಸಿ ನೌಹೀರಾ ಶೇಖ್ ಮತ್ತು ಯಾಸಿನ್ ಶೃಂಗೇರಿ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರು ದಾಖಲಾಗಿದೆ.
ಈ ಹಿಂದೆ 2017 ರಲ್ಲಿ ಹೀರಾ ಗೋಲ್ಡ್ ಮಾಲೀಕರಾದ ನೌಹೀರಾ ಶೇಖ್ ರನ್ನ ಶಿವಮೊಗ್ಗದ ನ್ಯಾಯಾಲಯಕ್ಕೆ ಬಾಡಿವಾರೆಂಟ್ ಮೇಲೆ ಕರೆತಂದು ಪ್ರಕರಣ ನಡೆಸಲಾಗಿತ್ತು. ಈಗ ಶಿವಮೊಗ್ಗದಲ್ಲಿ 2015 ರಲ್ಲಿ ನಡೆದ ಪ್ರಕರಣ ದಾಖಲಾಗಿದೆ.