ಸುದ್ದಿಲೈವ್/ಶಿವಮೊಗ್ಗ
ಹೊಳೆಬೆನವಳ್ಳಿ ಗ್ರಾಮದ ಹೊಳೆಹೊನ್ನೂರು ರಸ್ತೆಯಲ್ಲಿ ಮೊನ್ನೆ ರಾತ್ರಿ 9 ಗಂಟೆಗೆ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ. ಹಿಟ್ ಅಂಡ್ ರನ್ ಗೆ ಓರ್ವ ಬಲಿಯಾಗಿದ್ದಾನೆ.
ಹೊಳೆಬೆನವಳ್ಳಿಯ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಆರ್ಕೇಸ್ಟ್ರಾ ನಡೆಯುತ್ತಿದ್ದು, ಆರ್ಕೇಸ್ಟ್ರಾದಲ್ಲಿದ್ದ 54 ವರ್ಷದ ತಿಮ್ಮಪ್ಪ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಮನೆಗೆ ವಾಪಾಸಾಗಲು ಮುಂದಾಗಿದ್ದಾರೆ.
ಹೊಳೆಹೊನ್ನೂರು ರಸ್ತೆಯಲ್ಲಿರುವ ಪಾಟೀಲ್ ಮಂಜಯ್ಯನವರ ಮನೆ ಮುಂದೆ ನಡೆದುಕೊಂಡು ಹೋಗುವಾಗ ಕಾರೊಂದು ಡಿಕ್ಕಿ ಹೊಡೆಸಿ ಮುಂದೆ ಸಾಗಿದೆ. ರಕ್ತದ ಮಡುವಿನಲ್ಲಿ ಮಲಗಿದ್ದ ತಿಮ್ಮಪ್ಪನವರನ್ನ ಹತ್ತಿರದ ಸುಬ್ಬಯ್ಯ ಮೆಡಿಕಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆದರೆ ತಿಮ್ಮಪ್ಪನವರ ಸಾವನ್ನ ಆಸ್ಪತ್ರೆಯ ಖಚಿತ ಪಡಿಸಿದ್ದಾರೆ. ಆದರೆ ಈ ಕಾರಿನ ನಂಬರ್ ವೊಂದು ಪತ್ತೆಯಾಗಿದೆ. DL 08 CU 0180 ಕ್ರಮ ಸಂಖ್ಯೆಯ ಮಾರುತಿ ಸ್ವಿಪ್ಟ್ ಕಾರೆಂದು ಮೃತರ ಪತ್ನಿ ನೀಡಿರುವ ದೂರಿನಲ್ಲಿ ದಾಖಲಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.