ಆತ್ಮಹತ್ಯೆ ಪ್ರಕರಣ ಅನುಮಾನ ಸ್ಪದ ಸಾವೆಂದು ದಾಖಲು


ಸುದ್ದಿಲೈವ್/ಶಿವಮೊಗ್ಗ

ಗಾಡಿಕೊಪ್ಪದ ಸೇವಾಲಾಲ್ ಬೀದಿಯ ನಿವಾಸಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬ ಇದು ಆತ್ಮಹತ್ಯೆ ಅಲ್ಲ ಇದೊಂದು ಅನುಮಾನ ಸ್ಪದ ಸಾವು ಎಂದು ಆರೋಪಿಸಿದೆ. 

ಗಾಡಿಕೊಪ್ಪದ ನಿವಾಸಿ ಭೋಜ್ಯನಾಯ್ಕ (58) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದಾರೆ, ಭೋಜ್ಯನಾಯ್ಕ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೂ ಅವರ ಕುತ್ತಿಗೆಯಲ್ಲಿ ನೇಣು  ಬಿಗಿದ ಕಲೆ ಇರುವುದರಿಂದ ಕುಟುಂಬ ಇದೊಂದು ಅನುಮಾನಸ್ಪದ ಸಾವು ಎಂದು ಆರೋಪಿಸಿದೆ.  

ಭೋಜ್ಯ ನಾಯ್ಕ್ ಅಣ್ಣ ತಮ್ಮಂದಿರ ನಡುವೆ ಆಸ್ತಿ ವಿಚಾರದಲ್ಲಿ ಗಲಾಟೆ ಇದ್ದು, ಪ್ರಕರಣ ಕೋರ್ಟಿನಲ್ಲಿ ಭೋಜ್ಯನಾಯ್ಕರ ಪರ ಕೇಸ್ ಆಗಿತ್ತು. ಆದರೆ ಈ ವಿಚಾರದಲ್ಲಿ  ಸಹೋದರ ಕೃಷ್ಣನಾಯ್ಕ, ಮಗ ಶಿವಕುಮಾರ್ ಮತ್ತೋರ್ವ ಸಹೋದರ ಜಗದೀಶ್ ಭೋಜ್ಯನಾಯ್ಕರಿಗೆ ಬೆದರಿಕೆ ಹಾಕುತ್ತಿದ್ದರಿಂದ ಇವರ ವಿರುದ್ಧ ಎಫ್ಐಆರ್ ಆಗಿದೆ. 

ಭೋಜ್ಯನಾಯ್ಕರಿಗೆ ಆಸ್ತಿವಿಚಾರದಲ್ಲಿ‌  ಬೆದರಿಕೆ ಹಾಕಲಾಗುತ್ತಿತ್ತು. ಕೃಷ್ಣನಾಯ್ಕ ಮತ್ತು ತಂಡ ದೂರು ನೀಡುತ್ತಿರುವುದು ಠಾಣೆಯಲ್ಲಿ ದಾಖಲಾಗುತ್ತಿದ್ದರೆ. ಬೋಜ್ಯನಾಯ್ಕರ ದೂರನ್ನ ಠಾಣೆಯಲ್ಲಿ ಪೊಲೀಸರೊಬ್ಬರು  ಸ್ವೀಕರಿಸುತ್ತಿರಲಿಲ್ಲ ಎಂಬ ಆರೋಪವನ್ನೂ ಕುಟುಂಬ ಮಾಡಲಾಗಿದೆ. ನಿನ್ನೆ ಭೋಜ್ಯನಾಯ್ಕ್ ಆತ್ಮಹತ್ಯೆ ಮಾಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close