![]() |
NK Jagadish, a Maratha, has been elected as the BJP district president of Shimoga. |
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಬಿಜೆಪಿ ಜಿಲ್ಲಾಧ್ಯಕ್ಷರ ಸ್ಥಾನವನ್ನ ಮರಾಠ ಜನಾಂಗದ ಎನ್ ಕೆ ಜಗದೀಶ್ ಅವರನ್ನ ಆಯ್ಕೆ ಮಾಡಲಾಗಿದೆ.
ಜಿಲ್ಲಾ ಪ್ರತಿನಿಧಿಯಾಗಿ ರುದ್ರೇಗೌಡ, ಶಿವಮೊಗ್ಗನಗರಕ್ಕೆ ಡಿ.ಮೋಹನ್ ರೆಡ್ಡಿ ತೀರ್ಥಹಳ್ಳಿ ತಾಲೂಕು ಅಧ್ಯಕ್ಷರಾಗಿ ನವೀನ್ ಹೆದ್ದೂರು, ಹೊಸನಗರ ಕೆ.ವಿ.ಸುಬ್ರಮಣ್ಯ, ಸಾಗರ ನಗರ ಅಧ್ಯಕ್ಷರಾಗಿ ಗಣೇಶ್ ಪ್ರಸಾದ್, ಸಾಗರ ಗ್ರಾಮಾಂತರ ದೇವೇಂದ್ರ ಯಲಕುಂದ್ಲಿ
ಸೊರಬ ಪ್ರಕಾಶ್ ಅಗಸನಹಳ್ಳಿ, ಶಿಕಾರಿಪುರದ ತಾಲೂಕು ಅಧ್ಯಕ್ಷರಾಗಿ ಹನುಮಂತಪ್ಪ, ಭದ್ರಾವತಿ ಜಿ.ಧರ್ಮಪ್ರಸಾದ್, ಹೊಳೆಹೊನ್ನೂರು ಮಲ್ಲೇಶಪ್ಪ ಎಂ. ಶಿವಮೊಗ್ಗ ಗ್ರಾಮಾಂತರ ಎಸ್ ಇ ಸುರೇಶ್ ಆಯ್ಕೆಯಾಗಿದ್ದಾರೆ.
9 ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆಯನ್ನ ರಾಜ್ಯ ಬಿಜೆಪಿ ಮಾಡಿದೆ. ರಾಜ್ಯದಿಂದ ನಿಯುಕ್ತಿಗೊಂಡ ಚುನಾವಣೆ ಅಧಿಕಾರಿಗಳಿಂದ ಜಿಲ್ಲೆಗೆ ನೂತನ ಅಧ್ಯಕ್ಷರನ್ನ ಮತ್ತು ನೂತನ ತಾಲೂಕು ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.