ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಶಿವಮೊಗ್ಗದ ಬಾಲಕಿಗೆ 7 ನೇ ಸ್ಥಾನ

A Shimoga girl was ranked 7th in the Under-14 National Level Athletics Games held at Rachi, Jharkhand today.


ಸುದ್ದಿಲೈವ್/ಶಿವಮೊಗ್ಗ

ಇಂದು ಜಾರ್ಖಂಡ್ ನ ರಾoಚಿ ಯಲ್ಲಿ ನಡೆದ 14 ವರ್ಷ ವಯೋಮಿತಿ ಒಳಗಿನ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ, ಶಿವಮೊಗ್ಗದ ಬಾಲಕಿಗೆ 7 ನೇ ಸ್ಥಾನವನ್ನ ಪಡೆದುಕೊಂಡಿದ್ದಾರೆ. 

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲೂಕಿನ  ಗಾಡಿಕೊಪ್ಪದಲ್ಲಿರುವ ಜ್ಞಾನಗಂಗಾ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ   ಕುಮಾರಿ ಖುಷಿ ಎಸ್(ಗಾಡಿಕೊಪ್ಪದ  ಸುರೇಶ್ ಮತ್ತು ತುಳಸಿ ದಂಪತಿಯ ಮಗಳು) 100 ಮೀಟರ್ ಓಟದ ಫೈನಲ್‌ನಲ್ಲಿ  7ನೇ ಸ್ಥಾನವನ್ನು ಪಡೆದು ಶಾಲೆಗೆ, ತಾಲೂಕಿಗೆ, ಜಿಲ್ಲೆಗೆ, ಕರ್ನಾಟಕ ರಾಜ್ಯಕ್ಕೆ,ಹಾಗೂ ಭಾರತ ದೇಶಕ್ಕೆ ಕೀರ್ತಿಯನ್ನು ತಂದಿರುತ್ತಾಳೆ. ಜ್ಞಾನ ಗಂಗಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ದಿನೇಶ್ M N ,ಸಂಸ್ಥಾಪಕರಾದ B ಶೇಖರಪ್ಪ ಹಾಗೂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಅವಳಿಗೆ  ತುಂಬು ಹೃದಯದ ಅಭಿನಂದನೆ ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close