ಶಾಸಕರೆ ಮತ್ತು ಸಂಸದರ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹೇಳಿದ್ದೇನು?

The District Congress has retaliated against the BJP MPs and MLAs who expressed outrage against Minister Madhu Bangarappa.

ಸುದ್ದಿಲೈವ್/ಶಿವಮೊಗ್ಗ

ಸಚಿವ ಮಧು ಬಂಗಾರಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ಸಂಸದ ಮತ್ತು ಶಾಸಕರಿಗೆ ಜಿಲ್ಲಾ ಕಾಂಗ್ರೆಸ್ ತಿರುಗೇಟು ನೀಡಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧ್ಯಕ್ಷ ಆರ್ ಪ್ರಸನ್ನ ಕುಮಾರ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಸಹಕಾರಿ ಧುರೀಣ ಡಾ.ಆರ್.ಎಂ.ಮಂಜುನಾಥ್, ಕಾಂಗ್ರೆಸ್ ಸರ್ಕಾರದ ಕರ್ಮಕಾಂಡವನ್ನ ನಾವು ಸರಿಪಿಡಿಸುವ ಕೆಲಸ ಮಾಡುತ್ತಿರುವುದಾಗಿ ಸಂಸದ ರಾಘವೇಂದ್ರ ತಿಳಿಸಿದ್ದರು. 

ಇದಕ್ಕೆ ತಿರುಗೇಟು ನೀಡಿದ ಜಿಲ್ಲಾಧ್ಯಕ್ಷ ಆರ್ ಪ್ರಸನ್ನ ಕುಮಾರ್, ವಿಐಎಸ್ ಎಲ್ ನ್ನ ಜೀವಂತವಾಗಿ ಇಟ್ಟಿಕೊಂಡಿರುವ ಕೇಂದ್ರ ಸರ್ಕಾರ ಕಾರ್ಖಾನೆಯನ್ನ ಕೋಮಾ ಸ್ಟೇಜ್ ಗೆ ತಲುಪಿಸಿದೆ. 11 ವರ್ಷದಲ್ಲಿ  ಬಿಜೆಪಿ ಸರ್ಕಾರ ಸುಮ್ಮನೆ ಕುಳಿತಿರುವುದೇಕೆ ಎಂದು ಕೆಂಡಕಾರಿದರು.

ಶರಾವತಿ ಸಂತ್ರಸ್ತರನ್ನ ಅತಂತ್ರ ಮಾಡಿದ್ದು ಕಾಂಗ್ರೆಸ್ ಎಂದು ಸಹ ಸಂಸದರು ಹೇಳಿರುವುದು ದುರಂತ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭರವಸೆ ಮೂಡಿಸುತ್ತಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರವಾಗಿದೆ. ಆಶ್ರಯ ಮನೆಗಳಿಗೆ ಟ್ಯೂಬ್ ಲೈಟ್ ಹಾಕಲು ಕಾಂಗ್ರೆಸ್ ಸರ್ಕಾರ ಹಾಯ್ ತೊರೆಯುತ್ತಿದೆ ಎಂಬ ಹೇಳಿಕೆಗೂ ಟಾಂಗ್ ನೀಡಿದ ಜಿಲ್ಲಾ ಅಧ್ಯಕ್ಷರು ಆಶ್ರಯ ಯೊಜನೆ ತಂದಿದ್ದೆ ಕಾಂಗ್ರೆಸ್ ಸರ್ಕಾರ. ನಮ್ಮ ಸರ್ಕಾರ ಅವಧಿ ಮುಗಿದ ಮೇಲೆ ಕ್ರಮ ಕೈಗೊಂಡಿಲ್ಲ ಬಿಜೆಪಿ ಏನೂ ಕ್ರಮಕೈಗೊಂಡಿಲ್ಲ. ಅವರನ್ನ ಅತಂತ್ರವಾಗಿಸಿದೆ ಎಂದು ದೂರಿದರು. 

ಶಾಸಕ ಚೆನ್ನವಸಪ್ಪನವರ ಬೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದಂತೆ ಆಗಿದೆ. ಶಾಸಕರೆ ನೀವು ನಮ್ಮ ಸ್ನೇಹಿತರೆ ಜನರಿಗೆ ಸೌಲಭ್ಯ ನೀಡಿ ಕೆಲಸ ಮಾಡಿ. ಅವಸರ ಪಡಬೇಡಿ ಎಂದು ಸಲಹೆ ನೀಡಿದರು. ಸಚಿವರ ಬಗ್ಗೆ ನೀವು ಗೌರವ ತೋರಿದರೆ ನಿಮಗೂ ಗೌರವ ಸಿಗುತ್ತೆ ಇಲ್ಲವೆಂದರೆ ಇಲ್ಲ ಎಂದು ತಿಳಿಸಿದರು. 

ರೈತರಿಗೆ ಅನುಕೂಲ ಕೆಲಸವನ್ನ ಬಿಜೆಪಿ ಮಾಡಿಲ್ಲ.‌ ಸಹಕಾರ ಬ್ಯಾಂಕ್ ಗೆ ನಬಾರ್ಡ್ ನೀಡುವ ಹಣ ಶೇ.58 ರಷ್ಟು ಕಡಿತಗೊಳಿಸಿದೆ. ಫ್ರೀಡಂ ಪಾರ್ಕ್ ಅಭಿವೃದ್ಧಿಗೆ ಕೇವಲ 5 ಕೋಟಿ ಮಾತ್ರ ಕಾಂಗ್ರೆಸ್ ಮಾಡಿಲ್ಲ. ಅದಕ್ಕೂ ಮಿಗಲಾದ ಕೆಲಸ ಮಾಡಲಾಗಿದೆ. ಹಗೂರವಾಗಿ ಕೆಲಸ ಮಾಡಿದರೆ ನಮ್ಮ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಮ್ಯಾಮ್ ಕೋಸ್ ಚುನಾವಣೆ 19 ಜನ ಕಾಂಗ್ರೆಸ್ ಬೆಂಬಲಿತರನ್ನ ಕಣಕ್ಕಿಳಿಸಲಾಗಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close