![]() |
MLA Chennabasappa is becoming a citizen. Happy with that. KPCC spokesperson Ayanur Manjunath said that etiquette and control of tongue is welcome. |
ಸುದ್ದಿಲೈವ್/ಶಿವಮೊಗ್ಗ
ಶಾಸಕ ಚೆನ್ನಬಸಪ್ಪ ನಾಗರೀಕರಾಗುತ್ತಿದ್ದಾರೆ. ಅದಕ್ಕೆ ಸಂತೋಷವಾಗಿದೆ. ಶಿಷ್ಠಾಚಾರ, ನಾಲಿಗೆ ಮೇಲೆ ಹಿಡಿತ ಇರಬೇಕು ಎಂದಿದ್ದು ಸ್ವಾಗತ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಕಾಲೆಳೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರುಂಡ ಚೆಂಡಾಡಾಬೇಕಾಗುತ್ತದೆ ಎಂದ ಚೆನ್ನಬಸ್ಪ ಸಿದ್ದರಾಮಯ್ಯರಿಗೆ ಸಿದ್ರಾಮುಲ್ಲಾ ಖಾನ್ ಎಂದು ನಾಮಕರಣ ಮಾಡುವ ಮೂಲಕ ಎಲುಬು ಇಲ್ಲದ ನಾಲಿಗೆಯನ್ನ ಹರಿಬಿಟ್ಟಿದ್ದರು. ಈಗ ಸಚಿವ ಮಧು ಬಂಗಾರಪ್ಪನವರಿಗೆ ನಾಲಿಗೆ ಮೇಲೆ ಹಿಡಿತ ಇರಲಿ ಎಂಬುದನ್ನ ಸ್ವಾಗತಿಸುವೆ ಎಂದರು.
ನಿಮ್ಮ ಬದಲಾವಣೆ ಒಳ್ಳೆಯ ಬದಲಾವಣೆಯಾಗಿದೆ. ಈಶ್ವರಪ್ಪ ಮಂತ್ರಿಯಾಗಿದ್ದಾಗ ಶಾಸಕ ಚೆನ್ನವಸಪ್ಪನವರೆ ಕಣ್ಣು ಕಿವಿಯಾಗಿದ್ದರು. ರುದ್ರೇಗೌಡ, ಭಾರತಿಶೆಟ್ಟಿ ಕೊನೆಗೆ ನನ್ನ ಮಾತನ್ನ ಕೇಳದ ಸ್ಥಿತಿ ನಿಮಗೆ ಇತ್ತು. ಸಚಿವರ ಮಗನನ್ನ ಕರೆದುಕೊಂಡು ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿ ಶಿಷ್ಠಾಚಾರವನ್ನೇ ಉಲ್ಲಂಘಿಸಿದ್ದೀರಿ ಎಂದು ಕಿಡಿಕಾರಿದರು.
ಶಿವಮೊಗ್ಗದ ವಾರ್ಡ್ ನಲ್ಲಿ ಕಾರ್ಯಕ್ರಮ ಮಾಡುವಾಗ ಶಾಸಕರನ್ನ ಕರೆತಂದು ಮಾತನಾಡಿದ್ದು ಇತ್ತಾ? ಎಂಎಲ್ ಸಿಗಳನ್ನ ಆಹ್ವಾನಿಸಿದ್ರಾ? ಆಗ ಶಿಷ್ಠಾಚಾರ ಪಾಲಿಸಿದ್ರಾ? ಈಗ ಡಾ.ಧನಂಜಯ ಸರ್ಜಿ ಅವರನ್ನ ಸರಿಯಾಗಿ ನಡೆಸಿಕೊಳ್ಳುತ್ತಿದ್ದೀರ ಎಂದು ಪ್ರಶ್ನಿಸಿದ ಆಯನೂರು ತಾವು ಮಾಡಿದ ಶಿಷ್ಠಾಚಾರ ಮರುಕಳುಸುತ್ತಿದೆ ಎಂದು ಶಾಸಕರಿಗೆ ಪಾಠ ಮಾಡಿದರು.
ಶಾಸಕರೆ ಧೈರ್ಯವಿರುವುದಾದರೆ ಸ್ಮಾರ್ಟ್ ಸಿಟಿ ಕಾಮಗಾರಿ ಉಲ್ಲಂಘನೆ ಆಗಿವೆದೆಯೋ ಅದರ ಬಗ್ಗೆ ಕಾರ್ಯಕ್ರಮ ಜರುಗಿದಿದೆ. ಸ್ಮಾರ್ಟ್ ಸಿಟಿ ಯೋಜನೆ ಮುಗಿದರೂ ಕಚೇರಿ ಮುಂದುವರೆಸಲಾಗಿದೆ. ಜಿಲ್ಲಾ ಉಸ್ತುವಾರಿ ಅಧಿಕಾರಿ ಕಾವೇರಿಯವರು ಕ್ರಮ ಕೈಗೊಂಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆ ಮುಗಿದರೂ ಅಧಿಕಾರಿಗಳನ್ನ ಮಾರ್ಚ್ ವರೆಗೆ ಮುಂದುವರೆಸಿ ಹಣ ಪೋಲ್ ಮಾಡುತ್ತಿರುವುದೇಕೆ ಎಂದು ಗಂಭೀರ ಆರೋಪ ಮಾಡಿದರು.
ಸಚಿವ ಮಧುಬಂಗಾರಪ್ಪನವರಿಗೆ ಅಧಿಕಾರ ಪಿತ್ತ ನೆತ್ತಿಗೇರಿದರೆ ನಿಮ್ಮನ್ನ ಸಮ್ಮೇಳನದಲ್ಲಿ ಮಾತನಾಡಿಸುತ್ತರಲಿಲ್ಲ. ಕಾರ್ಯಕ್ರಮದಲ್ಲಿ ನಿಂಬೆಹಣ್ಣು ಕೊಡೋದು ನೆತ್ತಿಗೆ ಏರಿಸಿಕೊಳ್ಳಲು ವಾಸನೆ ಮಾಡಲು ಅಲ್ಲವೆಂದು ವ್ಯಂಗ್ಯವಾಡಿದರು.
ಎಂಪಿಯವರು ಯಾವ ಶಿಷ್ಠಾಚಾರ ಅನುಸರಿಸಿ ಕಾರ್ಯಕ್ರಮ ಮಾಡುತ್ತಿದ್ದರು? ಬಿಎಸ್ ವೈ ಅವರ ಕಾರ್ಯಕ್ರಮಕ್ಕೆ ಈಶ್ವರಪ್ಪನವರನೇ ಕರೆದು ಶಿಷ್ಠಾಚಾರ ಉಲ್ಲಂಘಿಸರಿಲ್ವಾ ಎಂದು ಪ್ರಶ್ನಿಸಿದರು.