ಶಿವಮೊಗ್ಗ ಏರ್ಪೋರ್ಟ್ ಬಗ್ಗೆ ಸೂಕ್ತ ನಿರ್ಧಾರ-ಎಂಬಿಪಾ

Kugarike Minister M. B. Patil said that the state government is taking strict measures to control micro finance in the state.


ಸುದ್ದಿಲೈವ್/ಶಿವಮೊಗ್ಗ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಕೂಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು. 

ಶಿವಮೊಗ್ಗದ ಏರ್ಪೋರ್ಟ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಸಂಬಂಧ ಸರ್ಕಾರ ಸುಗ್ರೀವಾಜ್ಞೆಯನ್ನು ನಿಶ್ಚಿತವಾಗಿ ಹೊರಡಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ ಸಹ ಭಾಗಿಯಾಗಬೇಕು. ನಾನು ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಆಗಲೂ ಸಹ ಐಎಂಎ  ಹಗರಣ ಆಗಿತ್ತು. ಈಗ ಮೈಕ್ರೋ ಫೈನಾನ್ಸ್ ಹಾವಳಿ ಎಲ್ಲಾ ಕಡೆ ಇದೆ ಎಂದರು. 


ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ಇದಕ್ಕೆ ನಾವು ಅಂತ್ಯ ಹಾಡಬೇಕಿದೆ. ಸುಗ್ರೀವಾಜ್ಞೆ ಮೂಲಕ ಕಠಿಣ ಕಾನೂನನ್ನು ತರಬೇಕಿದೆ. ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಪಡಿಸಬೇಕಿದೆ. ದುಬಾರಿ ಬಡ್ಡಿಯಿಂದಾಗಿ ಜನರು ಅವಮಾನ ಸಹಿಸದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲಾ ಆಗಬಾರದು ಅದಕ್ಕಾಗಿ ಆರ್‌ಬಿಐ ಸಹ ಸಹಮತ ವ್ಯಕ್ತಪಡಿಸಬೇಕು ಎಂದರು. 

ಹಾಗಾಗಿ ಕೇಂದ್ರ ಸರ್ಕಾರ ಸಹ ಸೂಕ್ತ ಕಾನೂನು ತರಬೇಕು ಮೈಕ್ರೋ ಫೈನಾನ್ಸ್ ನ ಹಾವಳಿಗೆ ಇತಿ ಶ್ರೀ ಹಾಡಬೇಕು. ಮೈಕ್ರೋ ಫೈನಾನ್ಸ್ ಹಾವಳಿಯಿಂದ ನೊಂದವರಿಗೆ ಸರ್ಕಾರ ನಿಶ್ವಿತವಾಗಿ ನೆರವು ನೀಡಲಿದೆ. ಇದಕ್ಕೆ ಕೇಂದ್ರ ಸರ್ಕಾರ ನೆರವು ನೀಡಬೇಕು. ಮೈಕ್ರೋ ಫೈನಾನ್ಸ್ ನವರು ಕೋರ್ಟ್ ಗೆ ಹೋಗಿ ಕಾನೂನಿನ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಕೆಲಸ ಆಗಬಾರದು. ಯಾವುದೇ ಶೋಷಣೆ ಇಲ್ಲದಂತಹ ಬಿಗುವಾದ ಕಾನೂನು ಬರಬೇಕು ಎಂದು  ಸಚಿವ ಎಂ.ಬಿ.ಪಾಟೀಲ್ ಪ್ರತಿಪಾದಿಸಿದ್ದಾರೆ. 

ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಗೆ ಎಂಬಿಪಾ ಸಮರ್ಥನೆ

ಕುಂಭಮೇಳ ಕುರಿತು ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರದಲ್ಲಿ ಖರ್ಗೆ ಅವರು ಬರೀ ಆಚರಣೆಯ ಬಗ್ಗೆ ಹೇಳಿಲ್ಲ. ಕೇಂದ್ರ ಸರ್ಕಾರ ಜನರ ಕಣ್ಣೊರೆಸುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಡಾಲರ್ ಮುಂದೆ ಭಾರತದ ರೂಪಾಯಿ ಕುಸಿತ ಆಗುತ್ತಿದೆ. ಈ ಅರ್ಥದಲ್ಲಿ ಖರ್ಗೆ ಅವರು ಮಾತನಾಡಿದ್ದಾರೆ ಎಂದು ಸಮ್ಜಾಯಿಷಿ ನೀಡಿದರು. 

ಆದರೆ ಬಿಜೆಪಿಯವರಿಗೆ ಇದೆಲ್ಲ ಕಾಣುವುದಿಲ್ಲ. ಕುಂಭಮೇಳದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟಿರುವ ಹಿನ್ನೆಲೆಯಲ್ಲಿಘಟನೆಯ ಸತ್ಯಾಸತ್ಯೆಯನ್ನು ತಿಳಿದುಕೊಂಡು ಸರ್ಕಾರ ನೆರವು ನೀಡಲಿದೆ ಎಂದರು. 

ಏರ್ ಪೋರ್ಟ್ ನಿರ್ವಹಣೆಗೆ ಏರ್ ಪೋರ್ಟ್ ಅಥಾರಿಟಿ ಪ್ರಸ್ತಾವನೆ

ಶಿವಮೊಗ್ಗ ಏರ್ ಪೋರ್ಟ್ ನಿರ್ವಾಹಣೆಯು ಕೇಂದ್ರ ಸರ್ಕಾರ ಕೇಳುತ್ತಿದೆ. ಇದರ ಬಗ್ಗೆ ಸೂಕ್ತ ನಿರ್ವಾಹಣೆ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನಿಸಲಿದೆ. ಈ ಹಿಂದೆ ಕಲ್ಬುರ್ಗಿಯಲ್ಲಿ 1500 ರೂ. ನಿರ್ವಾಹಣೆ ಕೈಗೆ ಬಂದಿತ್ತು. ಅದನ್ನ ನಾವು ನಿರ್ವಹಿಸಿ ಅದನ್ನ  ಏರ್ ಪೋರ್ಟ್ ಅಥಾರಿಟಿಗೆ ಬಿಟ್ಟುಕೊಡುವಂತಾಯಿತು. ಹಾಗಾಗಿ ರಾಜ್ಯ ಸರ್ಕಾರ ಶಿವಮೊಗ್ಗ ಸೂಕ್ತಕ್ರಮ ಜರುಗಿಸಲಿದೆ ಎಂದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close