ಮೈಕ್ರೋ ಫೈನಾನ್ಸ್ ವಿಚಾರವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ-ಡಿಕೆಶಿ

 DCM D. K shivakumar said that the government has taken the issue of microfinance seriously and is taking appropriate legal action.


ಸುದ್ದಿಲೈವ್/ಶಿವಮೊಗ್ಗ

ಮೈಕ್ರೋಫೈನಾನ್ಸ್ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಸೂಕ್ತ ಕಾನೂನು ಜಾರಿಗೆ ಕ್ರಮ ಕೈಗೊಳ್ಳುತ್ತಿರುವುದಾಗಿ ಡಿಸಿಎಂ ಡಿ.ಕೆಶಿವಕುಮಾರ್ ತಿಳಿಸಿದ್ದಾರೆ. 

ಅವರು ಶಿವಮೊಗ್ಗದಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಕ್ಕೆ ಏರ್ಪೋರ್ಟ್ ಗೆ ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ. ಮೈಕ್ರೋಫೈನಾನ್ಸ್ ಹಣ ವಸೂಲಾತಿಗೆ ಕಿರುಕುಳ ನೀಡಲು ಅವಕಾಶವಿಲ್ಲ. ಹಾಗಾಗಿ ಸಚಿವ ಸಂಪುಟದಲ್ಲಿ ತೀರ್ಮಾನಿಸುವುದಾಗಿ ತಿಳಿಸಿದರು. 

ಕುಂಭ ಮೇಳದಲ್ಪಿ ಮೃತಪಟ್ಟವರಿಗೆ ಪರಿಹಾರ ನೀಡುವ ಬಗ್ಗೆ ಮೊದಲು ಸತ್ತವರ ಸಂಖ್ಯೆಯನ್ನ ಉತ್ತರ ಪ್ರದೇಶ ಸರ್ಕಾರ ಸರಿಯಾಗಿ ಘೋಷಿಸಲಿ. ನಂತರ ನಾವು ನಮ್ಮ ರಾಜ್ಯದ ಮೃತ ಸಂಖ್ಯೆಯನ್ನ ತರಿಸಿಕೊಂಡು  ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಚಿಂತಿಸಬಹುದು ಎಂದರು. 

ಕನ್ನಡ ಪರ ಹೋರಾಟದ ಕೇಸ್ ಹತೆಗೆದುಕೊಳ್ಳಲು ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು ಸಿಎಂ ಸಿದ್ದರಾಮಯ್ಯನವರು ಕನ್ನಡ ಪರ ಹೋರಾಟಗಾರರು ಅದರಂತೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಕ್ಯಾಬಿನೆಟ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close