An incident took place yesterday where an auto driver tried to commit suicide due to financial harassment. They are enrolled in Megan.
ಸುದ್ದಿಲೈವ್/ಶಿವಮೊಗ್ಗ
ಫೈನಾನ್ಸ್ ಗಳ ಕಿರುಕುಳಕ್ಕೆ ಆಟೋ ಚಾಲಕ ಆತ್ಮಹತ್ತೆಗೆ ಯತ್ನಿಸಿರುವ ಘಟನೆ ನಿನ್ನೆ ನಡೆದಿದೆ. ಫೈನಾನ್ಸ್ ಆಟೋ ಚಾಲಕ ವಿದ್ಯಾನಗರದ ರೈಲ್ವೆ ಗೇಟ್ ಬಳಿ ವಿಷ ಸೇವಿಸಿ ಮಲಗಿದ್ದವರು. ಅವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ಒಂದು ವರ್ಷ ತೀರಿಸಿರುವುದಾಗಿ ವಿಷ ಸೇವಿಸಿದ ಚಾಲಕ ವಿವರಿಸಿದ್ದಾರೆ ಮತ್ತು ಟಿವಿಎಸ್ ಫೈನಾನ್ಸ್ ನಲ್ಲಿ 1.55 ಲಕ್ಷ ಸಾಲ ಮಾಡಿದ್ದು. 25 ಕಂತು ಹಣ ತುಂಬಿದ್ದಾರೆ. ಆದರೂ ಫೈನಾನ್ಸ್ ನವರು ನಿನ್ನೆ ಏಳು ಗಂಟೆಗೆ ಬಂದು ಮನೆ ಕದತಟ್ಟುತ್ತಾರೆ ಎಂದು ಆಟೋ ಚಾಲಕ ಆರೋಪಿಸಿದ್ದಾರೆ. ಈ ತಿಂಗಳು ಕಟ್ಟಿಲ್ಲ. ಹಾಗಾಗಿ ಮನೆಗೆ ಬಂದು ತೊಂದರೆ ಕೊಡುತ್ತಿದ್ದಾರೆ ಎಂದಿದ್ದಾರೆ.
ಪುರಲೆ ನಿವಾಸಿ ನಾಗೇಶ (35) ಆಟೋ ಡ್ರೈವರ್ ಆಗಿದ್ದರು. ಚಾಲಕರಿಗೆ ಎರಡು ಹೆಣ್ಣುಮಕ್ಕಳಿದ್ದಾರೆ. ನಿನ್ನೆ ಸಂಜೆ ಟಾರ್ಚರ್ ತಡೆಯಲಾಗದೆ ಚಿಕ್ಕಲ್ ಫ್ಲೈಓವರ್ ಕೆಳಗೆ ವಿಷ ಸೇವಿಸಿ ಮಲಗಿದ್ದ ನಾಗೇಶ್ ರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ಹೆಂಡತಿ ಹೆರಿಗೆ ವೇಳೆ ನಾಗೇಶ್ ಸಾಲ ಮಾಡಿದ್ದರು. ಫೈನಾನ್ಸ್ ಗೆ ಒಂದಿಷ್ಟು ಕಂತು ತುಂಬಿದ್ದರು. ಈ ತಿಂಗಳು ಸಾಲ ಕಟ್ಟಲು ಸಾಧ್ಯವಾಗಿಲ್ಲ. ಮನೆಗೆ ಯಾವ ಸಮಯದಲ್ಲಿ ಫೈನಾನ್ಸ್ ಅವರು ಕದತಟ್ಟುತ್ತಾರೋ ಗೊತ್ತಿಲ್ಲ ಎಂಬ ಭಯಕ್ಕೆ ನಾಗೇಶ್ ಹೆದರಿ ವಿಷ ಸೇವಿಸಿದ್ದಾರೆ.
ಮೂರು ಬಾರಿ ಚೆಕ್ ಬೌನ್ಸ್ ಮಾಡಿ ಬಡ್ಡಿ ಹೆಚ್ಚಿಗೆ ಆರೋಪ ಮಾಡಲಹಾಕಲಾಗುತ್ತಿದೆ. ನಮಗೆ ಕರೆ ಮಾಡಿ ಅವರೇ ಸಾಲ ನೀಡಿದ್ದಾರೆ. ವಸೂಲಿಗೆ ಬರುವರಿಗೆ ಐಡಿ ಕಾರ್ಡ್ ತೋರಿಸಿ ಎಂದರೆ ನಿನಗೆ ಏನು ತೋರಿಸುವುದಾಗಿ ಗದರಿಸುತ್ತಾರೆ. ಅವರು ಯಾರ ಕಡೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.