![]() |
An elephant from Sakrabile killed a mahout. Mawta Mohammad Ghaus was hit on the head and received two or three stitches. Left hand broken |
ಸುದ್ದಿಲೈವ್/ಶಿವಮೊಗ್ಗ
ಸಕ್ರಬೈಲಿನ ಆನೆಯೊಂದು ಮಾವುತನನ್ನ ಕೆಡವಿದೆ. ಮಾವುತ ಮೊಹಮದ್ ಗೌಸ್ ಗೆ ತಲೆಗೆ ಹೊಡೆತಬಿದ್ದಿದ್ದು ಎರಡು ಮೂರು ಸ್ಟಿಚ್ ಹಾಕಲಾಗಿದೆ. ಎಡ ಕೈ ಮುರಿದಿದೆ
ಆನೆ ಬಿಡಾರದಲ್ಲಿ ಆಲೆ ಆನೆಯೊಂದು ಮದವೇರಿದ ಕಾರಣ ಮಾವುತನನ್ನ ಕೆಡವಿದೆ ಎನ್ನಲಾಗಿದೆ. ಆದರೆ ಅರಣ್ಯ ಅಧಿಕಾರಿಗಳು ಈ ಆನೆಗೆ ಮದವೇರಿರುವುದು ಅಲ್ಲೆಗಳೆದಿದ್ದು ಮಾವುತ ಮೇಲಿಂದ ಬದ್ದಿದ್ದಾನೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಾಧ್ಯಮಗಳಿಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಸಕ್ರೆಬೈಲಿನಲ್ಲಿ ಖಾಯಂ ಕೆಲಸ ಮಾಡುತ್ತಿದ್ದ ಗೌಸ್(38) 21 ವರ್ಷದಿಂದ ಮಾವುತರಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆಲೆ 14 ವರ್ಷದ ಆನೆಯಾಗಿದ್ದು. ಆಲೆಯನ್ನ ನದಿಗೆ ಕರೆದೊಯ್ಯುವಾಗ ಮಾವುತ ನನ್ನ ಕೆಡವಿದೆ ಎಂದು ಹೇಳಲಾಗುತ್ತಿದೆ.
ಆಲೆ ಆನೆ ನೇತ್ರಾವತಿಯ ಮರಿಯಾಗಿದೆ. ಆಲೆಯನ್ನ ನೀರಿಗೆ ಕರೆದೊಯ್ಯುವಾಗ ಸಾರ್ವಜನಿಕರೂ ಇದ್ದರು. ಆದರೆ ಸಾರ್ವಜನಿಕರಿಗೆ ಪೆಟ್ಟಾಗಿರುವ ಬಗ್ಗೆ ಮಾಹಿತಿ ಇಲ್ಲ.
15 ದಿನಗಳ ಹಿಂದೆ ಆಲೆಗೆ ಮದ ಬಂದಿದೆ ಎನ್ನಲಾಗಿದೆ. ಆಲೆಗೆ ಮದ ಬಂದಿದ್ದರೂ ಕ್ಯಾಂಪ್ ಗೆ ಕರೆತಂದಿರುವ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ.