ಡಿಸಿ ರೆವೆನ್ಯೂ ಆಗಿ ಮಂಜುನಾಥ್ ಅಧಿಕಾರ

The appointment of Nagendra, who was the Revenue DC in the Mahanagara Corporation, to Manjunath's place has led to many discussions. Manjunath has taken charge of DC Revenue Department today which has led to many discussions.


ಸುದ್ದಿಲೈವ್/ಶಿವಮೊಗ್ಗ

ಮಹಾನಗರ ಪಾಲಿಕೆಯಲ್ಲಿ ಡಿಸಿ ರೆವೆನ್ಯೂ ಆಗಿದ್ದ ನಾಗೇಂದ್ರ ಅವರ ಸ್ಥಾನಕ್ಕೆ ಮಂಜುನಾಥ್ ಅವರ ನೇಮಕಗೊಂಡಿರುವುದು ಹಲವು ಚರ್ಚೆಗೆ ಕಾರಣವಾಗಿದೆ. ಇಂದು ಮಂಜುನಾಥ್ ಡಿಸಿ ರೆವೆನ್ಯೂ ಅಧಿಕಾರ ವಹಿಸಿಕೊಂಡಿದ್ದು ಹಲವು ಚರ್ಚೆಗೆ ಕಾರಣವಾಗಿದೆ.

ನಾಗೇಂದ್ರ ಅವರಿದ್ದಾಗ ಉತ್ತಮ ಕೆಲಸವಾಗಿತ್ತು ಎಂಬ ಮಾಹಿತಿ ಕೇಳಿಬಂದ ಬೆನ್ನಲ್ಲೇ ಮಂಜುನಾಥ್ ಅಧಿಕಾರ ವಹಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಮಂಜುನಾಥ್ ವಿರುದ್ಧ ಈ ಹಿಂದೆ ಭ್ರಷ್ಠಾಚಾರದ ಆರೋಪ ಕೇಳಿ ಬಂದಿತ್ತು. ಆದರೂ ಡಿಸಿ ರೆವೆನ್ಯೂಗೆ ನಿಯೋಜಿಸಿರುವುದು ಚರ್ಚೆಗೆ ಗ್ರಾಸವಾಗಿದೆ. 

ಅದರಂತೆ ದಿಡೀರ್ ಅಂತ ಪಾಲಿಕೆ ಆಯುಕ್ತರೂ ಸಹ ಅಧಿಕಾರಿಗಳ ಸಭೆ ನಡೆಸಲು ಮುಂದಾಗಿದ್ದಾರೆ. ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಯುತ್ತಿದ್ದು, ಮಂಜುನಾಥ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಸಹಪಾಠಿಗಳು ಎದ್ದು ಹೋಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಆದರೆ ಈ ಬಗ್ಗೆ ಸ್ಪಷ್ಟನೆಯಿಲ್ಲ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close