ಫೆ.17 ರಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ

On February 17, there will be power outage in many parts of the city due to maintenance work and installation of electric poles.

ಸುದ್ದಿಲೈವ್/ಶಿವಮೊಗ್ಗ

ಫೆ.17 ರಂದು ನಿರ್ವಾಹಣ ಕಾಮಗಾರಿ ಮತ್ತು ವಿದ್ಯುತ್ ಕಂಬಗಳ ಅಳವಡಿಕೆಯಿಂದಾಗಿ ನಗರದ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.‌

ಆಲ್ಕೊಳ ವಿ.ವಿ.ಕೇಂದ್ರದಲ್ಲಿ ಬ್ಯಾಂಕ್-3ರ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ. 17 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.30 ರವರಗೆ ವಿನೋಬನಗರ, ಮೈತ್ರಿ ಅಪಾರ್ಟ್ಮೆಂಟ್, 100 ಅಡಿರಸ್ತೆ, 60 ಅಡಿರಸ್ತೆ, ಜೈಲ್ ರಸ್ತೆ, ಶುಭಮಂಗಳ ಹಿಂಭಾಗ ಮತ್ತು ಮುಂಭಾಗ, ಪೊಲೀಸ್ ಚೌಕಿ, ಮೇಧಾರ ಕೇರಿ, ಫ್ರೀಡಂಪಾರ್ಕ್ ಎದುರು, ರಾಜೇಂದ್ರನಗರ, ರವೀಂದ್ರನಗರ, ಗಾಂಧಿನಗರ, ವೆಂಕಟೇಶನಗರ, ಸವಳಂಗರಸ್ತೆ, ಆಲ್ಕೋಳ, ಮಂಗಳಾ ಮಂದಿರ ರಸ್ತೆ, ಮುನಿಯಪ್ಪ ಲೇಔಟ್, ಸಂಗೋಳ್ಳಿರಾಯಣ್ಣ ಲೇಔಟ್, ಆದರ್ಶನಗರ, ಸೋಮಿನಕೊಪ್ಪ, ಹೊಂಗಿರಣ ಲೇಔಟ್, ಜೆ.ಹೆಚ್.ಪಟೇಲ್ ಬಡಾವಣೆ ಎ ಯಿಂದ ಇ ಬ್ಲಾಕ್, ಶಿವಸಾಯಿ ಕಾಸ್ಟಿಂಗ್, ಪ್ರೆಸ್ ಕಾಲೋನಿ, ಬೈರನಕೊಪ್ಪ, ಶಾರದಮ್ಮ ಲೇಔಟ್, ದೇವರಾಜ್ ಅರಸ್ ಬಡಾವಣೆ, ಪಿ ಅಂಡ್ ಟಿ ಕಾಲೋನಿ, ಸೂರ್ಯ ಲೇಔಟ್, ಗೆಜ್ಜೇನಹಳ್ಳಿ, ಗೆಜ್ಜೇನಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ದೇವಕಾತಿಕೊಪ್ಪ ಇಂಡಸ್ಟ್ರೀಯಲ್ ಏರಿಯಾ, ಶರ್ಮ ಲೇಔಟ್, ಬಸವನಗಂಗೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. 

ಕಂಬಗಳ ಅಳವಡಿಕೆ-ವಿದ್ಯುತ್ ವ್ಯತ್ಯಯ

ಶಿವಮೊಗ್ಗ ನಗರದ ಉಪವಿಭಾಗ-2ರ ವ್ಯಾಪ್ತಿಯಲ್ಲಿ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾಮಗಾರಿ ಇರುವುದರಿಂದ ಫೆ.17 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ಲಷ್ಕರ್ ಮೊಹಲ್ಲಾ, ಗಾಂಧಿಬಜಾರ್, ಎಲೆರೇವಣ್ಣ ಕೇರಿ, ಅನವೇರಪ್ಪ ಕೇರಿ, ನಾಗಪ್ಪಕೇರಿ, ಸಾರ್ವಕರ್ ನಗರ, ತಿರುಪಳ್ಳಯ್ಯನ ಕೇರಿ ಮೀನು ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close