ಸುದ್ದಿಲೈವ್/ಭದ್ರಾವತಿ
ಭದ್ರಾವತಿಯ ಬೇಕರಿ ಮಾಲೀಕನ ವಿರುದ್ಧ ಅಟ್ರಾಸಿಟಿ ಮತ್ತು ಪೋಕ್ಸೋ(pocso) ಕಾಯ್ದೆ ಅಡಿ ದೂರು ದಾಖಲಾಗಿದ್ದು, ಮಾಲೀಕನಿಗೆ ನ್ಯಾಯಾಂಗ ಬಂಧನವಾಗಿದೆ. (Judicial custody)
ಭದ್ರಾವತಿಯಲ್ಲಿ ಬೇಕರಿ ನಡೆಸುತ್ತಿದ್ದ ಮಾಲೀಕರ ಪತ್ನಿ ತನ್ನ ಸಹೋದರಿ ಮದುವೆಗೆಂದು ಹೈದರಾಬಾದ್ ಗೆ ಹೋಗಿದ್ದ ವೇಳೆ ಮಗಳ ಸ್ನೇಹಿತಳಿಗೆ ಮನೆಯಲ್ಲಿ ಮಲಗಲು ತಾಯಿ ತಿಳಿಸಿ ಹೋಗಿದ್ದರು. ಮನೆಗೆ ಬಂದ ಅಪ್ರಾಪ್ತೆಯನ್ನ ಮಗಳ ತಂದೆ ಲೈಂಗಿಕವಾಗಿ ಬಳಸಿಕೊಂಡು ಆಕೆ ಗರ್ಭ ಧರಿಸುವಂತೆ ಮಾಡಿರುವ ಆರೋಪ ಕೇಳಿ ಬಂದಿದೆ.
ಅಪ್ರಾಪ್ತೆಯು ಗರ್ಭಧರಿಸಿದ್ದನ್ನ ಮನೆಯಲ್ಲಿ ಗ್ಯಾಸ್ಟ್ರಿಕ್ ಎಂದು ಹೇಳಿದ್ದಾಳೆ. ತಾಯಿಗೆ ಅನುಮಾನ ಬಂದು ಆಸ್ಪತ್ರೆಗೆ ತೋರಿಸಿದಾಗ ಗರ್ಭಾವತಿ ಆಗಿರೋದು ಕನ್ಫರ್ಮ್ ಆಗಿದೆ.
ಇದೆ ವೇಳೆ ಮಾಲೀಕರು ಊರು ಬಿಡಲು ವ್ಯವಸ್ಥೆ ಮಾಡಿಕೊಂಡಿದ್ದು ಪತ್ನಿಯ ಊರಾದ ಹೈದರಾಬಾದ್ ಗೆ ಹಾರಲು ವ್ಯವಸ್ಥೆ ಮಾಡಿಕೊಂಡಿದ್ದ. ಈ ವೇಳೆ ಪೊಲೋಸರಿಗೆ ಲಾಕ್ ಆಗಿದ್ದಾನೆ.