![]() |
A special train from Shimoga left the station today at 4-35 pm to attend the historic Kumbh Mela at Triveni Sangam in Prayagraj, Uttar Pradesh. |
ಸುದ್ದಿಲೈವ್/ಶಿವಮೊಗ್ಗ
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಐತಿಹಾಸಿಕ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗದಿಂದ ವಿಶೇಷ ರೈಲು ಇಂದು ಸಂಜೆ 4-35 ಕ್ಕೆ ನಿಲ್ದಾಣ ಬಿಟ್ಟಿದೆ.
ಜಿಲ್ಲೆಯ ಜನರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದ್ದು, ಸಂಸದ ಬಿ ವೈ ರಾಘವೇಂದ್ರ ಈ ರೈಲಿಗೆ ಹಸಿರು ನಿಶಾನೆಯನ್ನ ತೋರಿದರು. ಈ ಸಂದರ್ಭದಲ್ಲಿ ಪರಿಷತ್ ಸದಸ್ಯ ಡಾಕ್ಟರ್ ಧನಂಜಯ್ ಸರ್ಜಿ ಸೇರಿದಂತೆ ಬಿಜೆಪಿ ಜಿಲ್ಲಾಧ್ಯಕ್ಷ ಏನ್ ಕೆ ಜಗದೀಶ್ ಉಪಸ್ಥಿತರಿದ್ದರು. ವಿಶೇಷ ರೈಲಿನಲ್ಲಿ, ಈ 1200 ಜನ ಭಕ್ತರು ಪ್ರಯಾಗ್ ರಾಜ್ ಗೆ ಪ್ರಯಾಣ ಬೆಳೆಸಿದರು....
ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿ, ಕಟ್ಟಕಡೆಯ ವ್ಯಕ್ತಿಯೂ ಸಹ ಪ್ರಯಾಗ್ ರಾಜ್ ನಲ್ಲಿ ಭಾಗಿಯಾಗಬೇಕೆಂಬ ಪ್ರಧಾನಿ ಮೋದಿಯವರ ಕನಸೇನಿತ್ತು, ಇಂದು ಪೂರ್ತಿಯಾಗುತ್ತಿದೆ. 1200 ಜನ ಪ್ರಯಾಗ್ ರಾಜ್ ಗೆ ಪ್ರಯಾಣ ಬೆಳೆಸಿದ್ದು ಅವರನ್ನ ನಿಲ್ದಾಣಕ್ಕೆ ಬಿಟ್ಟುಹೋಗಲು ಅವರ ಕುಟುಂಬ ಹಬ್ಬದ ರೀತಿಯಲ್ಲಿ ಬಂದು ಬಿಟ್ಟುಹೋಗಿದ್ದಾರೆ ಎಂದು ತಿಳಿಸಿದರು.
46 ಗಂಟೆಯ ಪ್ರಯಾಣವಾಗಲಿದೆ. ರೈಲಿನಲ್ಲಿ ಕುಟುಂಬ, ವೃದ್ಧರು ಇತರರು ತೆರಳಲು ಇದು ಅನುಕೂಲವಾಗಿದೆ. ಶಿವಮೊಗ್ಗದ ಜನರಿಗೆ ಪ್ರಯಾಗ್ ರಾಜ್ ಗೆ ತೆರಳಲು ಅನುಕೂಲ ಮಾಡಿಕೊಟ್ಟ ಪ್ರಧಾನಿ ಹಾಗೂ ರೈಲ್ವೆ ಸಚಿವರಿಗೆ ತುಂಬು ಧನ್ಯವಾದಗಳು ಎಂದು ಹೇಳಿದರು.