ಎಟಿಎಂ ನಲ್ಲಿ ವೃದ್ಧನಿಗೆ ವಂಚಿಸಿದ ಪ್ರಕರಣ-ಆರೋಪಿಗಳ ಬಂಧನ


ಸುದ್ದಿಲೈವ್/ಶಿವಮೊಗ್ಗ

ಅಕ್ಟೋಬರ್ - 2024ರಲ್ಲಿ ಕಾರ್ಗಲ್ ಟೌನ್ ಕೆನರಾ ಬ್ಯಾಂಕ್(canara Bank) ಎಟಿಎಂ(ATM) ನಲ್ಲಿ  ವೃದ್ದನನ್ನು ವಂಚಿಸಿ, ಅವರಿಂದ ಎಟಿಎಂ ಕಾರ್ಡ್ ನ ಪಿನ್ ಪಡೆದು ರೂ 1,49,999/- ಹಣವನ್ನು ಡ್ರಾ ಮಾಡಿಕೊಂಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕಾರ್ಗಲ್‌ ಪೊಲೀಸ್‌ ಠಾಣೆಯಲ್ಲಿ ಗುನ್ನೆ ಸಂಖ್ಯೆ 0006/2025 ಕಲಂ 318(4) ಬಿ.ಎನ್.ಎಸ್ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಎಸ್ಪಿ ಮಿಥುನ್ ಕುಮಾರ್ ಜಿ. ಕೆ. ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಮತ್ತು ಕಾರಿಯಪ್ಪ ಎ. ಜಿ, ರವರ ಮಾರ್ಗದರ್ಶನದಲ್ಲಿ ಸೆನ್ ಠಾಣೆಯ ಗೋಪಾಲಕೃಷ್ಣ ಟಿ ನಾಯಕ್ ಮೇಲ್ವಿಚಾರಣೆಯಲ್ಲಿ ಸಾಗರದ ಸಿಪಿಐ  ಸಂತೋಷ್ ಶೆಟ್ಟಿ, ನೇತೃತ್ವದಲ್ಲಿ, ಕಾರ್ಗಲ್ ಠಾಣೆಯ ಪಿಎಸ್ಐ ಹೊಳೆಬಸಪ್ಪ ಹೋಳಿ  ಮತ್ತು ಸಿಬ್ಬಂದಿಗಳಾದ ಹೆಚ್.ಸಿ ಸನಾವುಲ್ಲ, ಪಿಸಿ ವಿಕಾಸ್, ವಿಶ್ವನಾಥ, ಕೃಷ್ಣಮೂರ್ತಿ, ಮೆಹಬೂಬ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ತನಿಖಾ ತಂಡವು  ಫೆ.11 ರಂದು ಪ್ರಕರಣದ ಆರೋಪಿಗಳಾದ 1) ಜೋಗಿನ್ ದಾರ್, 29 ವರ್ಷ, ಕೃಷ್ಣಗೃಹ ಮೊಹಂ ರೋಹನ್ ತಲ್ ಜಿಲ್ಲೆ, ಹರಿಯಾಣ 2) ಮುಖೇಶ್, 48 ವರ್ಷ, ಬುಡಾಬಾಬ್ ಬಸ್ತಿ ಭವಾನಿ ರಸ್ತೆ ಜಿಂದ್ ಹರಿಯಾಣ ರವರುಗಳನ್ನು ದಸ್ತಗಿರಿ ಮಾಡಿ, ಆರೋಪಿಗಳಿಂದ ಕಾರ್ಗಲ್ ಪೊಲೀಸ್ ಠಾಣೆ ಮತ್ತು ಶಿರಾಳಕೊಪ್ಪ ಪೊಲೀಸ್ ಠಾಣೆಗಳಲ್ಲಿ ವರದಿಯಾದ ಸಾರ್ವಜನಿಕರನ್ನು ವಂಚಿಸಿ ಎಟಿಎಂ ನಿಂದ ಹಣವನ್ನು ತೆಗೆದುಕೊಂಡು ಹೋದ ಎರಡು ಪ್ರಕರಣಗಳಿಗೆ ಸಂಬಂಧಿಸಿದ ರೂ 1,00,000/- ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು 2,00,000/- ರೂ ಗಳ ರಾಯಲ್ ಎನ್ ಫೀಲ್ಡ್ ಹಂಟರ್ ಬೈಕ್ ಅನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close