Suddilive || Sagar
ಲೋಡ್ ಶೆಡ್ಡಿಂಗ್ ಸಮಸ್ಯೆ ಬಗೆಹರಿಸುವಂತೆ ಅವಿನಹಳ್ಳಿ ಮೆಸ್ಕಾಂ ಕಛೇರಿ ಎದುರು ಗ್ರಾಮಸ್ಥರ ಪ್ರತಿಭಟನೆ! Strike for load shedding
ತಾಲೂಕಿನ ಅವಿನಹಳ್ಳಿ ಗ್ರಾಮದಲ್ಲಿ ಇರುವ ಮೆಸ್ಕಾಂ ಇಲಾಖೆಯ ಕಾರ್ಯ ಮತ್ತು ಪಾಲನೆ ಶಾಖೆ ಕಛೇರಿಯ ಎದುರು ಅವಿನಹಳ್ಳಿ ಮತ್ತು ಕೋಳೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.
ಅವಿನಹಳ್ಳಿ ಮತ್ತು ಕೋಳೂರು ಈ ಎರಡೂ ಪಂಚಾಯತಿ ವ್ಯಾಪ್ತಿಯಲ್ಲಿ ತೀವ್ರವಾದ ವಿದ್ಯುತ್ ಅಭಾವವಿದ್ದು ಶರಾವತಿ ಮುಳಗಡೆಯ ಸಂತೃಸ್ತರೇ ಜಾಸ್ತಿ ಇದ್ದರೆ ಸಾವಿರಾರು ಎಕರೆ ಭೂಮಿ ಕಳೆದುಕೊಂಡಿದ್ದು ನಮಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕಾಗಿ ಹಾಗೂ ಲೋಡ್ ಶೆಡ್ಡಿಂಗ್ ಸಮಸ್ಯೆ ಬಗೆಹರಿಸಿ ಹಾಗೂ ದಿನದ 24 ಗಂಟೆ ಶರಾವತಿ ಸಂತೃಸ್ತರ ಜೀವನೋಪಾಯಕ್ಕಾಗಿ ಅಗತ್ಯವಾದ ವಿದ್ಯುತ್ ಪೂರೈಸಬೇಕು ಹಾಗೂ ಗಿಡ್ಡನ್ನು ಆವಿನಹಳ್ಳಿ ಭಾಗದಲ್ಲಿ ನಿರ್ಮಿಸಿ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು ಹಾಗೂ ಶಾಖಾ ಕಛೇರಿಯಲ್ಲಿ ಅಗತ್ಯವಾದ ಕಾರ್ಯನಿರ್ವಹಿಸುವ TC ಗಳನ್ನು ಹೆಚ್ಚುವರಿ ದಾಸ್ತಾನು ಇಟ್ಟಿರಬೇಕು ಹಾಗೂ ಅತ್ಯಂತ ಹಳೆಯದಾದ ವೈರ್‌ಗಳನ್ನು ಬದಲಾಯಿಸಬೇಕು ಹಾಗೂ ಆವಿನಹಳ್ಳಿ ಟೌನಿಗೆ ಪ್ರತ್ಯೇಕ TC ಅತಿ ಶೀಘ್ರದಲ್ಲಿ ಅಳವಡಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುವ ಮೂಲಕ ಮನವಿ ಸಲ್ಲಿಸಿದರು.
ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರಶೇಖರ್ ಮನವಿ ಸ್ವೀಕರಿಸಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
Conclusion-Load shedding, Strike