Suddilive || Bhadravathi
Father-in-law was brutally Murdered by his sun in law. ಮಾವನನ್ನ ಕೊಲೆಗೈದ ಅಳಿಯ
ಕುಡಿಯಲು ಮಾವ ಹಣಕೊಡ್ತಾಯಿರಲಿಲ್ಲ ಎಂಬ ಕಾರಣಕ್ಕೆ ಮಾವನನ್ನ ಕ್ರಿಕೆಟ್ ಬ್ಯಾಟ್ ನಲ್ಲಿ ಹೊಡೆದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಶಿವರಾತ್ರಿ ದಿನ ಹನುಮಂತ ಪುರದಲ್ಲಿ ಮಾವನನ್ನ ಅಳಿಯನೇ ಕೊಂದಿದ್ದಾನೆ.
ಹನುಮಂತಾಪುರದಲ್ಲಿ ರಾಜಶೇಖರಪ್ಪನವರಿಗೆ ಮೂವರು ಹೆಣ್ಣು ಮಕ್ಕಳಿದ್ದರು. ಒಬ್ವರು ಅಂಕಿತ, ಅಕ್ಷತಾ ಮತ್ತು ಅರ್ಪಿತ ಎಂಬುವರನ್ನ ಮದುವೆ ಮಾಡಿಕೊಡಲಾಗಿತ್ತು. ಅಕ್ಷತಾಳ ಗಂಡ ಮಂಜುನಾಥ್ ಮದುವೆಯಾಗಿದ್ದ. ಮದುವೆಯಾದಾಗಿನಿಂದ ಮಂಜುನಾಥ್ ಪತ್ನಿಯೊಂದಿಗೆ ಸಂಸಾರ ಸರಿಯಾಗಿ ಮಾಡುತ್ತಿರಲಿಲ್ಲ.
ಮದ್ಯ ಸೇವನೆ ವಿಚಾರದಲ್ಲಿ ಮಂಜುನಾಥ್ ಪತ್ನಿ ಮತ್ತು ಅಳಿಯನಿಗೆ ಹಿಂಸೆ ನೀಡುತ್ತಿದ್ದ. ಮಾವ ರಾಜಶೇಖರಪ್ಪ ಅಡುಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮಂಜುನಾಥ್ ಪದೇ ಪದೇ ಪತ್ನಿಗೆ ನಿನ್ನ ತಂದೆ ಕುಡಿಯಲು ಹಣಕೊಡುತ್ತಿಲ್ಲ. ಒಂದಲ್ಲ ಒಂದು ದಿನ ಕೊಲೆ ಮಾಡ್ತೀನಿ ಎಂದು ಹೇಳುತ್ತಿದ್ದ. ಈ ವಿಷಯ ಮನೆಯವರಿಗೆ ಗೊತ್ತಿದ್ದರೂ ಅಳಿಯ ಕುಡಿದ ಮತ್ತಲ್ಲಿ ಈ ರೀತಿ ಹೇಳಿಕೆ ಕೊಡುತ್ತಿದ್ದ ಎಂದು ನಿರ್ಲಕ್ಷಿಸಿದ್ದರು.
ಮೊನ್ಬೆ ಶಿವರಾತ್ರಿ ದಿನ ದೇವಸ್ಥಾನಕ್ಕೆ ಹೋಗಿ ಬಂದಿದ್ದ ರಾಜಶೇಖರ್ ನನ್ನ ಅಳಿಯ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಮಾವನನ್ನ ಬಚ್ಚಲಿನ ತೊಟ್ಟಿಯಲ್ಲಿ ಹೊಡೆದು ಕೊಲೆ ಮಾಡಿದ್ದಾನೆ. ಮನೆಯ ಹಾಲ್ ನಲ್ಲಿ ಹೊಡೆದು ಕೊಲೆ ಮಾಡಿ ಬಚ್ಚಲಿನ ತೊಟ್ಟಿಗೆ ಬಿಸಾಕಿ ಹೋಗಿತುವುದಾಗಿ ತಿಳಿದು ಬಂದಿದೆ. ಮಗಳು ಅಕ್ಷತಾ ಶಿವರಾತ್ರಿಗೆ ಕರೆಯಲು ಹೋದಾಗ ತಂದೆಯನ್ನ ಹೊಡೆದು ಕೊಲೆ ಮಾಡಿರುವುದು ತಿಳಿದು ಬಂದಿದೆ.
ಶ್ರೀಗಂಧ ಪ್ರಕರಣದಲ್ಲಿ ಅಂದರ್ ಆಗಿದ್ದ ಅಳಿಯ
ಇತ್ತೀಚೆಗೆ ಮನೆಯಲ್ಲಿ ಶ್ರೀಗಂಧದ ತುಂಡು ಇಟ್ಟುಕೊಂಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಅರಣ್ಯ ಇಲಾಖೆಯಿಂದ ಆರೋಪಿ ಮಂಜುನಾಥ್ ಜೈಲು ಸೇರಿದ್ದ. ಕಳೆದ 15 ದಿನಗಳ ಹಿಂದಷ್ಟೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಹೊರಗೆ ಬಂದಿದ್ದ ಅಳಿಯ ಮಾವನ ಮೇಲೆ ಮುಗಿ ಬಿದ್ದು ಕೊಲೆ ಮಾಡಿದ್ದಾನೆ.