suddilive || Shivamogga
sriram sense founder pramod Muthalik was restricted by shivamogga police not to enter into the city. He was Noticed by district administration.
ನಾಳೆ ಸರ್ಕಾರಿ ನೌಕರರ ಭವನದಲ್ಲಿ ಲವ್ ಜಿಹಾದ್ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದ್ದ ಕಟ್ಟರ್ ಹಿಂದುತ್ವವಾದಿ ಪ್ರಮೋದ್ ಮುತಾಲಿಕ್ ಗೆ ಜಯನಗರ ಪೊಲೀಸರು ತಡೆ ಹಿಡಿದು ನೋಟೀಸ್ ನೀಡಿದ್ದಾರೆ.
ನಾಳೆ ಲವ್ ಜಿಹಾದ್ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಹಿನ್ನಲೆಯಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದ ಪ್ರಮೋದ್ ಮುತಾಲಿಕ್ ರನ್ನ ಹೊನ್ನಾಳಿ ರಸ್ತೆ ಚೌಡೇಶ್ವರಿ ದೇವಾಲಯದ ಬಳಿ ತಡೆ ಹಿಡಿದು ಜಯನಗರ ಪೊಲೀಸರು ನಗರಕ್ಕೆ ಪ್ರವೇಶಿಸದಂತೆ ವಶಕ್ಕೆ ಪಡೆಯಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಈ ವೇಳೆ ಪೊಲೀಸರಿಗೂ ಮತ್ತು ಮುತಾಲಿಕ್ ಮತ್ತು ಹಿಂದೂ ಸಂಘಟನೆಯವರ ನಡುವೆ ಬಿರುಸಿನ ಮಾತುಕತೆಗಳು ನಡೆದಿದೆ.
ಸ್ಥಳಕ್ಕೆ ಶಾಸಕ ಚೆನ್ನಿ ಧಾವಿಸಿದ್ದಾರೆ. ಬಂಧಿಸಲು ಮುಂದಾದ ಪೊಲೀಸರಿಗೆ ನೋಟೀಸ್ ನೀಡದೆ ಬಂಧಿಸುವುದು ಹೇಗೆ ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ. ಈ ಹಿನ್ನಲೆಯಲ್ಲಿ ಮುತಾಲಿಕ್ ಅವರಿಗೆ ನಗರಕ್ಕೆ ಪ್ರವೇಶಿಸದಂತೆ ನೋಟೀಸ್ ನೀಡಲಾಗಿದೆ.
ಈ ಕುರಿತು ಮೊಬೈಲ್ ಮೂಲಕವೇ ಸುದ್ದಿಲೈವ್ ಗೆ ಮಾತನಾಡಿದ ಕಟ್ಟರ್ ಹಿಂದುತ್ವ ವಾದಿ ಪ್ರಮೋದ್ ಮುತಾಲಿಕ್ ಶಿವಮೊಗ್ಗದಲ್ಲಿ ನನ್ನ ವಿರುದ್ಧ ಒಂದೂ ಪ್ರಕರಣಗಳಿಲ್ಲ. ಆದರೂ ಬಂಧಿಸುತ್ತಿರುವ ಕ್ರಮವನ್ನಪ್ರಶ್ನಿಸಿದ್ದೇನೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಪೊಲೀಸರ ಮೂಲಕ ನೋಟೀಸ್ ನೀಡಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡಿ ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿಯೇ ಲವ್ ಜಿಹಾದ್ ಪುಸ್ತಕ ಬಿಡುಗಡೆ ಮಾಡುವೆ ಎಂದು ತಿಳಿಸಿದ್ದಾರೆ.
ಈಗಾಗಲೇ ನಾಲ್ಕು ಜಿಲ್ಲೆಯಲ್ಲಿ ಪುಸ್ತಕ ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಲವ್ ಜಿಹಾದ್ ಕುರಿತು ಎರಡನೇ ಆವೃತ್ತಿ ಬಿಡುಗಡೆ ಮಾಡಲೆಂದು ಶಿವಮೊಗ್ಗಕ್ಕೆ ಬರುವ ವೇಳೆ ಪೊಲೀಸರು ತಡೆದಿದ್ದಾರೆ. ನಾಳೆಯೇ ಈ ಕಾನೂನು ಹೋರಾಟಕ್ಕೆ ಜಯ ಸಿಗುವುದಿಲ್ಲ. ನಾಳೆ ಒಂದು ಖಾಸಗಿ ಕಾರ್ಯಕ್ರಮ ಮತ್ತು ಸುದ್ದಿಗೋಷ್ಠಿಯನ್ನ ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹಿಂದೂಗಳ ಜಾಗೃತಿಗಾಗಿ ಪುಸ್ತಕ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದೆ.
ಇದು ಒಳಾಂಗಣ ಸಭಾಂಗಣದಲ್ಲಿ ಮುಗಿಯುವ ಕಾರ್ಯಕ್ರಮವನ್ನ ಇಲಾಖೆ ಉದ್ದೇಶ ಪೂರಕವಾಗಿ ತಡೆ ಹಿಡಿಯಲಾಗುತ್ತಿದೆ. ಕಾಂಗ್ರೆಸ್ ನ ದುರಾಡಳಿತ ಎದ್ದು ಕಾಣುತ್ತಿದೆ. ಈಗ ಶಿವಮೊಗ್ಗದಲ್ಲಿ ಊಟ ಮುಗಿಸಿ ಚಿಕ್ಕಮಗಳೂರಿಗೆ ತೆರಳುತ್ತಿರುವುದಾಗಿ ತಿಳಿಸಿದರು. ಇಲ್ಲಿಗೆ ಮುತಾಲಿಕ್ ಬಂಧನವಾಗಿಲ್ಲ. ನೋಟೀಸ್ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.