ಅಂಬ್ಳಿಗೋಳದ ಜಲಾಶಯದಲ್ಲಿ ಹುಲಿಯ ಮೃತದೇಹ ಪತ್ತೆ-ಹುಲಿಯ ಸಾವು ಮತ್ತು ಮರಣೋತ್ತರ ಪರೀಕ್ಷೆಯ ಸುತ್ತ ಅನುಮಾನದ ಹುತ್ತ!?


The dead body of a tiger was found in the back water of Ambaligola reservoir of Birapura village under Survey No. 59, Sagar Forest Division, Ambaligola Zone, Shivamogga.

ಸುದ್ದಿಲೈವ್/ಸಾಗರ

ಶಿವಮೊಗ್ಗ, ಸಾಗರ ಅರಣ್ಯ ವಿಭಾಗದ, ಅಂಬಳಿಗೋಳ ವಲಯ ವ್ಯಾಪ್ತಿಯ ಸರ್ವೆ ನಂಬರ್ 59ರ ,ಬೈರಾಪುರ ಗ್ರಾಮದ  ಅಂಬಲಿಗೋಳ ಜಲಾಶಯದ ಹಿನ್ನೀರಿನಲ್ಲಿ ಹುಲಿಯ ಮೃತ ದೇಹಪತ್ತೆಯಾಗಿದ್ದು, ಈ ಶವ ಪತ್ತೆಯಿಂದಾಗಿ ಹಲವು ಅನುಮಾನಗಳು ಶಂಕೆ ವ್ಯಕ್ತವಾಗಿದೆ‌.    

ಸೋಮವಾರ ದಿನಾಂಕ 17/2/2025ರ ಸಂಜೆ ಸುಮಾರು ಏಳು ಗಂಟೆಗೆ ಹುಲಿಯ ಮೃತದೇಹ ಜಲಾಶಯದಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಇಲಾಖೆಗೆ ಮಾಹಿತಿ ನೀಡಿದ್ದರು, ಹುಲಿಯ ಮೃತದೇಹ ನೀರಿನಲ್ಲಿ ತೇಲುತ್ತಿತ್ತು. ಹುಲಿಯು ಅಂದಾಜು 8 ರಿಂದ 10 ವರ್ಷ ಗಂಡು ಹುಲಿ ಎಂದು ಗುರುತಿಸಲಾಗಿದೆ. 

ಹುಲಿಯನ್ನು ಗುಂಡು ಹೊಡೆದು ಕೊಂದು ಅಂಬಾಳಿಗೋಳ ಜಲಾಶಯದ ಹಿನ್ನೀರು ಪ್ರದೇಶಕ್ಕೆ ಎಸೆದು ಹೋಗಿರುವ ಶಂಕೆ ವ್ಯಕ್ತವಾಗುತ್ತಿದೆ. ಕಳೆದ 50 ವರ್ಷದಲ್ಲಿ ಇಲ್ಲಿ ಹುಲಿಯ ಆವಾಸಸ್ಥಾನ ಇಲ್ಲ, ಇಲ್ಲಿ ಹುಲಿಗಳು ಯಾರಿಗೂ ಕಂಡು ಬಂದಿರಲಿಲ್ಲ, ಈ ಭಾಗದಲ್ಲಿ ಹುಲಿಗಳು ಇಲ್ಲದೇ ಇರುವುದು ಈಗ  ಜಲಾಶಯದ ಹಿನ್ನೀರಿನಲ್ಲಿ  ಕಂಡು ಬಂದಿರುವುದು ಶೆಟ್ಟಿಹಳ್ಳಿ ಅಥವ ಭದ್ರಾ ಅಭಯಾರಣ್ಯದಿಂದ ಬಂದಿರ ಬಹುದು ಎಂದು ಹೇಳಲಾಗುತ್ತಿದೆ.  ಉಂಬಲೇಬೈಲು ,ಲಕ್ಕವಳ್ಳಿ ಅರಣ್ಯದಲ್ಲಿ  ಹುಲಿಯನ್ನು ಗುಂಡು ಹಾರಿಸಿ ಕೊಂದು ಇಲ್ಲಿಗೆ ಎಸೆದು ಹೋಗಿರಬಹುದೆಂಬ ಅನುಮಾನ ಕಾಡುತ್ತಿದೆ .

ಗುಂಡಿನ ಗುರುತು ಪತ್ತೆ

ಹುಲಿಯ ಮರಣೋತ್ತರ ಪರೀಕ್ಷೆ ಮಂಗಳವಾರ ನಡೆದಿದ್ದು ಪಶು ವೈದ್ಯ ಮತ್ತವರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆದಿದೆ.  ಹುಲಿಯ ಕುತ್ತಿಗೆ,ಗಂಟಲು ಭಾಗದಲ್ಲಿ ಗುಂಡು, ಚರೆ ತಗುಲಿದ ಹೆಚ್ಚು ತೂತದ ಗುರುತುಗಳು ಪತ್ತೆಯಾಗಿವೆ. ಕಾಡು ಹಂದಿ, ಜಿಂಕೆ ಬೇಟೆ ಆಡಲು ಬಳಸುವ ನಾಡ ಬಂದೂಕು ಬಳಸಿ  ಚರೇ ,ಮದ್ದು ಗುಂಡು ಹಾಕಿ  ಬಂದೂಕಿನಿಂದ ಈ ಹುಲಿಗೆ ಹೊಡೆದು ಹಾಕಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. 

ಮರಣೋತ್ತರ ಪರೀಕ್ಷೆಯೂ ಅನುಮಾನ

ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಗುಂಡು ಪತ್ತೆ ಹಚ್ಚಲು  ಲೋಹ ಶೋಧಾಕ ಉಪಕರಣ ಬಳಸಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.  ಇದು ಕೂಡ ಅನುಮಾನಕ್ಕೆ ಕಾರಣವಾಗಿದೆ.ಪೊಲೀಸ್ , ಬಾಲಿಸ್ಟಿಕ್ ತಜ್ಞರು(balistic expert) ಇರಲಿಲ್ಲ, ಗುಂಡು ಮತ್ತು ಲೋಹ ಶೋಧಕ ತಜ್ಞರು ಯಾರು ಇರಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. 

ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ ಪ್ರಕಾರ ,ಹುಲಿ ಮರಣೋತ್ತರ ಪರೀಕ್ಷೆ ಸಮಯದಲ್ಲಿ ಹುಲಿ ತಜ್ಞರು ಅಥವಾ ಹುಲಿ ವಿಜ್ಞಾನಿಗಳು ಇರಬೇಕು,ಮತ್ತು ವನ್ಯಜೀವಿ ತಜ್ಞರು ಇರಬೇಕು,ಸ್ವತಂತ್ರ ತನಿಖೆ ತಂಡ ಇರಬೇಕಿತ್ತು.ಅದರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ತಜ್ಞತೆ ಇಲ್ಲದ  ಏನ್ ಜಿ ಓ ಒಂದನ್ನು  ಕರೆದು ಬೇಕೋ ಬೇಡವು ಎನ್ನುವ ಹಾಗೆ ಸ್ಥಳ ಮಹಜರ್ ನಡೆಸಿ ಹುಲಿ ಹತ್ಯೆಯನ್ನ ಮುಚ್ಚಿಹಾಕುವ ಹುನ್ನಾರ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂಬ ಆರೋಪ ಪರಿಸರ ವಾದಿಗಳಿಂದ ಕೇಳಿ ಬರುತ್ತಿದೆ. 

ಯಾವುದೇ ಮಾದ್ಯಮ ಪ್ರತಿನಿಧಿಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ.ಹುಲಿಯ ಛಾಯ ಚಿತ್ರಗಳನ್ನು ಮಾದ್ಯಮಕ್ಕೆ  ಎಲ್ಲೂ ನೀಡಿಲ್ಲ, ಇದು ಇಲಾಖೆ ತರಾತುರಿಯಲ್ಲಿ  ಮರಣೋತ್ತರ ಪರೀಕ್ಷೆ ನಡೆಸಿ ಗುಂಡು ಹೊಡೆದು ಸತ್ತ ಮೃತ  ಹುಲಿಯನ್ನು ಸುಟ್ಟು ಹಾಕಿದ್ದಾರೆ, ಅಧಿಕಾರಿಗಳು ಇದನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ ಎಂಬುದು ಆರೋಪದ ಮತ್ತೊಂದು ಭಾಗವಾಗಿದೆ. 

ರಾಜ್ಯದಲ್ಲಿ ಹುಲಿಗಳ ಮಾರಣ ಹೋಮ

ಕಳೆದ ವಾರ ಹಾಸನ ಅರಣ್ಯ ವಿಭಾಗದ ಹಳೇಬೀಡು ವ್ಯಾಪ್ತಿಯಲ್ಲಿ ರೇಡಿಯೋ ಕಾಲರ್ ಹಾಕಿದ್ದ ಹುಲಿಯೊಂದು ರಂಗನಾಥಪುರ ಕೆರೆಯಲ್ಲಿ ಮೃತ ದೇಹ ತೇಲುತ್ತಿತ್ತು, ಅಲ್ಲೂ ಕೂಡ ಎಲ್ಲಿಯೂ ಕಾಡು ಇಲ್ಲ, ಹುಲಿಯು ಇರಲಿಲ್ಲ. ಈಗ ಇದೇ ರೀತಿ ಅಂಬಳಿಗೋಳ ಜಲಾಶಯದ ಹಿನ್ನೀರಿನಲ್ಲಿ ಗುಂಡು ತಗುಲಿದ ಹುಲಿಯ ಮೃತ ದೇಹ ತೇಲುತ್ತ ಸಿಕ್ಕಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.ರಾಜ್ಯದಲ್ಲಿ ಹುಲಿಗಳ ಮಾರಣಹೋಮ ನಡೆಯುತ್ತಿರುವ ಆತಂಕ ಮೂಡಿಸಿದೆ.

ತನಿಖೆಗೆ ಆದೇಶ

ಯಾರು ಗುಂಡು ಹೊಡೆದು ಹುಲಿಯನ್ನು ಕೊಂದರು ,ಹುಲಿಯ ಪಟ್ಟೆ ಗುರುತು ನೋಡಿಕೊಂಡು ಭದ್ರಾ ಅಭಯಾರಣ್ಯ ವ್ಯಾಪ್ತಿಯ ಅಥವಾ ಶೆಟ್ಟಿಹಳ್ಳಿ ಅಭಯಾರಣ್ಯ ಹುಲಿಯ ಮೈ ಪಟ್ಟೆ ಗುರುತು ನೋಡಿ ಯಾವ ಹುಲಿ ಎಲ್ಲಿಯದು ಎಂದು ಪತ್ತೆ ಮಾಡಬೇಕಿರುವುದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಕರ್ತವ್ಯ.

ಉನ್ನತ ಮಟ್ಟದ ತನಿಖೆಯನ್ನು ಕೈಕೊಂಡು ಹುಲಿಗಳ ಸಾವಿಗೆ ನ್ಯಾಯ ಒದಗಿಸುವಂತೆ ವನ್ಯಜೀವಿ ಪ್ರೇಮಿಗಳು ಸರ್ಕಾರ ಮತ್ತು ಅರಣ್ಯ ಸಚಿವರನ್ನು ಒತ್ತಾಯ ಮಾಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close