ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರರ ಜಿಲ್ಲಾ ಪ್ರವಾಸ

BJP state president B.Y. Vijendra will visit Shikaripura in Shimoga district tomorrow.

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ನಾಳೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಪ್ರವಾಸ ಕೈಗೊಂಡಿದ್ದಾರೆ. 

ಇಂದು ರಾತ್ರಿ 11-15 ಕ್ಕೆ ರೈಲಿನಲ್ಲಿ ಪ್ರಯಾಣಿಸಿ ನಾಳೆ ಬೆಳಗ್ಗಿನ ಜಾವ ಶಿವಮೊಗ್ಗಕ್ಕೆ 4-45 ಕ್ಕೆ ಆಗಮಿಸಲಿದ್ದು, ಇಲ್ಲಿಂದಲೇ ರಸ್ತೆಯ ಮೂಲಕ ತವರು ಕ್ಷೇತ್ರ ಶಿಕಾರಿಪುರಕ್ಕೆ ತೆರಳಲಿದ್ದಾರೆ. 

ಶಿಕಾರಿಪುರದಲ್ಲಿ ಬೆಳಿಗ್ಗೆ 9-30 ರಿಂದ 10-30 ರ ವರೆಗೆ ಮಿನಿ ವಿಧಾನ ಸೌಧದಲ್ಲಿ ಸಾರ್ವಜನಿಕರ ಮತ್ತು ಕಾರ್ಯಕರ್ತರ ಅಹವಾಲು ಸ್ವೀಕಾರ, ಶಿಕಾರಿಪುರದ ಬೇಗೂರಿನ ನೊಳಂಬ ವೀರಶೈವ ಸಭಾ ಭವನದಲ್ಲಿ ಕುಬೇರಪ್ಪ ಕಂಚಕೊಪ್ಪದವರ ಮಗನ ಮದುವೆಯಲ್ಲಿ ಭಾಗಿ, 

ಬೆಳಿಗ್ಗೆ 11 ಗಂಟೆಗೆ, ಶಿಕಾರಿಪುರದ ಕೆಎಸ್ಆರ್ ಟಿಸಿ ಬಸ್ ಡಿಪೋದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀವಿಘ್ನೇಶ್ವರ ದೇವಸ್ಥಾನಕ್ಕೆ ಭೇಟಿ, 11.30 ಕ್ಕೆ ಉಡುಗಣಿಯ ಬನ್ನಿಕಟ್ಟೆ ಹನುಮಂತ ದೇವರ ನೂತನ ಶಿಲಾ ಮೂರ್ತಿಗಳ ಪುನರ್ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ, ಮಧ್ಯಾಹ್ನ12-30 ಕ್ಕೆ ಮುಳುಕೊಪ್ಪದ ಕೋಡಿ ಬಸವೇಶ್ವರ ನೂತನ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 

1-30 ಕ್ಕೆ ಬಿಸಿಲಹಳ್ಳಿಯಲ್ಲಿ ಮದುವೆ ಕಾರ್ಯಕ್ರಮದಲ್ಪಿ ಭಾಗಿ, ಮಧ್ಯಾಹ್ನ 2 ಕ್ಕೆ ತಾಳಗುಂದ ಗ್ರಾಪಂ ಸದಸ್ಯರ ಗೃಹಪ್ರವೇಶದಲ್ಲಿ ಭಾಗಿ, 2-30 ಕ್ಕೆ ಚಿಕ್ಕಾಪುರದ ಸಾಲೂರು ಗ್ರಾಮಪಂಚಾಯಿತಿಯಲ್ಲಿ ಮತ್ತೊಂದು ಮನೆ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಭಾಗಿ, ಮಧ್ಯಾಹ್ನ 3 ಗಂಟೆಗೆ ಅರಿಷಿಗಣಗೆರೆಯಲ್ಲಿ ಮದುವೆ ಆರತಾಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close