CCF of the Office of the Chief Conservator of Forests at Shrigandha Kothi, Shimoga. It is reported that Hanumanthappa KT has been threatened because he has been ordered to investigate forest encroachment and forest crime and he has been portrayed in a derogatory manner in the newspaper.
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಶ್ರೀಗಂಧ ಕೋಠಿಯಲ್ಲಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಸಿಸಿಎಫ್ ಡಾ. ಹನುಮಂತಪ್ಪ ಕೆ.ಟಿ ಅವರಿಗೆ ಅರಣ್ಯ ಒತ್ತುವರಿ ಹಾಗೂ ಅರಣ್ಯ ಅಪರಾಧ ತನಿಖೆಗೆ ಆದೇಶಿಸಿರುವ ಕಾರಣ ಬೆದರಿಕೆ ಹಾಕಿರುವ ಹಾಗೂ ಪತ್ರಿಕೆಯಲ್ಲಿ ಅವಹೇಳನಕಾರಿಯಾಗಿ ಬಿಂಬಿಸಿ ತೇಜೋವಧೆ ಮಾಡಿರವ ಘಟನೆ ವರದಿಯಾಗಿದೆ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಹನುಮಂತಪ್ಪ ಕೆಟಿಯವರು ಉಕ್ಕುಂದ ನಿವಾಸಿ ಶಿವುಕುಮಾರ್ ಎಂಬಾತನ ವಿರುದ್ಧ ಅರಣ್ಯ ಒತ್ತುವರಿ ಮತ್ತು ಅರಣ್ಯ ಅಪರಾಧದ ತನಿಖೆಗೆ ಆದೇಶಿಸಿದ್ದರು. ಶಿವಕುಮಾರ್ ಅನ್ಯಕೋಮಿನ ವ್ಯಕ್ತಿಗಳ ಜೊತೆ ಕಚೇರಿಗೆ ಹೋಗಿ ಅಧಿಕಾರಿಯ ವಿರುದ್ಧವೇ ಅವ್ಯಚ್ಯ ಶಬ್ದಗಳಿಂದ ಬೈದಾಡಿ ಬೆದರಿಕೆ ಹಾಕಿರುವುದಾಗಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಕುಮಾರ್ ಸಿಸಿಎಫ್ ವಿರುದ್ಧ ಕೆಲ ಪತ್ರಿಕೆಗಳಲ್ಲಿ ರಣ ಹಸಿವು, ಅರಣ್ಯ ಭಕ್ಷಕ, ಕೊಳಬಾಕ, ಅಡ್ನಾಡಿ, ಕಾಡು ಹಕ್ಕಿಗಳ ಕಡೆಗೆ ಎಂಬ ಪದ ಬಳಕೆ ಮಾಡಿ ಪ್ರಕಟಣೆ ಮಾಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಶಿವಕುಮಾರ್ ಇತರೆ ಇಬ್ಬರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ ಪ್ರಕರಣಗಳು ದಾಖಲಾಗಿದೆ.