ಸುದ್ದಿಲೈವ್/ಶಿವಮೊಗ್ಗ
ನಿನ್ನೆ ನಗರ ಸಿಟಿ ಬಸ್ ನ ಬೋರ್ಡ್ ಮೇಲೆ ನಿಂತು ಸಂಚರಿಸುತ್ತಿದ್ದ ವಿದ್ಯಾರ್ಥಿ ಕೆಳಗೆ ಬಿದ್ದು ಸಾವುಕಂಡ ಘಟನೆ ನಡೆದ ಬೆನ್ನಲ್ಲೇ ಇಂದು ಡಿವೈಎಸ್ಪಿ ಸಂಜೀವ್ ಕುಮಾರ್ ನೇತೃತ್ವದಲ್ಲಿ ಬಸ್ ಮಾಲೀಕರ ಸಭೆ ನಡೆದಿದೆ. ಸಭೆಯಲ್ಲಿ ಡಿವೈಎಸ್ಪಿ ಸಂಜೀವ್ ಕುಮಾರ್ ಹಲವು ಸೂಚನೆ ನೀಡಿದ್ದಾರೆ.
1) ಬಸ್ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸಿಟಿ ಬಸ್ ನಲ್ಲಿ ಪುಟ್ ಬೋರ್ಡ್ ಪ್ರಯಾಣಕ್ಕೆ ಅವಕಾಶ ನೀಡಬಾರದು.
2) ಸಿಟಿ ಬಸ್ ಗಳನ್ನು ಎಲ್ಲಿ ಅಂದರೆ ಅಲ್ಲಿ ನಿಲ್ಲಿಸಿ ಸುಗಮ ಸಂಚಾರ ಅಡ್ಡಿ ಉಂಟುಮಾಡದೆ ತಮಗೆ ನಿಗದಿ ಪಡಿಸಿರುವ ಸಿಟಿ ಬಸ್ ನಿಲ್ದಾಣದಲ್ಲಿ ಮಾತ್ರ ನಿಲ್ಲಿಸುವಂತೆ
3) ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಸಿಟಿ ಬಸ್ ಸಂಚಾರ ಮಾಡುವ ವೇಳೆಯಲ್ಲಿ ಡೋರ್ ಹಾಕಿಕೊಂಡ ಚಾಲನೆ ಮಾಡುವುದು.
4) ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಭೆಯಲ್ಲಿ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಸಂತೋಷ್ ಕುಮಾರ್ ಪೊಲೀಸ್ ವೃತ್ತ ನಿರೀಕ್ಷಕರು ಶಿವಮೊಗ್ಗ ಸಂಚಾರ ವೃತ್ತ ರವರು ಉಪಸ್ಥಿತರಿದ್ದರು.