A murdered accused was punished-ಕೊಲೆ ಆರೋಪಿತನಿಗೆ ಶಿಕ್ಷೆ ಪ್ರಕಟ

Suddilive || Shivamogga

A murdered accused was punished, ಕೊಲೆ ಆರೋಪಿಗೆ ಶಿಕ್ಷೆ ಪ್ರಕಟ. 

Murdered, accused


2021 ನೇ ಸಾಲಿನ ಅಕ್ಟೋಬರ್‌ನ 14 ರಂದು ರಾತ್ರಿ ಶಿವಮೊಗ್ಗ ಟೌನ್ ಬಾಪೂಜಿ ನಗರದ ಗಂಗಮತ ಹಾಸ್ಟೆಲ್ ಮುಂಭಾಗದ ರಸ್ತೆಯಲ್ಲಿ, ಸ್ವಾಮಿ ವಿವೇಕಾನಂದ ಸಂತೋಶ್ ಪಿ.ಕೆ. 30 ವರ್ಷದ ಯುವಕನನ್ನ ಅನಿಲ್ ಹಾಗೂ ಆತನ ಸಹಚರರು ಸೇರಿ ಹಳೆ ದ್ವೇಶದ ಹಿನ್ನೆಲೆಯಲ್ಲಿ ಮಚ್ಚಿನಿಂದ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.  

ಮೃತನ ತಂದೆ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ  ಚಂದ್ರಶೇಖರ್ ಟಿ.ಕೆ, ಪಿ.ಐ ಕೋಟೆ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ, ಆರೋಪಿತರ ವಿರುದ್ಧ  ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. 

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ  ಸುರೇಶ್ ಕುಮಾರ್ ಎ. ಎಂ. ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿತರ ವಿರುದ್ದ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದೆ.  

ಮಾನ್ಯ ನ್ಯಾಯಾಧಿಶರಾದ ಶ್ರೀ ಮಂಜುನಾಥ್ ನಾಯಕ್ ರವರು ದಿನಾಂಕಃ 12-03-2025 ರಂದು ಆರೋಪಿತನಾದ ಅನಿಲ್ ಕುಮಾರ್ ಕೆ, 27 ವರ್ಷ, ಎ. ಎ. ಕಾಲೋನಿ ಶಿವಮೊಗ್ಗ ಟೌನ್ ಈತನಿಗೆ ಜೀವಾವಧಿ ಶಿಕ್ಷೆ  ಮತ್ತು ರೂ 50,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 06 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದು, ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ 25,000 ರೂಗಳನ್ನು ಮೃತನ ತಂದೆಗೆ ನೀಡಲು ಆದೇಶಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close