Road accident at sakrebailu, ಸಕ್ರಬೈಲಿನಲ್ಲಿ ನಡೆದ ರಸ್ತೆ ಅಪಘಾತ ಬೈಕ್ ಸವಾರ ಸಾವು

 Suddilive || Shivamogga

Road accident at sakrebailu, ಸಕ್ರಬೈಲಿನಲ್ಲಿ ನಡೆದ ರಸ್ತೆ ಅಪಘಾತ ಬೈಕ್ ಸವಾರ ಸಾವು


Road, accident


ಲಾರಿ ಮತ್ತು ಬೈಕ್ ನಡುವೆ ಸಂಜೆ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುವ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ.

ಸಕ್ರೇಬೈಲಿನಲ್ಲಿ ಸೀಗಹಟ್ಟಿಯ ಗಿರೀಶ್ ಎಂಬ 33 ವರ್ಷದ ಯುವಕ ತೀರ್ಥಹಳ್ಳಿಗೆ ತೆರಳಿ ವಾಪಾಸ್ ಶಿವಮೊಗ್ಗಕ್ಕೆ ಬರುವ ವೇಳೆ ಸಕ್ರೇಬೈಲಿನ ಬಳಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. 

ಸಿಲಿಂಡರ್ ತುಂಬಿದ ಲಾರಿ ಶಿವಮೊಗ್ಗದಿಂದ ಮಂಗಳೂರು ಕಡೆಗೆ ಹೋಗುತ್ತಿತ್ತು. ಇಬ್ಬರ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದೆ. ಗಿರೀಶ್ ಸ್ಥಳದಲ್ಲೇ ಸಾವು ಕಂಡಿದ್ದಾರೆ. ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Road accident at sakrebailu

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close