suddilive || Shivamogga
An incident occurred where activists, angry at the DC for not coming to the venue to accept the petition, attempted to storm the Kuvempuranga Mandir.
ಮನವಿ ಸ್ವೀಕರಿಸಲು ಸ್ಥಳಕ್ಕೆ ಬಾರದ ಡಿಸಿ ವಿರುದ್ಧ ಹೋರಾಟಗಾರರು ಗರಂ ಆಗಿ, ಕುವೆಂಪುರಂಗ ಮಂದಿರ ನುಗ್ಗಲು ಹೊರಟ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಶರಾವತಿ ನದಿ-ಕಣಿವೆ ಉಳಿಸಿ ಹೋರಾಟ ಒಕ್ಕೂಟ ಶಿವಮೊಗ್ಗ-ಉತ್ತರ ಕನ್ನಡ ಬೆಂಗಳೂರಿಗೆ ಶರಾವತಿ ನೀರು ತೆಗೆದುಕೊಂಡು ಹೋಗ ಬಾರದು ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಿಸದಂತೆ ಆಗ್ರಹಿಸಿ ಗೋಪಿವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು.
ಹೊಸನಗರ ಮೂಲಗದ್ದೆ ಶ್ರೀಗಳು, ಬಸವಕೇಂದ್ರ ಶ್ರೀಗಳು, ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಪರಿಸರವಾದಿ ಅಖಿಲೇಶ್ ಚಿಪ್ಲಿ, ಪರಿಸರ ರಮೇಶ್, ಕಾಲೇಜು ಯುವಕ ಯುವತಿಯರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಜಿಲ್ಲಾಧಿಕಾರಿ ಕಚೇರಿಗೆ ಬಂದ ವೇಳೆ ಜಿಲ್ಲಾಧಿಕಾರಿಗಳು ಇಲ್ಲ ಮನವಿ ಸ್ವೀಕರಿಸಲು ಬರುವುದಿಲ್ಲ. ಕುವೆಂಪು ರಂಗ ಮಂದಿರದಲ್ಲಿ ಉಪಲೋಕಾಯುಕ್ತರ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿದ್ದಾರೆ ಎಂಬ ಮಾಹಿತಿ ಹೋರಾಟಗಾರರಿಗೆ ಲಭಿಸಿದೆ.
ಈ ವೇಳೆ ಎಡಿಸಿ ಸಿದ್ದಲಿಂಗ ರೆಡ್ಡಿಯವರು ಬಂದು ಮನವಿ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಹೋರಾಟಗಾರರಿಗೆ ಲಭಿಸಿದೆ. ಶರಾವತಿ ಉಳಿಸಿ ಹೋರಾಟಗಾರರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ಮನವಿ ಸ್ವೀಕರಿಸಬೇಕು ಇಲ್ಲವಾದಲ್ಲಿ ಕುವೆಂಪು ರಂಗ ಮಂದಿರಕ್ಕೆ ನುಗ್ಗುವುದಾಗಿ ಆಕ್ರೋಶ ಭರಿತವಾದ ಸನ್ನಿವೇಶಗಳು ನಡೆದಿದೆ.
ನಂತರ ಸ್ಥಳಕ್ಕೆ ಬಂದ ಡಿಸಿ ಗುರುದತ್ತ ಹೆಗಡೆ, ಎಸ್ಪಿ ಮಿಥುನ್ ಕುಮಾರ್ ಮನವಿ ಸ್ವೀಕರಿಸಿದ್ದಾರೆ. ಈ ವೇಳೆ ಮಾತನಾಡಿದ ಪರಿಸರವಾದಿ ಅಖಿಲೇಶ್ ಚಿಪ್ಲಿ ಸರ್ಕಾರ ಅಹಂಕಾರ ಬಿಡಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಆಶೋತ್ತರಕ್ಕೆ ಬೆಲೆಕೊಡಬೇಕು. ಸರ್ಕಾರಕ್ಕೆ ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಿಸಿ ಎಂದು ಅರ್ಜಿ ನೀಡಿಲ್ಲ ಎಂದು ಗರಂ ಆದರು.
ಚುನಾವಣೆಯಲ್ಲಿ ಕಂಪನಿಗಳಿಂದ ಹಣ ಪಡೆದು ಅಧಿಕಾರಕ್ಕೆ ಬಂದ ನಂತರ ಯೋಜನೆ ನೀಡುವ ಭರವಸೆ ನೀಡಿದ್ದರ ಫಲಿತಾಂಶವಾಗಿ ಈ ಯೋಜನೆ ಬರ್ತಾಯಿದೆ. ನಾವೇನು ಕಿವಿಯಲ್ಲಿ ಹೂವಿಟ್ಟುಕೊಂಡಿಲ್ಲ. ನೀವೇನು ನಮ್ಮ ದಾತಾದಿಗಳಲ್ಲ. ಆದರೆ ನೀವು ಪಶ್ಚಿಮ ಘಟ್ಟದಲ್ಲಿ ಯಾವುದೇ ಯೋಜನೆ ತರಬೇಡಿ ಎಂದರು.
An incident occurred where activists, angry