ನವುಲೆಕೆರೆ ಯಾವ ಇಲಾಖೆಗೆ ಬರುತ್ತದೆ ಎಂಬುದೆ ಜಿಜ್ಞಾಸೆ-ಪ್ರಕರಣ ಸರಿಯಾಗುವರೆಗೂ ವಾಪಾಸ್ ಇಲ್ಲ-ಉಪಲೋಕಾಯುಕ್ತ-The Upalokayukta created a stir in Shivamogga

 suddilive || shivamogga

The Upalokayukta created a stir in Shivamogga in the early hours of the morning. He visited Gandhi Park, the Indira Canteen of the DDPI office, Rajendra Nagar Channel, and Navule Lake, making the officials sweat.

Upalokayukta, stir

ಶಿವಮೊಗ್ಗದಲ್ಲಿ ಬೆಳ್ಳಂಬೆಳಿಗ್ಗೆ ಉಪಲೋಕಾಯುಕ್ತ ಸಂಚಲನ ಮೂಡಿಸಿದ್ದಾರೆ. ಗಾಂಧಿ ಪರ್ಕ್, ಡಿಡಿಪಿಐ ಕಚೇರಿಯ ಇಂದಿರಾ ಕ್ಯಾಂಟೀನ್, ರಾಜೇಂದ್ರ ನಗರ ಚಾನೆಲ್, ನವುಲೆ ಕೆರೆಗೆ ಭೀಟಿ ನೀಡಿ ಅಧಿಕಾರಿಗಳಿಗೆ ಬೆವರು ಇಳಿಸಿದ್ದಾರೆ.

ಗಾಂಧಿ ಪಾರ್ಕ್ ನ ಅವ್ಯವಸ್ಥೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಉಪಲೋಕಾಯುಕ್ತ20 ದಿನಗಳಲ್ಲಿ ಶೌಚಾಲಯ, ನೀರಿನ ವ್ಯವಸ್ಥೆ, ಸ್ವಚ್ಛತೆ, ಕಾವಲುಗಾರನ ನೇಮಕಕ್ಕೆ ಪಾಲಿಕೆ ಆಯುಕ್ತರಿಗೆ ಸಮಯ ನೀಡಿದ್ದರು. ಮುಂದಿನ 6 ತಿಂಗಳಲ್ಲಿ ಪಾರ್ಕ್ ಯೋಜನೆ ಸಮೇತ ವರದಿ ಕೊಡಲು ಸೂಚಿಸಿದರು. ಪಾರ್ಕ ಸರಿಹೋದ ಮೇಲೆ ಪ್ರಕರಣ ವಾಪಾಸ್ ಪಡೆಯುವುದಾಗಿ ತಿಳಿಸಿದರು. 

ಡಿಡಿಇಐ ಕಚೇರಿಯ ಪಕ್ಕದಲ್ಲಿರುವ ಇಂದಿರಾ ಕ್ಯಾಟೀನ್ ಗೆ ಭೇಟಿ ನೀಡಿದ ಉಪಲೋಕಾಯುಕ್ತ ಬೆಳಿಗ್ಗೆ ತಿಂಡಿಗೆ ಬಂದಿದ್ದ ಸಾರ್ವಜನಿಕರನ್ನ ಮಾತನಾಡಿಸಿ ದಿನಾಲು ತಿಂಡಿ ಹೀಗೆ ಇರುತ್ತಾ ಎಂದು ವಿಚಾರಿಸಿದರು. ದಿನಾಲು ಚೆನ್ನಗಿರಲ್ಲ. ಇವತ್ತು ಚೆನ್ನಾಗಿದೆ ಎಂಬ ಉತ್ತರ ಸಾರ್ವಜನಿಕರಿಂದ ಬಂದಿದೆ. 

ರವೀಂದ್ರ ನಗರದ ಚಾನೆಲ್ ಪಕ್ಕದ ಪಾರ್ಕ್ ನಲ್ಲಿಯೂ ನೀರಿನ ವ್ಯವಸ್ಥೆಕುರಿತು ಮಹಿಳೆಯೊಬ್ಬರು ಉಪಲೋಕಾಯುಕ್ತರಿಗೆ ದೂರಿದರು. ಸ್ವಚಛತೆ ಮತ್ತು ನೀರಿನ ವ್ಯವಸ್ಥೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.


ರಾಜೇಂದ್ರ ನಗರ ಚಾನೆಲ್ ಗಲೀಜಾಗಿದ್ದು ಪಾಲಿಕೆ ಮತ್ತು ಇರಿಗೇಷನ್ ಇಲಾಖೆಯನ್ನ ಪಾರ್ಟಿ ಮಡುವುದಾಗಿ ಎಚ್ಚರಿಸಿದರು. ಶುಭೋದಯ ವಾಯುವಿಹಾರ ಸಂಘ ಇಂದು ಲೋಕಾಯುಕ್ತರಿಗೆ ಭೇಟಿ ನೀಡಿ ಮನೆಗಳ ಯುಜಿಡಿಯನ್ನ ಈ ಚಾನೆಲ್ ಗೆ ನೀಡಲಾಗಿದೆ ಎಂದು ದೂರಿದರು. 


ಹಾಸ್ಪಿಟಲ್ ಗಳ ಗಲೀಜುಗಳು ಚಾನೆಲ್ ಗೆ ಬಿಡಲಾಗುತ್ತಿದೆ. 16 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯಾಗಿದೆ ಸ್ವಚ್ಛತೆ ಇಲ್ಲದೆ ಇರುವುದಾಗಿ ವ್ಯಕ್ತಪಡಿಸಿದರು. 

ನವುಲೆ ಕೆರೆ ಇನ್ನೂ ಜಿಜ್ಞಾಸೆ

ಉಪಲೋಕಾಯುಕ್ತ ಫಣೀಂದ್ರ ಬರುವ ವರೆಗೆ ನವುಲೆ ಕೆರೆ ಇನ್ನೂ ಯಾವ ಇಲಾಖೆಯ ನಿರ್ವಾಹಣೆ ಮಾಡುವುದು ಎಂಬುದೆ ಜಿಜ್ಞಾಸೆಯಲ್ಲಿರುವುದು ತಿಳಿದು ಬಂದಿದೆ.‌ ನವುಲೆ ಕೆರೆಗೆ ಯಾವ ಇಲಾಖೆ ಬರುತ್ತದೆ ಎಂದು ಕೇಳಿದಾಗ ನಿಧಾನವಾಗಿ ಬಂದ ಜಿಲ್ಲಾಧಿಕಾರಿಗಳು ಇದು ಪಂಚಾಯಿತಿಗೆ ಬರುತ್ತೆ. ಈಗ ಸಿಟಿಯಲ್ಲಿರುವುದರಿಂದ ಪಾಲಿಕೆಗೆ ಬರುತ್ತೆ ಎಂದರು.


ಕೆರೆ ಹೀಗಿರುತ್ತಾ ಎಂದು ಪ್ರಶ್ನಿಸಿದಾಗ ಯಾವ ಇಲಾಖರಯವರು ಮಾತನಾಡದೆ ಇರುವುದು ಅಚ್ಚರಿ ಮೂಡಿಸಿದೆ. ನಂತರ ಡಿಸಿ ಮಾತನಾಡಿ ಎರಡು ತಿಂಗಳ ಒಳಗೆ ಕೆರೆಯ ಶಿಲ್ಟ್ ತೆಗೆದು ಫೆನ್ಸ್ ಹಾಕಿಕೊಡುವುದಾಗಿ ಭರವಸೆ ನೀಡಿದರು. ಮುಂದೆ  ಪಾಲಿಕೆ ಅಮೃತ್ ಯೋಜನೆ ಅಡಿ ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದರು. ಕೆರೆಯ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಉಪಲೋಕಾಯುಕ್ತ ಫಣೀಂದ್ರ, ಗಾಂಧಿ ಪಾರ್ಕ್, ರವೀಂದ್ರ ನಗರ ಚಾನೆಲ್ ಮತ್ತು ಪಕ್ಕದ ಪಾರ್ಕ್ ನವುಲೆ ಕೆರೆಗೆ ಸಂಬಂಧಿಸಿದಂತೆ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಅಂತಿಮ ವರದಿ ಬರುವ ವರೆಗೂ ಕೇಸ್ ಕ್ಲೋಸ್ ಮಾಡಲ್ಲ ಎಂದರು. 

The Upalokayukta created a stir in Shivamogga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close