Suddilive || Shivamogga
ಹಾವಳಿಯಿಟ್ಟ ಬಸವನಗುಡಿ ಮೋಹನ-The troubled Basavanagudi Mohana
ಶಿವಮೊಗ್ಗದಲ್ಲಿ ಮನುಷ್ಯರ ವರ್ತನೆಗಳು ಮಿತಿಮೀರಿದೆ. ತನ್ನ ತಪ್ಪುಗಳು ಅರಿವುಗೆ ಬಾರದೆ ದೂರುಕೊಟ್ಟವರ ಮೇಲೆಯೇ ದಾಳಿ ನಡೆಸುವ ಪ್ರವೃತ್ತಿ ಬೆಳೆಯುತ್ತಿದೆ.
ಇದಕ್ಕೆ ಉದಾಹರಣೆಯಂತೆ ಒಬ್ಬ ಪಿಕ್ ಪ್ಯಾಕೆಟರ್ ವಿರುದ್ಧ ಪೊಲೀಸರಿಗೆ ದೂರುಕೊಟ್ಟಕಾರಣ ಜ್ಯೂಸ್ ಸೆಂಟರ್ ನ ಮಾಲೀಕರೆ ಮನೆಗೆ ಹೋಗಿ ಧಮ್ಕಿಹಾಕಿ ಬೆದರಿಸುವ ಕೆಲಸ ಮಾಡಿದ್ದಾನೆ.
ಇತ್ತೀಚೆಗೆ 15-20 ದಿನಗಳ ಹಿಂದೆ ಬಸವೇಶ್ವರ ನಗರ ಪಾರ್ಕ್ ನಲ್ಲಿ ರಾತ್ರಿ ಒಂದು ಗಂಟೆಗೆ ವ್ಯಕ್ತಿಯೋರ್ವ ಜೋರಾಗಿ ಬ್ಲೂಟೂತ್ ಸ್ಪೀಕರ್ ಇಟ್ಟುಕೊಂಡು ಜೋರಾಗಿ ಹಾಡುಹಾಕಿಕೊಂಡು ಕುಳಿತಿದ್ದ. ಇದರಿಂದ ಪಾರ್ಕ್ ಪಕ್ಕದಲ್ಲಿಯೇ ಮನೆ ಇದ್ದವರಿಗೆ ತೊಂದರೆ ಉಂಟಾಗಿದೆ.
ಪಾರ್ಕ್ ಪಕ್ಕದಲ್ಲಿಯೇ ಇದ್ದ ಖ್ಯಾತ ಜ್ಯೂಸ್ ಸೆಂಟರ್ ನ ಮಾಲೀಕರು ತೆರಳಿ ರಾತ್ರಿ 1 ಗಂಟೆಯಾಗಿದೆ ಮಲಗಬೇಕು. ಹಾಡನ್ನ ನಿಲ್ಲಿಸು ಎಂದು ತಿಳಿಸಿದ್ದಾರೆ. ತಾಯಿ ಸತ್ತಿದ್ದಾರೆ. ಬೇಸರವಾಗುತ್ತಿದೆ. ಬೇಸರವಾದಾಗ ನಾನು ಮಾಡೋದೆ ಹೀಗೆ ಎಂದು ಅಪರಿಚಿತ ವ್ಯಕ್ತಿ ಹೇಳಿದ್ದಾನೆ. ಆತ ಯಾರ ಮಾತು ಕೇಳದಿದ್ದಾಗ 112 ಗೆ ಕರೆ ಮಾಡಿದ್ದು 112 ರವರು ಬಂದು ಆತನನ್ನ ಕರೆದುಕೊಂಡು ಹೋಗಿದ್ದಾರೆ.
ಇದಾದ ಬಳಿಕ ಒಂದು ವಾರದ ನಂತರ ಅಪರಿಚಿತ ವ್ಯಕ್ತಿ ಖ್ಯಾತ ಜ್ಯೂಸ್ ಸೆಂಟರ್ ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿ ನನ್ನಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದು ನೀನೆ ಅಲ್ವಾ ನಿನ್ನನ್ನ ಬಿಡುವುದಿಲ್ಲ ಎಂದು ಬೆದರಿಸಿದ್ದಾನೆ. ಈ ವೇಳೆ ಮಾಲೀಕರು ಈತನನ್ನ ಗುರುತುಹಿಡಿದು ರಾತ್ರಿ 1 ಗಂಟೆ ವೇಳೆಯಲ್ಲಿ ಜೋರು ಹಾಡುಹಾಕಿಕೊಂಡಿದ್ದ ಈ ವ್ಯಕ್ತಿ ಎಂದು ತಿಳಿದು ಬಂದಿದೆ.
ಈತನ ಬಗ್ಗೆ ವಿಚಾರಿಸಿದಾಗ ಈತ ಬಸವನಗುಡಿಯ ಮೋಹನ್ ಎಂದು ತಿಳಿದು ಬಂದಿದೆ. ಆ ದಿನ ಬಾಗಿಲು ಹಾಕಿಕೊಂಡು ಮಾಲೀಕರು ಮನೆ ಬಿಟ್ಟು ಹೋಗಿರಲಿಲ್ಲ. ದೂರು ನೀಡಲಿಲ್ಲ. ಇದಾದ ಬಳಿಕ ಮತ್ತೆ ಅವರ ಮನೆಯನ್ನೇ ಟಾರ್ಗೆಟ್ ಮಾಡಿಕೊಂಡು ಬಂದ ಮೋಹನ ಅಕ್ಷರಶಃ ದಾಂದ್ಲೆ ಮಾಡಿದ್ದಾನೆ. ಜೀವ ಬೆದರಿಕೆಹಾಕಿದ್ದಾನೆ. ಮನೆಗೆ ಹಾನಿ ಉಂಟು ಮಾಡಿದ್ದಾನೆ. ಬಸವನ ಗುಡಿಯ ಮೋಹನನ ಹಾವಳಿಗೆ ಮಾಲೀಕರು ತತ್ತರಿಸಿ ಹೋಗಿದ್ದಾರೆ. ಈತನ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಸವನ ಗುಡಿ, ಜಯನಗರದಲ್ಲಿ ಮೋಹನನ ಹಾವಳಿ ಹೆಚ್ಚಿದೆ. ಇದು ಆತನ ವಿರುದ್ಧ ಮೊದಲ ದೂರಾದರೂ ಹೀಗೆ ಕನ್ಸರ್ ವೆನ್ಸಿ, ಪಾರ್ಕ್ ಖಾಲಿ ಸೈಟ್ ಗಳಲ್ಲಿ ಜೋರಾಗಿ ಬ್ಲೂಟೂತ್ ಮೂಲಕ ಹಾಡಾಕಿಕೊಂಡು ಕುಳಿತುಕೊಳ್ಳುವುದು ಈತನ ಹವ್ಯಾಸವಾಗಿದೆ.
ಬಸವನಗುಡಿ ಮೋಹನನಿಗೆ ಕಳ್ಳಿ ಮೋಹನ ಎಂದು ಕರೆಯುತ್ತಾರೆ. ರೈಲ್ವೆ ನಿಲ್ದಾಣದ ಬಳಿ ಮೊದಲಾದ ಕಡೆ ಪಿಕ್ ಪ್ಯಾಕೆಟರ್ ಆಗಿದ್ದ ಈತನನ್ನ ಸಧ್ಯಕ್ಕೆ ಜೈಲಿಗೆ ಕಳುಹಿಸಲಾಗಿದೆ. ತನುಶ್ರೀ ಜ್ಯೂಸ್ ಸೆಂಟರ್ ನ ಮಾಲೀಕ ರಘು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
The troubled Basavanagudi Mohana