suddilive || kalburgi
ಮಾಜಿ ಸಿಎಂ ಯಡಿಯೂರಪ್ಪನವರ ಮೊಮ್ಮಗನಿಗೆ ನಿಶ್ಚಿತಾರ್ಥ-Former CM Yediyurappa's grandson gets engaged
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ಪುತ್ರ ಸುಭಾಷ್ ಅವರ ನಿಶ್ಚಿತಾರ್ಥ ನಿನ್ನೆ ಕಲ್ಬುರ್ಗಿಯಲ್ಲಿ ನೆರವೇರಿದೆ.
ಈಗಾಗಲೇ ಪುತ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಕಲಬುರಗಿಯ ಶಿವಾನಂದ ಮಾನಕರ ಪುತ್ರಿಯನ್ನು ಸೊಸೆಯನ್ನಾಗಿ ಸ್ವೀಕರಿಸಿರುವ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಇದೀಗ ಮೊಮ್ಮಗನಿಗೂ ಕಲ್ಬುರ್ಗಿಯ (ಸಂಸದ ಬಿ.ವೈ. ರಾಘವೇಂದ್ರ) ಯುವತಿಯನ್ನೇ ಗೊತ್ತು ಮಾಡಿದ್ದಾರೆ.
ಶರಣಬಸವೇಶ್ವರ ಸಂಸ್ಥಾನದ ಕುಟುಂಬಕ್ಕೆ ಸೇರಿದ, ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷರೂ ಆದ ಲಿಂಗರಾಜಪ್ಪ ಅಪ್ಪ ಅವರ ಪುತ್ರಿ ಶ್ರಾವಣಾ ಅವರೊಂದಿಗೆ ಸುಭಾಷ್ ಅವರ ನಿಶ್ಚಿತಾರ್ಥ ಭಾನುವಾರ ನೆರವೇರಿತು.
Former CM Yediyurappa's grandson gets engaged