Suddilive || Shiralkoppa
ಶುಂಠಿ ಖರೀದಿಸುವುದಾಗಿ ಹೇಳಿ ವಂಚನೆ-Fraudulently claiming to buy ginger
ಶುಂಠಿ ಖರೀದಿಸುವುದಾಗಿ ತಿಳಿಸಿ ಲಕ್ಷಾಂತರ ರೂ ವಂಚಿಸಿರುವ ಘಟನೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಾರಾಷ್ಟ್ರದ ಔರಂಗಬಾದ್ ನ ನಿವಾಸಿ ಅರ್ಪತ್ ದೇಶ್ ಮುಖ್ ಎಂಬಾತ ಶಿರಾಳಕೊಪ್ಪದ ನಿವಾಸಿಗೆ ಕರೆ ಮಾಡಿ ಶುಂಠಿ ತುಂಬಿಸುತ್ತಿದ್ದೇನೆ ಆರ್ಡರ್ ಇದ್ದರೆ ಹೇಳಿ ಎಂದಿದ್ದಾನೆ. ಇದೆ ಎಂದು ಒಪ್ಪಿಕೊಂಡ ಶಿರಾಳಕೊಪ್ಪದ ನಿವಾಸಿಯೊಂದಿಗೆ ಕರಾರು ಒಪ್ಪಂದ ಸಹ ಮುಗಿಸಿದ್ದಾನೆ.
ಒಟ್ಟು ಐಎಂ ಪಿಎಸ್, ಫೋನ್ ಪೇ ಮೂಲಕ ಶಿರಾಳಕೊಪ್ಪದ ನಿವಾಸಿ 6,93,300 ರೂ. ಗಳನ್ನ ಅರ್ಫತ್ ಗೆ ಹಣ ಸಂದಾಯ ಮಾಡಿದ್ದಾರೆ. ಸೊಲ್ಲಾಪುರದಿಂದ ಎಂ ಹೆಚ್ 20 ಇಕೆ 2999 ಕ್ರಮ ಸಂಖ್ಯೆಯ ಗಾಡಿ ಬರ್ತಾ ಇದೆ ಎಂದು ಹೇಳಿ ಪಿಚ್ಚರ್ ತೋರಿಸಿದ್ದಾನೆ.
ಒಂದು ಬಾರಿ ಕರೆ ಮಾಡಿದಾಗ ಬಿಜಾಪುರ ತಲುಪಿದೆ ಎಂದ ಅರ್ಫತ್, ಹುಬ್ಬಳ್ಳಿ ತಲುಪಿದೆ. ಟಯರ್ ಬ್ಲಾಸ್ಟ್ ಆಗಿದೆ ಎಂದು ಪಿಚ್ಚರ್ ತೋರಿಸಿದ್ದಾನೆ. ನಂತರ ಲಾರಿ ಶಿರಾಳಕೊಪ್ಪ ತಲುಪದ ಹಿನ್ನಲೆಯಲ್ಲಿ ಅರ್ಫತ್ ಗೆ ಕೊಟ್ಟ ಹಣ ವಾಪಾಸ್ ಕೊಡು ಎಂದು ಶಿರಾಳಕೊಪ್ಪ ನಿವಾಸಿ ಕೇಳಿದ್ದಕ್ಕೆ ನೀನು ಏನು ಮಾಡ್ಕೊಂತ್ಯ ಮಾಡ್ಕೊ ಹಾ ಕೊಡಲ್ಲ ಎಂದು ಬೆದರಿಸಿದ್ದಾನೆ.
ಇದರಂದಾಗಿ ನದೀಮ್ ಶಾ ಎಂಬುವರು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಅರ್ಫತ್ ದೇಶ್ ಮುಖ್ ವಿರುದ್ಧ ದೂರು ದಾಖಲಿಸಿದ್ದಾರೆ.
Fraudulently claiming to buy ginger