Fraud of crores of money || ಒಂದೇ ಪೆಟ್ರೋಲ್ ಬ್ಯಾಂಕ್ ತೋರಿಸಿ ಲಕ್ಷ ಲಕ್ಷ ಪೀಕಿಸಿಕೊಂಡ ಮಹಿಳೆ, ನೊಂದವರು ಹೇಳೋದೇನು?

Suddilive || Shivamogga

Fraud of crores of crores of money.. Fraud by the owner of the petrol station.. People cheated on the words of a woman... People who lost crores of money..ಕೋಟಿ ಕೋಟಿ ಹಣ ವಂಚನೆ.. ಪೆಟ್ರೋಲ್ ಬಂಕ್ ಮಾಲೀಕಿಯಿಂದ ವಂಚನೆ.. ಮಹಿಳೆಯ ಬಣ್ಣದ ಮಾತಿಗೆ ಮೋಸ ಜನರು... ಕೋಟಿ ಕೋಟಿ ಹಣ ಕಳೆದಗೊಂಡ ಜನರು.

ಸಾಂಧರ್ಭಿಕ ಚಿತ್ರ


ತೀರ್ಥಹಳ್ಳಿ ತಾಲೂಕಿನ ಜನರಿಗೆ ಮಹಿಳೆಯೊಬ್ಬಳು ಕೋಟಿ ಕೋಟಿ ಹಣ ಟೋಪಿ ಹಾಕಿದ್ದಾಳೆ. ಪೆಟ್ರೋಲ್ ಬಂಕ್ ಮಾಲೀಕಿ ಆಗಿರುವ ಮಹಿಳೆಯು ತನ್ನ ಕ್ರಿಮಿನಲ್ ತಲೆ ಬಳಿಸಿ ಹಣವಂತರಿಂದ ಕೋಟಿ ಕೋಟಿ ಹಣ ಕಿತ್ತುಕೊಂಡಿದ್ದಾಳೆ. ಪೆಟ್ರೋಲ್ ಬಂಕ್ ತೋರಿಸಿ ಸಲೀಸಾಗಿ ಜನರಿಗೆ ಮಕ್ಮಲ್ ಟೋಪಿ ಹಾಕಿರುವ ಮಹಿಳೆಯರ ಕುರಿತು ಒಂದು ವರದಿ ಇಲ್ಲಿದೆ.. 

ತೀರ್ಥಹಳ್ಳಿ ತಾಲೂಕಿನ ಮುಡಬಾ ಗ್ರಾಮವಿದೆ. ತೀರ್ಥಹಳ್ಳಿ ಮತ್ತು ಶಿವಮೊಗ್ಗ ಹೈವೇ ಮುಡಬಾ ಬಳಿ ಆರತಿ ಒಡೆತನದ ಗೋಮತಿ ಪೆಟ್ರೋಲ್ ಬಂಕ್ ಇದೆ. ಪತಿ ಮೃತಪಟ್ಟಿದ್ದಿಂದ ಪತ್ನಿಯೇ ಬಂಕ್ ಮಾಲೀಕಿಯಾಗಿದ್ದಾಳೆ. ಕಳೆದ ಕೆಲವು ವರ್ಷಗಳಿಂದ ಇದೇ ಬಂಕ್ ತೋರಿಸಿ ತೀರ್ಥಹಳ್ಳಿ ಜನರಿಗೆ  ಮಹಿಳೆಯರು ವಂಚನೆ ಮಾಡುತ್ತಿದ್ದಾಳೆ.  10 ಲಕ್ಷದಿಂದ 50 ಲಕ್ಷ ವರೆಗೆ ಹಣ ಪಡೆದುಕೊಂಡು ಮಹಿಳೆಯು ಮೋಸ ಮಾಡಿದ್ದಾಳೆ. ಅಂದಾಜು ಎರಡ ರಿಂದ ಮೂರು ಕೋಟಿ ವರೆಗೆ ಮಹಿಳೆಯು ವಂಚನೆ ಮಾಡಿದ್ದಾಳೆ. ಯಾರ ಬಳಿ ಸಾಲ ಪಡದಿದ್ದಾಳೆ ಅವರಿಗೆ  ಭದ್ರತೆಗಾಗಿ  ಚೆಕ್ ನೀಡುತ್ತಾಳೆ. ಪೆಟ್ರೋಣಲ್ ಬಂಕ್ ಪಾಲುದಾರಿಕೆ ಮಾಡಿಕೊಳ್ಳುತ್ತೇನೆಂದು ಕೆಲವರಿಗೆ ರೈಲು ಬಿಟ್ಟರೆ ಮತ್ತೆ ಕೆಲವರಿಗೆ ಪೆಟ್ರೋಲ್ ಮತ್ತು ಡಿಸೇಜ್ ಹಾಕಲು ಹಣಕಾಸಿನ ಸಮಸ್ಯೆಯಾಗಿದೆ ಎಂದು ಬಣ್ಣದ ಮಾತು ಹೇಳಿ ಅವರಿಂದ ಲಕ್ಷ ಲಕ್ಷ ಹಣ ಸಾಲ ಪಡೆಯುತ್ತಾಳೆ. ಹೀಗೆ ಇವಳ ಬಣ್ಣದ ಮಾತು ನಂಬಿದ ಜನರು ವಂಚನೆಗೊಳಗಾಗಿದ್ದಾರೆ. ಯಾರೇ ಏನೇ ಮಾಡಿದ್ರೂ ಪೆಟ್ರೋಲ್ ಬಂಕ್ ಮಾಲೀಕಿ ಗೋಮತೆ ಮಾತ್ರ ಹಣ ವಾಪಸ್ ನೀಡುತ್ತಿಲ್ಲ. ಠಾಣೆಗೆ ಮತ್ತು ಕೋರ್ಟ್ ನಲ್ಲಿ ವಂಚನೆಗೊಳಗಾದವರು ದೂರು ನೀಡಿದ್ದಾರೆ. ಒಬ್ಬ ವ್ಯಕ್ತಿ ಬಳಿ 30 ಲಕ್ಷ ಅಕೌಂಟ್ ಮೂಲಕ ಹಣ ಪಡೆದು ಈಗ ಮಹಿಳೆಯರು ಹಣ ವಾಪಸ್ ಕೊಡದೇ ಸತಾಯಿಸುತ್ತಿದ್ದಾಳೆ.  

ಮಹಿಳೆ ಎನ್ನುವ ಅಸ್ತ್ರ್ರವನ್ನು ಮುಂದೆ ಇಟ್ಟುಕೊಂಡು ಲಕ್ಷ ಲಕ್ಷ ಹಣ ಸಾಲ ಪಡೆದಿದ್ದಾಳೆ. ವಾಪಸ್ ಕೇಳಿದ್ರೆ ಕೊಡುವುದಿಲ್ಲ. ತನಗೆ ಆ ಸಮಸ್ಯೆ ಈ ಸಮಸ್ಯೆ ಅಂತಾ ಸಾಲಕೊಟ್ಟ ಜನರಿಗೆ ವಂಚನೆ ಮಾಡುತ್ತಿದ್ದಾಳೆ. ಲಕ್ಷಾಂತರ ರೂಪಾಯಿ ಮೋಸ ಕುರಿತು ತೀರ್ಥಹಳ್ಳಿ ಮತ್ತು ಶಿವನೊಗ್ಗದಲ್ಲಿ ಕೇಸ್ ಗಳು ದಾಖಲು ಆಗಿವೆ. ಕೋರ್ಟ್ ಗೆ ಮಹಿಳೆಯನ್ನು ಹಾಜರು ಪಡಿಸಿದ ವಂಚನೆಗೊಳಗಾದವರಿಗೆ ಶಾಕ್ ಆಗಿದೆ. ಪುಟ್ಟ ಮಗುವಿದೆ ಎನ್ನುವ ಕಾರಣ ಹೇಳಿ ಮಹಿಳೆಯು ಸಲೀಸಾಗಿ  ಬೇಲ್ ಪಡೆಯುತ್ತಿದ್ದಾಳೆ. ಶಿವಮೊಗ್ಗ ಕೊರ್ಟ್ ಗೆ ಹಾಜರು ಪಡಿಸಿದಾಗ್ಲೂ ಮಹಿಳೆಯು ಬೇಲ್ ಮೇಲೆ ಬಿಡುಗಡೆ ಯಾಗಿದ್ದಾರೆ ಎಂದು ವಂಚನೆಗೊಂಡ ಮಹಾಲಕ್ಷ್ಮಿ ತಿಳಿಸಿದ್ದಾರೆ.


ಮಹಾಲಕ್ಷ್ಮಿ  45 ಲಕ್ಷ 

ದಿನೇಶ್ 37 ಲಕ್ಷ 

ಮನಸೂರ್  35 ಲಕ್ಷ 

ಮುರಳಿಧರ್  12 ಲಕ್ಷ 

ಪ್ರವೀನ್ 8 ಲಕ್ಷ 

ಅಬೂಕರ್ 22 ಲಕ್ಷ 

ಗುಣಶೇಖರ್ 48.32


ಹೀಗೆ ಸುಮಾರು 17ಕ್ಕೂ ಹೆಚ್ಚು ಜನರಿಗೆ ಒಂದಲ್ಲ ಒಂದು ಕಾರಣಕೊಟ್ಟು  ಮಹಿಳೆಯು ಸಲೀಸ ಆಗಿ  ಜನರಿಗೆ ಲಕ್ಷ ಲಕ್ಷ ರೂಪಾಯಿ ಮಕ್ಮಲ್  ಟೋಪಿ ಹಾಕಿದ್ದಾಳೆ. ಕೊನೆಗೂ ಜನರು ಈಗ ಮಹಿಳೆಯ ವಿರುದ್ದ ರೊಚ್ಚಿಗೆದ್ದಿದ್ದಾರೆ. ವಂಚನೆ ಮಾಡಿರುವ ಹಣ ವಾಪಸ್ ಕೊಡಿಸಬೇಕೆಂದು ಶಿವಮೊಗ್ಗ ಮತ್ತು ತೀರ್ಥಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈಗ ವಂಚನೆ ಆಗಿರುವ ಮಹಿಳೆಯಿಂದ ಜನರಿಗೆ ಅವರು ಕೊಟ್ಟಿರುವ ಸಾಲ ವಾಪಸ್ ಕೊಡಿಸುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮಂದಾಗಬೇಕೆಂದು ವಂಚನೆಗೊಳಗಾದವರು ಪೊಲೀಸರಿಗೆ ದೂರು ನೀಡಿದ್ದಾರೆ.   

ಮಹಿಳೆಯ ಬಣ್ಣದ ಮಾತು ಕೇಳಿ ಜನರು ಲಕ್ಷಾಂತರ ಹಣ ಕೊಳೆದುಕೊಂಡಿದ್ದಾರೆ. ಮಹಿಳೆಯರು ಚೆಕ್ ಕೊಟ್ಟು ಹಣ ಪಡೆದರು ವಂಚನೆಗೊಳಗಾದ ಜನರಿಗೆ ಮಾತ್ರ ಯಾವುದೇ ಪ್ರಯೋಗವಾಗುತ್ತಿಲ್ಲ. ಜೀಟಿಲವಾಗಿರುವ ಲೇಡಿ ವಂಚನೆ ಪ್ರಕರಣದ ಸೂಕ್ತ ತನಿಖೆಯಾಗಬೇಕಿದೆ. ಅಂದ್ರೆ ಮಾತ್ರ ಹಣಕೊಟ್ಟಿವರಿಗೆ ಹಣ ವಾಪಸ್ ಸಿಗುವ ಭರವಸೆ ಹುಟ್ಟುತ್ತದೆ ಎನ್ನುತ್ತಾರೆ ಗುಣಶೇಖರ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close