Suddilive || Shivamogga
ಅಟ್ಟಹಾಸ ಮೆರೆದ ಸಂದೀಪ್, ಬಿತ್ತು ಕೇಸ್-Laughing Sandeep, it was a case
ಉಂಬ್ಳೆಬೈಲು ಬಸ್ ನಿಲ್ದಾಣದ ಬಳಿ ಸಹೋದರನಿಗಾಗಿ ಕಾಯುತ್ತಿದ್ದ ವೇಳೆ ಸರಿಗೆರೆ ನಿವಾಸಿಯೊಬ್ಬ ಅಟ್ಟಹಾಸ ಮೆರೆದಿದ್ದಾರೆ. ಅಟ್ಟಹಾಸ ಮೆರೆದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.
ಮಾಲ್ತೇಶ್ ಎಂಬುವರ ಸಹೋದರ ದಾವಣಗೆರೆಯಲ್ಲಿ ಕಂಟ್ರ್ಯಾಕ್ಟ್ ಕೆಲಸ ಮಾಡಿಕೊಂಡಿದ್ದು ದಿನ ಅಪ್ ಅಂಡ್ ಡೌನ್ ಮಾಡಿಕೊಂಡಿದ್ದರು. ಸಹೋದರನನ್ನಬಿಡಲು ಉಂಬ್ಳೆ ಬೈಲು ಬಸ್ ನಿಲ್ದಾಣಕ್ಕೆ ಬಿಡುವುದು ಮತ್ತು ಕರೆದುಕೊಂಡು ಹೋಗುವ ಡ್ಯೂಟಿ ಮಾಲ್ತೇಧ್ ಅವರದ್ದು.
ಇತ್ತೀಚೆಗೆ ಮಾಲ್ತೇಶ್ ಸ್ನೇಹಿತ ಸುರೇಂದ್ರನೊಂದಿಗೆ ಸಹೋದರನಿಗಾಗಿ ಕಾಯುತ್ತಿದ್ದಾಗ ಸರಿಗೆರೆ ನಿವಾಸಿ ಸಂದೀಪ್ ಎಂಬಾತ ಬಂದು ಇಲ್ಲಿಯಾಕೆ ಇದ್ದೀರ ಎಂದು ಕಿರಿಕ್ ತೆಗೆದು ಮಾಲ್ತೇಶ್ ಮತ್ತು ಸುರೇಂದ್ರ ಎಂಬುವರನ್ನ ಥಳಿಸಿದ್ದಾನೆ. ಅವ್ಯಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಮಾಲ್ತೇಶ್ ಅವರ ಸಹೋದರ ಬಂದಿದ್ದು ನೋಡಿ ಸಂದಿಪ್ ಪರಾರಿಯಾಗಿದ್ದಾನೆ. ಆತನ ವಿರುದ್ಧ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Laughing Sandeep, it was a case