Suddilive || shivamogga
Jack well project will be completed with in the three months assured minister Bosaraj ಮೂರು ತಿಂಗಳ ಒಳಗೆ ಕಾಮಗಾರಿ ಮುಗಿಸುವ ಭರವಸೆ.
8 ಕೋಟಿ ವೆಷದಲ್ಲಿ ನಿರ್ಮಾಣ ವಾಗಬೇಕಾಗಿದ್ದ ಹೊಳಲೂರು ಏತನೀರಾವರಿ ಜಾಕ್ ವೆಲ್ ಯೋಜನೆ 21 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಕಾಮಗಾರಿ ಚಾಲ್ತಿಯಲ್ಲಿದೆ. ಈ ಯೋಜನೆಯ ಜಾಕ್ ವೆಲ್ ನ್ನ ವೀಕ್ಷಿಸಲು ಸಣ್ಣ ನೀರಾವರಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಭೋಸರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಸ್ಥಳೀಯ ಜನಪ್ರತಿನಿಧಿಗಳು ಈ ಜಾಕ್ ವೆಲ್ ಕಾಮಗಾರಿಯ ವಿಳಂಬದ ಬಗ್ಗೆ ನನ್ನ ಗಮನ ಹರಿಸಿದ್ದಾರೆ. ಇದನ್ನ ಮುಂದಿನ ಮೂರು ತಿಂಗಳಲ್ಲಿ ಕಾಮಗಾರಿ ಮುಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
2008 ರಲ್ಲಿ ಏತಾ ನೀರಾವರಿ ಯೋಜನೆ ಜಾರಿ ಮಾಡಲಾಗಿತ್ತು. ಈ ಕುರಿತು ಶಾಸಕಿ ಶಾರದ ಪೂರ್ಯನಾಯ್ಕ ರವರು ಸದನಲ್ಲಿ ಗಮನ ಸೆಳೆದಿದ್ದಾರೆ. ಇಲ್ಲಿ ಸ್ಥಳೀಯರನ್ನು ಭೇಟಿ ಮಾಡಿ ವಿಚಾರಿಸಿದಾಗ ಪಂಪ್ ಹೌಸ್ ನಿಂದ ನೀರು ಸರಿಯಾಗಿ ಕೆರೆಗಳಿಗೆ ತಲುಪುತ್ತಿಲ್ಲ. ಇಲ್ಲಿ ಒಂದು ಸಣ್ಣ ಕೆರೆಗೆ ನೀರು ತುಂಬಿಸಿ ನಂತರ ಉಳಿದ ಕೆರೆಗೆ ನೀರು ತುಂಬಿಸುವ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಹಣ ಪೂಲಾಗಿದ್ದು, ಮೇಲ್ನೂಟಕ್ಕೆ ಕಾಣ ಸಿಗುತ್ತಿದೆ. ಇದರಿಂದ ಈ ಕುರಿತು ತನಿಖೆ ನಡೆಸಬೇಕಿದೆ ಎಂದರು.
ಬಜೆಟ್ ನಲ್ಲಿ ಎಲ್ಲಾ ಜನರಿಗೆ, ಏಳು ಕೋಟಿ ಜನರ ದೃಷ್ಟಿಯಿಂದ ಮಂಡನೆ ಮಾಡಲಾಗಿದೆ. ಇಲ್ಲಿ ಒಂದು ಸಮುದಾಯಕ್ಕೆ ಒತ್ತು ನೀಡಿಲ್ಲ ಎಂದ ಸಚಿವರು, ಬಜೆಟ್ ನಲ್ಲಿ ಗ್ಯಾರಂಟಿಯನ್ನು ಮುಂದುವರೆಸುತ್ತಿದ್ದೆವೆ. ಗ್ಯಾರಂಟಿಯು ಭ್ರಷ್ಟಚಾರ ಇಲ್ಲದೆ ತಲುಪಿಸಲಾಗುತ್ತಿದೆ. ವಿರೋಧ ಪಕ್ಷದವರು ಆರೋಪ ನಿರಾಧಾರವಾದದ್ದು ಎಂದರು.
ಬಜೆಟ್ ಅತ್ತುತ್ತಮ ಬಜೆಟ್ ಆಗಿದೆ. ಗ್ಯಾರೆಂಟಿಗಯಲ್ಲಿ ಕಳೆದ ಬಾರಿ 29 ರೂ. ಅಕ್ಕಿ ಖರೀದಿ ಮಾಡುವ ಲೆಕ್ಕಾಚಾರದ ಮೇರೆಗೆ ಹಣ ನೀಡಲಾಗುತ್ತಿತ್ತು. ಈ ಬಾರಿ ಕೇಂದ್ರ ಸರ್ಕಾರ ಕಡಿಮೆ ದರಕ್ಕೆ ನೀಡುತ್ತಿರುವುದರಿಂದ 59 ಸಾವಿರ ಕೋಟಿಯಿಂದ 52 ಸಾವಿರ ಕೋಟಿ ಹಣ ನಿಗದಿ ಪಡಿಸಲಾಗಿದೆ ಎಂದರು.