Suddilive||Sahara
Because of inadequte power Supply in Sagara taluk Barangi hobli, Mla son in law memorundom to Hescom officer to set right the issues.
ಬಾರಂಗಿ ಹೋಬಳಿಯಲ್ಲಿ ವಿದ್ಯುತ್ ಅಸಮರ್ಪಕವಾಗಿ ಸರಬರಾಜು ವಾಗುತ್ತಿದ್ದು ಇದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿರುವ ಬೆನ್ನಲ್ಲೇ ಶಾಸಕ ಬೇಳೂರು ಗೋಪಾಲಕೃಷ್ಣ ಬೇಳೂರು ಅವರ ಅಳಿಯ ಅಶೋಕ್ ಬೇಳೂರು ಹುಬ್ಬಳ್ಳಿಯ ಹೆಸ್ಕಾಂ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಸಾಗರ ತಾಲೂಕಿನ ಬಾರಂಗೀ ಹೋಬಳಿ ನಾಗವಳ್ಳಿ ಗ್ರಾಮದಲ್ಲಿ ಸಮರ್ಪಕ ವಿದ್ಯುತ್ ನೀಡದೆ ಇರುವದರಿಂದ ವಿದ್ಯಾರ್ಥಿಗಳ ಓದಿಗೆ ತುಂಬಾ ಅನ್ಯಾಯವಾಗಿದೆ ಅಲ್ಲದೆ ರೈತರ ಬೆಳೆಗೆ ನೀರು ಕೊಡಲಾಗದೆ ಕಂಗಾಲಾಗಿದ್ದು ಈ ನಾಡಿಗೆ ಬೆಳಕು ನೀಡಲು ತಮ್ಮ ಮನೆ ಮಠ ಆಸ್ತಿ ಕಳೆದುಕೊಂಡಿರುವ ಶರಾವತಿ ಸಂತ್ರಸ್ತರಿಗೆ ಈ ರೀತಿಯ ಅನ್ಯಾಯ ಸಹಿಸಲಾಗದು ಸಮರ್ಪಕ ವಿದ್ಯುತ್ ನೀಡಲು ಮುಂದಾಗ ಬೇಕೆಂದು ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ವಾಸು , ಚಂದ್ರಶೇಖರ್ ,ವೀರಪ್ಪ ,ವೆಂಕಟೇಶ್ ಮಂಜುನಾಥ್ ದೇವೇಂದ್ರ,ಹಾಗು ಲಿಂಗರಾಜ್ ಉಪಸ್ಥಿತರಿದ್ದರು..