suddilive || sagara
ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಪ್ರತಿಭಟನೆ-Protest against inadequate power supply
ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ವಿದ್ಯುತ್ ಬಳಕೆದಾರರ ಹಿತರಕ್ಷಣಾ ಸಮಿತಿಯ ವತಿಯಿಂದ ಮೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ನಗರದ 13 ಸಾವಿರ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಮೆಸ್ಕಾಂ, ಆವಿನಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಾಂತರ ವಿದ್ಯುತ್ ಮಾರ್ಗದ ಮೂಲಕ ಅನುಷ್ಠಾನ ಗೊಳಿಸಲು ಮುಂದಾಗಿದೆ. ಇದರಿಂದ ಅನಿಯಮಿತ ಲೋಡ್ ಶೆಡ್ಡಿಂಗ್ ಉಂಟಾಗುತ್ತಿದೆ. ಆವಿನಹಳ್ಳಿ ಹೋಬಳಿಯ ಗ್ರಾಮೀಣ ವಿದ್ಯುತ್ ಬಳಕೆದಾರರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಆವಿನಹಳ್ಳಿ ಹೋಬಳಿಯ ಗ್ರಾಮಾಂತರ ಪ್ರದೇಶದ ಜನರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಗಿಣಿವಾರದಲ್ಲಿ 33 ಕೆ.ವಿ. ವಿದ್ಯುತ್ ಗ್ರಿಡ್ ಸ್ಥಾಪಿಸಬೇಕು. ಹರಿದ್ರಾವತಿಯಲ್ಲೂ ಇದೇ ಮಾದರಿಯ ಗ್ರಿಡ್ ಸ್ಥಾಪಿಸುವ ಮೂಲಕ ಬಟ್ಟೆಮಲ್ಲಪ್ಪ, ಹೆಗ್ಗೋಡು ಹಾಗೂ ಸುತ್ತಲಿನ ಗ್ರಾಮಗಳ ವಿದ್ಯುತ್ ಗ್ರಾಹಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಎಸ್.ವಿ.ಹಿತಕರ ಜೈನ್, ಕೆ.ಎನ್. ವೆಂಕಟಗಿರಿ, ತೀ.ನ. ಶ್ರೀನಿವಾಸ್, ಸುಂದರ್ ಸಿಂಗ್, ವಿಜಯೇಂದ್ರ ಶ್ಯಾನಭಾಗ್, ಮಂಜುನಾಥ್ ಇದ್ದರು.
inadequate power supply