MLA Rajiv Kudachi accused-ದಲಿತರ ಹಣ ಡೈವರ್ಟ್ ಆದರೆ ಮುಂದಿನ ದಿನಗಳಲ್ಲಿ ಯಾವುದೇ ಶಾಸಕರನ್ನಾಗಲಿ, ಸಚಿವರನ್ನಾಗಲಿ ಓಡಾಡಲು ಬಿಡಲ್ಲ-ರಾಜೀವ್ ಕುಡಚಿ


Suddilive || Shivamogga

MLA Rajiv Kudachi accused state government misused the Dalit's fund's 25 ಕೋಟಿ ರೂ. ಹಣವನ್ನ ರಾಜ್ಯಸರ್ಕಾರ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಡೈವರ್ಟ್ ಮಾಡಲಾಗಿದೆ ಎಂದರು. 

Rajiv kudchi, Mla


ದಲಿತರ ಅಭಿವೃಧ್ಧಿಗೆ ಬಳಸಬೇಕಾದ 25 ಕೋಟಿ ಹಣ ದುರ್ಬಳಕೆ ಯಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಶಾಸಕ ರಾಜೀವ್ ಕುಡಚಿ ಆರೋಪಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಎಲ್ಲಾ ದಲಿತ ಗಲ್ಲಿ, ತಾಂಡಗಳಲ್ಲಿ ವಾಸ ಮಾಡುವ ಎಲ್ಲಾ ರಸ್ತೆಗಳು ಕಾಂಕ್ರೀಟ್ ಆಗಬೇಕು‌. ಇದನ್ನ ಬಿಎಸ್ ವೈ ಮಾಡಿದ್ದರು. ಆದರೆ ಎರಡುವರ್ಷದ ಸಿದ್ದರಾಮಯ್ಯ ಸರ್ಕಾರದಲ್ಲಿ ಒಂದು ಪುಟ್ಟಿ ಸಿಮೆಂಟ್ ಹಾಕಿಲ್ಲ.  ಸಾವಿರಾರು ಗಂಗಕಲ್ಯಾಣ ಯೋಜನೆ ಬಂದಿದೆ. ಬೋರ್, ಟ್ರಾನ್ಸ್ ಫಾರಂ ಗೆ ಉಚಿತವಾಗಿ ಕೆಲಸ ನಡೆಯಬೇಕಿತ್ತು. ಒಬ್ಬ ಶಾಸಕರ ಕ್ಷೇತ್ರದಲ್ಲಿ 15-20 ಗಂಗಕಲ್ಯಾಣ ಆಗುತ್ತಿತ್ತು. 

ಈ ಸರ್ಕಾರದ ಅವಧಿಯಲ್ಲಿ ಒಬ್ಬ ಶಾಸಕ 10 ಬೋರ್ ಕೊರೆಸಿದ ನಿದರ್ಶನಗಳೆ ಬೆಳಕಿಗೆ ಬರಲಿಲ್ಲ ಸಾವಿರಾರು ಮನೆಗಳ ಹಂಚಿಕೆಯಾಗಬೇಕಿತು. ಒಂದು ಗ್ರಾಪಂಗೆ 400-500 ಎಸ್ ಸಿ ಎಸ್ಟಿ ಮನೆಗಳು ಬರ್ತಾಇತ್ತು. ಈ ಕಾಂಗ್ರೆಸ್ ನ ಸರ್ಕಾರ ಒಂದು ಮನೆ ಬಿಡುಗಡೆವಮಾಡಿಲ್ಲ. ಬಸವವಸತಿ ಯೋಜನೆಯಲ್ಲಿ ಎರಡು ವರ್ಷದಲ್ಲಿ ಸಿಂಗಲ್ ಮನೆ ಬಿಡುಗಡೆ ಮಾಡಿಲ್ಲ. ಎಸ್ ಸಿ, ಎಸ್ಟಿ ಮನೆಗಳನ್ನ ಬಿಡುಗಡೆಮಾಡಿಲ್ಲ ಎಂದು ದೂರಿದರು. 

ಸ್ವಾತಂತ್ರ್ಯ ಬಂದಾಗಿನಿಂದ ಯಾವುದೇ ಸರ್ಕಾರ ಈ ನಿಲುವುಗಳನ್ನ ತಾಳಿಲ್ಲ. ಎಸ್ ಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ ಯಾವುದೇ ಯೋಜನೆ ಬಿಡುಗಡೆಯಾಗಿಲ್ಲ. ಮೈನರ್ ಇರಿಗೇಷನ್ ನಿಂದ ನೀರಾವರಿ ಯೋಜನೆಯನ್ನ, ಉದ್ಯಮಶೀಲತ ಯೋಜನೆ, ಹೈನುಗಾರಿಕೆಗೆ ಮೊದಲಾದ ಕ್ಷೇತ್ರಗಳಿಗೆ  ಅನುದಾನ ಮಾಡದೆ ದಲಿತರನ್ನ ನಡುರಸ್ತೆಯಲ್ಲಿ ನಿಲ್ಲಿಸಲಾಗಿದೆ ಎಂದು ಆರೋಪಿಸಿದರು. 

ಅಹಿಂದ ಮತಕ್ಕಾಗಿ ಭಾಷಣ ಮಾಡುವ ಸಿದ್ದರಾಮಯ್ಯ ಸರ್ಕಾರ ಎಸ್ ಸಿ ಪಿ ಟಿಎಸ್ಪಿ ಹಣದಲ್ಲಿ 39 ಸಾವಿರ ಕೋಟಿ ಹಣ ತೆಗೆದಿಡುವುದಾಗಿ ಹೇಳಿದ್ದಾರೆ. ಎಮ್ಮೆ, ಕುರಿ, ಗೂಡಂಗಡಿಗಳನ್ನ ದಲಿತರಿಗೆ ನೀಡದ ಸರ್ಕಾರ ದಲಿತರ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು. 

ಯೋಜನ ಆಯೋಗ ದಲಿತರ ಜನಸಂಖ್ಯೆಗೆ ತಕ್ಕ ಯೋಜನೆ ರಚಿಸಬೇಕು ಎಂದು 1974 ರಲ್ಲಿ ಸುತ್ತೋಲೆ ಹೊರಡಿಸಿದೆ. ಸಂವಿಧಾನದ  ಎಸ್ ಸಿಪಿ ಟಿ ಎಸ್ಪಿ ಹಣ ಇಡಬೇಕು ಎಂಬ ಆದೇಶದ ಮೇರೆಗೆ ಹಣತೆಗೆದಿಡಲಾಗಿದೆ. 2013 ರಲ್ಲಿ ಈ ಆದೇಶ ಬಂದರೂ ಹಿಂದಿನ ಸರ್ಕಾರ ಹಣ ಕರ್ಚು ಮಾಡಿದೆ. ಇದನ್ನ ಸಚಿವ ಮಹದೇವಪ್ಪನವರು ನಮ್ಮ ಸರ್ಕಾರದ ಕೊಡುಗೆ ಎಂದಿದ್ದಾರೆ. 

2013 ರಲ್ಲಿ ಈ ಆಕ್ಟ್ ಬಂದಿದೆ ಎಂದು ಸಚಿವ ಮಹದೇವಪ್ಪನವರು ಹೇಳುತ್ತಾರೆ. 2013 ಆಕ್ಟ್ ಬರುವ ಮುಂಚಿನ ಬಿಎಸ್ ವೈ  ಸರ್ಕಾರ ದಲಿತರಿಗೆ 9000 ಕೋಟಿ ಹಣ ಕರ್ಚು ಮಾಡಿದ್ದಾರೆ. ಈಗಿನ ಸಿದ್ದರಾಮಯ್ಯ ಸರ್ಕಾರ ಹಣ ಕರ್ಚು ಮಾಡುವುದಿರಲಿ ಅನುಮೋದಿಸಿದ ಹಣವನ್ನೂ ನೀಡುತ್ತಿಲ್ಲ. ಈ ಆಕ್ಟ್ ತೆಗೆದುಕೊಂಡು   ನೆಕ್ಕಬೇಕಾ ಎಂದು ಪ್ರಶ್ನಿಸಿದರು. 

2021-22 ರಲ್ಲಿ ಶಿವಮೊಗ್ಗ ಜಿಲ್ಲೆಯ ಎಸ್ ಸಿ ಎಸ್ಟಿ ಯೋಜನೆಗಳು 13 ಕೋಟಿ ರಿಲೀಸ್ ಆಗಿದೆ. 2024-25 ರಲ್ಲಿ 6 ಕೋಟಿ ಬಿಡುಗಡೆ ಮಾಡಿದೆ. ಆಗಿನ ಬಜೆಟ್ ಗಾತ್ರ ಮತ್ತು ಈಗಿನ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಸಾಕಷ್ಟು ದೊಡ್ಡಪ್ರಮಾಣ ಅನುದಾನ ದಲಿತರಿಗೆ ಬರಬೇಕಿತ್ತು. ಇದು ಅನ್ಯಾಯವಾಗಿದೆ ಎಂದರು. 

ಲ್ಯಾಪ್ ಟ್ಅಪ್ ಗಳನ್ನ ವಿವಿ ವಿದ್ಯಾರ್ಥಿಗಳಿಂದ ವಾಪಾಸ್ ಪಡೆಯಲಾಗುತ್ತಿದೆ. ವಿದ್ಯಾರ್ಥಿ ವೇತನ ನೀಡಿಲ್ಲ. ಮಾತು ಎತ್ತಿದರೆ ಸಂವಿಧಾನ ಪುಸ್ತಕ ಹಿಡಿದುಕೊಂಡು ಓಡಾಡುವ ಈ ರ್ಸಕಾರ ದಲಿತರ ಅಭಿವೃದ್ಧಿ ಮಾಡದೆ ಮೂಗಿ್ಎ ತುಪ್ಪ ಸುರಿಯುವ ಕೆಲಸ ಮಾಡಿದೆ. ಕಾಂಗ್ರೆಸ್ ನ ಜಿರಂತರ ಆಡಳಿತದಿಂದ  ಬಡತನ ನಿರ್ಮೂಲನೆ ಆಗಬೇಕಿತ್ತು. ಅದು ಆಗ್ತಯಿಲ್ಲ. ಕಾರಣ ದಲಿತರ ಹಣವನ್ನ ಡೈವರ್ಟ್ ಮಾಡಲಾಗುತ್ತಿದೆ.   ಎಸ್ ಎಸ್ಟಿಗಳನ್ನ ಚಾಚುವ ಕೈಗಳನ್ನಾಗಿ ಮಾಡಿಕೊಂಡಿದೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಆಗಲೇ ಇಲ್ಲ. ಎಸ್ ಸಿಪಿ ಟಿಎಸ್ಪಿ ಗಳ ಹಣ ಡೈವರ್ಟ್ ಮಾಡಿದರೆ ದಲಿತರ ಉದ್ದಾರವಾಗೊಲ್ಲ ಎಂದರು. 

39 ಸಾವಿರ ಕೋಟಿ ದಲಿತರ ಅಭಿವೃದ್ಧಿಗೆ ಎನ್ನುವ ಸಿದ್ದರಾಮಯ್ಯ ಅಭಿವೃದ್ಧಿಗೆ ಒಂದು ರೂ. ನೀಡಿಲ್ಲ. 7 ನೇ ತಾರೀಖು ಬಜೆಟ್ ನಲ್ಲಿ ಎಸ್ ಎಸ್ಟಿಗೆ ಮೀಸಲಾದ ಹಣ ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುವತ್ತ ಬಳಕೆ ಆಗಬೇಕು.‌ ಒಂದು ವೇಳೆ ಡೈವರ್ಟ್ ಆದರೆ ಯಾವುದೇ ಸಚಿವರನ್ನ ಶಾಸಕರನ್ನ ಬೀದಿನಲ್ಲಿ ಓಡಾಡಲು ಬಿಡಲ್ಲ. ನಮ್ಮ ಸಂವಿಧಾನ ನಮ್ಮ ಹಕ್ಕಿನ ಅಡಿ ಹೋರಾಟ ನಡೆಸಲಾಗುವುದು. ಈ ನಿಟ್ಟಿನಲ್ಲಿ ಇಂದು ಶಿವಮೊಗ್ಗದಲ್ಲಿ ಪತ್ರಿಭಟನೆ ನಡೆಸಲಾಗುತ್ತಿದೆ ಎಂದರು. 

39 ಸಾವಿರ ಕೋಟಿ ಅನುಮೋದನೆ ಮಾಡಿ ಕರ್ಚಾಗಿದೆ. ಈ ಹಣ ದಲಿತರ ಹಣ ಡೈವರ್ಡ್ ಆಗಿರುವುದು ರಾಜಸ್ವ ವೆಚ್ಚಕ್ಕೆ ಬಳಕೆಯಾಗಿದೆ. ಬಂಡವಾಳ ವೆಚ್ಚವಾಗಿರುವ ಅಭಿವೃದ್ಧಿ ಕೆಲಸ ರಾಜಸ್ವ ವೆಚ್ಚದ ಅಡಿ ಬರೊಲ್ಲ. ಒಂದು ವೇಳೆ ಗ್ಯಾರಂಟಿ ಯೋಜನೆಗಳನ್ನ ಕೈಬಿಟ್ಟರೂ ಪ್ರತಿಭಟಿಸಲಾಗುವುದು. ಎಸ್ ಸಿ ಎಸ್ಟಿ 

ಸುದ್ದಿಗೋಷ್ಠಿಯಲ್ಲಿ ಎಂಎಲ್ ಸಿ ಡಾ.ಧನಂಜಯ ಸರ್ಜಿ, ರಾಜ್ಯ ಬಿಜೆಪಿ ಎಸ್ ಸಿ ಎಸ್ಟಿ ಮೋರ್ಚದ ಬಂಗಾರು ಹನುಮಂತು,  ಜಿಲ್ಲಾ ಬಿಜೆಪಿ ಜಗದೀಶ್, ದತ್ತಾತ್ರಿ, ಹರೀಶ್ ಮೊದಲಾದವರು ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close