suddilive || Shivamogga
Water supplies has staged Dharana in front of the office to fulfil the demands.
ನಗರದ ಕೆಇಬಿ ವೃತ್ತದ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯ ಹೊರಗುತ್ತಿಗೆ ನೀರುಗಂಟಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಠಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಹೋರಾಟಕ್ಕೆ ಜೆಡಿಎಸ್ ನ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ನ. ಪ್ರಸನ್ನ ಕುಮಾರ್ ಬೆಂಬಲಿಸಿದ್ದಾರೆ.
ಕಚೇರಿಯ ಮುಂಭಾಗದಲ್ಲಿ ಎಲ್ಲಾ ರಾಜ್ಯದ ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಹೊರಗುತ್ತಿಗೆ ಅಡಿಯಲ್ಲಿ ವಿವಿಧ ವೃಂಧದಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರು ಸರಬರಾಜು ನೌಕರರನ್ನ ಆಯಾ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿರುವ ವೃಂದಗಳಿಗೆ ನೇಮಕಾತಿ ಮಾಡಬೇಕು,
ಹೊರಗುತ್ತಿಗೆ ನೀರು ಸರಬರಾಜು ನೌಕರರಿಗೆ ಹುದ್ದೆ ಖಾಯಂಗೊಳಿಸುವ ತನಕ ನೇರಪಾವತಿ ಮಾಡಬೇಕು. ಸುಪ್ರೀಂ ಆದೇಶದಂತೆ ಸಮಾನಕೆಲಸಕ್ಕೆ ಸಮಾನ ವೇತಬದ ಅಡಿ ಸಂಬಳ ನೀಡಬೇಕು. ವಾರದ ಎಲ್ಲಾ ದಿನಗಳಲ್ಲಿ ಎಂಟುಗಂಟೆಗಳ ಕೆಲಸ ಹೆಚ್ಚುವರಿ ಕೆಲಸಕ್ಕೆ ಕಾನೂನು ಬದ್ಧ ವೇತನ, ಸಂಬಳ ಸಹಿತ ರಜೆ,
ರಾಷ್ಟ್ರೀಯ ಹಬ್ಬಗಳು, ಹಬ್ವದ ರಜೆ, ಗಳಿಜೆ ರಜೆ, ಅನಾರೋಗ್ಯ ರಜೆ, ಕಾರ್ಮಿಕ ಅವಲಂಭಿತರಿಗೆ ಮತ್ತು ನಿವೃತ್ತಿ ಹೊಂದಿದವರಿಗೆ ಉಪಧನ ನೀಡಿವ ಬಗ್ಗೆ ಸ್ಪಷ್ಟತೆ ನೀಡಬೇಕು. ಪಿಎಫ್ ಮತ್ತು ಇಎಸ್ಐ ಗಳನ್ನ ಸರಿಯಾಗಿ ಅವಿತಿಸುವಂತಾಗಬೇಕು. ಸೇವಾಭದ್ರತೆ ಮತ್ತಿ ನೌಕರರಿಗೆ ಸರ್ಕಾರ ಗೃಹ ಭಾಗ್ಯ ಮೊದಲಾದ ಸವಲತ್ತನ್ನ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.