suddilive || Shivamogga
In Shivamogga, it is being discovered that borrowers are slowly running into problems with finance companies. Due to the high interest rates charged by finance companies, borrowers are continuing to struggle.
ಶಿವಮೊಗ್ಗದಲ್ಲಿ ನಿಧಾನವಾಗಿ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದವರ ಸಮಸ್ಯೆಗಳಿಗೆ ಒಳಗಾಗುತ್ತಿರುವುದು ಪತ್ತೆಯಾಗುತ್ತದೆ. ಫೈನಾನ್ಸ್ ಅವರ ಅತಿಹೆಚ್ಚು ಬಡ್ಡಿಯ ಕಾರಣ ಸಾಲ ಪಡೆದವರು ಪರದಾಟ ಮುಂದುವರೆದಿದೆ.
ಹಾಯ್ ಹೊಳೆಯಲ್ಲಿ ತಿರುಪತಿ ಎಂಬುವರು ಫೈನಾನ್ಸ್ ಗೆ ಹಣಕಟ್ಟಕ್ಕಾಗದೇ ಇರುವುದರಿಂದ ಫೈನಾನ್ಸ್ ಅವರೇ ಮನೆಯ ಬಾಗಿಲ ಮುಂದೆ ಬಂದು ಕಿರುಕುಳ ನೀಡಿರುವ ಘಟನೆ ವರದಿಯಾಗಿತ್ತು. ಆ ವಿಡಿಯೋ ವೈರಲ್ ಆಗಿತ್ತು.
ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವಾಹನದ ಮೇಲೆ ಸಾಲ ಮಾಡಿದ ಯುವಕನೋರ್ವ ಮನೆಯಲ್ಲಿ ಪತ್ರ ಬರೆದು ನಾಪತ್ತೆಯಾಗಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣ ಸುಖಾಂತ್ಯ ಕಂಡರೂ ಫೈನಾನ್ಸ್ ಅವರಿಂದ ಕಿರುಕುಳು ಮುಂದುವರೆದಿರುವುದು ಸತ್ಯವಾಗಿದೆ.
ದ್ವಿಚಕ್ರ ವಾಹನಕ್ಕೆ ಸಾಲ ಪಡೆದಿದ್ದ ಯುವಕ ಮನೆಯನ್ನಬಿಟ್ಟು ಬೆಂಗಳೂರು ಸೇರಿದ್ದ. ಆದರೆ ಯುವಕ ಪತ್ತೆಯಾಗಿದ್ದಾನೆ. ಪ್ರಕರಣ ಸುಖಾಂತ್ಯ ಕಂಡಿದೆ. 2.5 ಲಕ್ಷ ಸಾಲಕ್ಕೆ ಬಡ್ಡಿಕಟ್ಟಲಾಗದೆ ಯುವಕ ಮನೆ ಬಿಡುವಂತಾಗಿತ್ತು. ಈ ಕಿರುಕುಳ ತಪ್ಪಿಸಲು ಸರ್ಕಾರ ಕಾನೂನು ಮಾಡಿದರೂ ಕಾನೂನು ಲೆಕ್ಕವಿಲ್ಲದಂತಾಗಿದೆ. ಜನರ ಪರದಾಟ ಮುಂದುವರೆದಿದೆ.
borrowers are slowly running into problems