ಸ್ಪರ್ಧಾತ್ಮಕ ಯುಗದಲ್ಲೂ ಉತ್ತಮ ಶಿಕ್ಷಣ ಪಡೆಯಲು ಅವಕಾಶ-ಡಾ.ನಾಗೇಂದ್ರ- good education even in the competitive era

 Suddilive || Shivamogga

ಸ್ಪರ್ಧಾತ್ಮಕ ಯುಗದಲ್ಲೂ ಉತ್ತಮ ಶಿಕ್ಷಣ ಪಡೆಯಲು ಅವಕಾಶ-ಡಾ.ನಾಗೇಂದ್ರ-Opportunity to get good education even in the competitive era - Dr. Nagendra

Education, era


ಶಿವಮೊಗ್ಗ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಶಿಕ್ಷಣ ಪಡೆಯಲು ಹೆಚ್ಚಿನ ಅವಕಾಶಗಳಿವೆ ಎಂದು ಸುಬ್ಬಯ್ಯ ಮೆಡಿಕಲ್‌ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಸ್‌ ನಾಗೇಂದ್ರ ಅವರು ಹೇಳಿದರು

ಸುಬ್ಬಯ್ಯ ಮೆಡಿಕಲ್‌ ಕಾಲೇಜು ಟ್ರಸ್ಟ್‌ ವತಿಯಿಂದ ಇಂದಿಲ್ಲಿ ಆಯೋಜಿಸಲಾಗಿದ್ದ ಪಿಯುಸಿ ನಂತರದಲ್ಲಿ ವಿದ್ಯಾ‍ರ್ಥಿಗಳು  ಕೋರ್ಸು ಆಯ್ಕೆ ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ʼಮಲೆನಾಡು ಎಜ್ಹುಕೇಶನ್‌ ಫೇರ್‌ʼ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆ ಇದೆ  ಅಂದರೆ ಪೈಪೋಟಿ ಹೆಚ್ಚಾಗಿದೆ

ಎಂದರ್ಥ. ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕೆ ಪೂರಕವಾದ ಶಿಕ್ಷಣ ಪಡೆಯಲು ಮುಕ್ತ ಅವಕಾಶಗಳು ಲಭ್ಯವಿದೆ ಎಂದರು.ಪಿಯುಸಿ ನಂತರ ಯಾವ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿರುತ್ತದೆ. ಈ ಸಂದರ್ಭದಲ್ಲಿ   ಭವಿಷ್ಯದ ದೃಷ್ಟಿಯಿಂದ ತಮಗೆ ಪೂರಕವಾದ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬೇಕು.  ವೃತ್ತಿಪರ ಕೋರ್ಸುಗಳಲ್ಲಿ  ಬಹುಅವಕಾಶಗಳು ಇಂದು ಸಿಗುತ್ತಿದ್ದು, ಅದರಲ್ಲೂ ಪ್ಯಾರಾಮೆಡಿಕಲ್‌ ಶಿಕ್ಷಣ ಸೇವೆ ಮತ್ತು ಉದ್ಯೋಗ ಭದ್ರತೆಯನ್ನು ಹೊಂದಿವೆ. ಇವುಗಳನ್ನು ಬಳಸಿಕೊಳ್ಳಬೇಕುಎಂದರು.

ಕಾ‍ರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಎನ್‌ ರವಿಕುಮಾರ್‌ ಅವರು ಶಿಕ್ಷಣ ಕೇವಲ ದುಡಿಮೆಯ ಸಾಧನವಲ್ಲ. ವ್ಯಕ್ತಿವಿಕಸನದ ಸಂಪನ್ಮೂಲವೂ ಆಗಿದೆ.  ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಳ್ಳಸಬೇಕು, ಕೇವಲ ಜೀವನೋಪಾಯಕ್ಕೆ ಮಾತ್ರ ಶಿಕ್ಷಣ ಎನ್ನುವ ಒತ್ತಡಗಳಿಂದ ಮುಕ್ತರಾಗಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ , ಅದರೊಂದಿಗೆ ಈ ಸಮಾಜವನ್ನು ಕಟ್ಟುವ ಕನಸು ಹೊಂದಬೇಕು ಎಂದು ಕರೆ ನೀಡಿದರು.

 ಎಷ್ಟೇ ಉತ್ಕೃಷ್ಟ ಶಿಕ್ಷಣ ಪಡೆದರೂ, ಉನ್ನತ ಹುದ್ದೆ ಸಂಪಾದಿಸಿದರೂ ಮಾನವೀಯತೆ ಇಲ್ಲದ ಶಿಕ್ಷಣ ವ್ಯರ್ಥ. ಆಧುನಿಕ ಸಂವಹನ-ಸಂಪರ್ಕದ ಯುಗದಲ್ಲಿರುವ ನಮ್ಮ ಕೈಗಳ ಬೆರಳ ತುದಿಯಲ್ಲೆ ಜಗತ್ತಿದೆ. ಆಧುನಿಕ ತಂತ್ರಜ್ಞಾವನ್ನು  ಮನುಷ್ಯ ರ  ಒಳಿತಿಗೆ ಬಳಸಿ ಕೊಳ್ಳುವುದು ಮತ್ತು ಮೌಲ್ಯಾಧಾರಿತ ಶಿಕ್ಷಣ ಪಡೆಯುವ ಮೂಲಕ ದೇಶ ಕಟ್ಟುವ ಕೆಲಸದಲ್ಲಿ ಕೈ ಜೋಡಿಸಬೇಕು ಎಂದು ಎನ್.ರವಿಕುಮಾರ್‌ ಕರೆ ನೀಡಿದರು

ಸಮಾರಂಭದಲ್ಲಿ ಸೆಕ್ರೆಡ್‌ ಹಾರ್ಟ್‌ ಚರ್ಚ್‌ ಫಾದರ್‌ ಸ್ಟ್ಯಾನಿ ಡಿಸೋಜ,  ಸುಬ್ಬಯ್ಯ ಟ್ರಸ್ಟ್‌ ನ ಟ್ರಸ್ಟಿಗಳಾದ ‌,ಲತಾ ನಾಗೇಂದ್ರ, ಡಾ. ಶ್ರೀನಿವಾಸ್‌, ಡಾ. ವಿನಯಾ ಶ್ರೀನಿವಾಸ್, ಸುಬ್ಬಯ್ಯ ನರ್ಸಿಂ ಗ್‌ ಕಾಲೇಜು ಪ್ರಾಂಶುಪಾಲರಾದ ಡಾ. ವನಮಾಲ. ಡಾ.ಜೋಬಿ , ಸಂಪನ್ಮೂಲ ವ್ಯಕ್ತಿಗಳಾದ ಡಾ. ಮೋಹಿದ್ದೀನ್‌ ಖಾನ್‌ ಉಪಸ್ಥಿತರಿದ್ದರು.

ಶೈಕ್ಷಣಿಕ ಮೇಳದಲ್ಲಿ ವಿವಿಧ ಕಾಲೇಜುಗಳು ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಕೋರ್ಸುಗಳ ಆಯ್ಕೆ ಸಂಬಂಧ ಮಾಹಿತಿ ಮಾರ್ಗದರ್ಶನ ನೀಡಲಾಯಿತು.

good education even in the competitive era

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close