ಶಾಸಕಿ ಶಾರದಾ ಪೂರ್ಯನಾಯ್ಕರಿಗೆ ಓಪನ್ ಆಫರ್ ನೀಡಿದ ಸಚಿವ ಮಧು ಬಂಗಾರಪ್ಪ- open offer to MLA Sharada Pooryanayak

Suddilive || Shivamogga

ಶಾಸಕಿ ಶಾರದಾ ಪೂರ್ಯನಾಯ್ಕರಿಗೆ ಓಪನ್ ಆಫರ್ ನೀಡಿದ ಸಚಿವ ಮಧು ಬಂಗಾರಪ್ಪ-Minister Madhu Bangarappa makes an open offer to MLA Sharada Pooryanayak  

MLA, offer


ರಾಜಕಾರಣ ಯಾವಾಗ ಹೇಗೆ ನಡೆಯುತ್ತೆಗೊತ್ತಿಲ್ಲ. ಕಾಂಗ್ರೆಸ್ ಎಸ್ಪಿಯಲ್ಲಿದ್ದ ಮಾಜಿ ಸಿಎಂ ಬಂಗಾರಪ್ಪನವರು ಬಿಜೆಪಿಗೆ ಬಂದ ನಂತರ ಬಿಜೆಪಿಯ ಅದೃಷ್ಠದ ಬಾಗಿಲೇ ತೆರೆದುಕೊಂಡಿತ್ತು. ನಂತರ ನಡೆದಿದ್ದೇ ಇತಿಹಾಸ. ಈಗ ಕಾಲ ಬದಲಾಗಿದೆ. ಈಗ ಹತ್ತಿರದಲ್ಲಿ ಯಾವ ಚುನಾವಣೆಯೂ ಇಲ್ಲ ಆದರೂ ಸಚಿವ ಮಧು ಬಂಗಾರಪ್ಪ ಶಾಸಕಿ ಶಾರದಾ ಪೂರ್ಯನಾಯ್ಕ್ ಗೆ ಓಪನ್ ಆಫರ್ ನೀಡಿದ್ದಾರೆ. 


ಜೆ ಡಿ ಎಸ್ ಶಾಸಕಿ ಶಾರದಾ ಪೂರ್ಯ ನಾಯ್ಕ್ ಗೆ ವೇದಿಕೆಯಲ್ಲೇ ಕಾಂಗ್ರೇಸ್ ಸೇರುವಂತೆ ಸಚಿವರು ಆಫರ್ ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರದ ಪುರದಾಳು ಗ್ರಾಮದಲ್ಲಿ ಬಾರೆಹಳ್ಳ ಡ್ಯಾಂ ಹಾಗೂ ಹಾಯ್ ಹೋಳೆ ಡ್ಯಾಂಗಳ ಅಭಿವೃದ್ಧಿ ಕಾರ್ಯಕ್ಕೆ ಶಂಕು ಸ್ಥಾಪನೆ ವೇಳೆ ಆಫರ್ ನೀಡಿದ್ದಾರೆ. 

ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿದ್ದ ಶಾಸಕರು ಮತ್ತು ಸಚಿವ ಮಧು ಬಂಗಾರಪ್ಪ ಇಬ್ಬರು ಒಂದೇ ಕಡೆ ಇದ್ದು ಮತಕೇಳೋಣಾ ಎಂದ ಮಧುಬಂಗಾರಪ್ಪ ತಿಳಿಸಿದ್ದಾರೆ. ಅಧಿಕಾರ ನಮ್ಮ ಕಡೆ ಇದೆ ನಮ್ಮ ಕಡೆ ಬಂದರೆ ಆಭಿವೃದ್ಧಿ ಮಾಡಬಹುದು ಎಂದು ಸಚಿವ ಮಧುಬಂಗಾರಪ್ಪ ತಿಳಿಸಿದರು. 

ಈಗಲೇ ಬಂದರೇ ಒಳ್ಳಯದು ಬಿಸಿಲು ಇದ್ದಾಗಲೇ ಹುಲ್ಲನ್ನು ಒಣಗಿಸಿಕೊಳ್ಳಬೇಕು ಎಂದು ಗಾದೆ ಹೇಳಿ ಪಕ್ಷಕ್ಕೆ ಕರೆದ ಸಚಿವರು, ಕಾರ್ಯಕರ್ಮದಲ್ಲಿ ಭಾಗಿಯಾಗಿದ್ದ ಜನರಿಗೆ ಶಾರದಾ ಪೂರ್ಯ ನಾಯ್ಕ್ ಗೆ ಒಪ್ಪಿಸಲು ಮನವಿ ಮಾಡಿದರು.

open offer to MLA Sharada Pooryanayak

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close