ಯುವತಿಯ ಪ್ರೀತಿ ಬಯಸಿದವನ ವಿರುದ್ಧ ದೂರು-seeking the love of a young woman

Suddilive || Thirthahalli

An incident has been registered at the Thirthahalli Police Station where a young man, seeking the love of a young woman, pulled the young woman's hand at a party and threatened her with death, saying, "If you don't cooperate with his love, I won't let you go, even with your life."

Thirthahalli, love case

ಯುವತಿಯ ಪ್ರೀತಿ ಬಯಸುವ ಯುವಕನೋರ್ವ ಸಂತೆಯಲ್ಲಿ ಯುವತಿಯ ಕೈ ಎಳೆದು ನೀನು ಪ್ರೀತಿಗೆ ಸಹಕರಿಸದಿದ್ದೆ ನಿನ್ನನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುವ ಘಟನೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

20 ವರ್ಷದ ಯುವತಿ ತನ್ನ ಪೋಷಕರ ಜೊತೆ ತೀರ್ಥಹಳ್ಳಿಗೆ ರಸ್ತೆ ಕಾಮಗಾರಿಗಾಗಿ ಕೂಲಿಕೆಲಸಕ್ಕೆ ತೆರಳಿದ್ದಳು. ಈ ಯುವತಿಯ ಬೆನ್ನು ಬಿದ್ದ ಸೊಪ್ಪುಗುಡ್ಡೆಯ ನಿವಾಸಿಯ ಯುವಕ ಆಕೆಯ ಮೊಬೈಲ್ ನಂಬರ್ ಪಡೆದು ಕರೆ ಮಾಡಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. 

ಇತ್ತೀಚೆಗೆ ರಾತ್ರಿಯ ವೇಳೆ ಕರೆ ಮಾಡಿದ ಯುವಕ ನಿಮ್ಮ ಕೇರಿಯ ಯುವಕ ನಾನು ನಿನ್ನನ್ನ ಪ್ರೀತಿಸುತ್ತಿರುವೆ ಎಂದಿದ್ದಾನೆ. ನೀನು ಯಾರು ಗೊತ್ತಿಲ್ಲ. ನನ್ನ ತಾಯಿಯ ಬಳಿ ಬಂದು ಮಾತನಾಡು ಎಂದು ಹೇಳಿ ಕರೆಯನ್ನ ಯುವತಿ ಕಟ್ ಮಾಡಿರುತ್ತಾರೆ.

ಇದಾದ ಬಳಿಕ ಊರಿನ ಸಂತೆ ನಡೆಯುವ ಜಾಗದಲ್ಲಿ ಯುವತಿಯ ಹಿಂಬಾಲಿಸಿಕೊಂಡು ಬಂದ ಯುವಕ ಯುವತಿಯ ಕೈ ಹಿಡಿದು ಎಳೆದು ಪ್ರೀತಿಗೆ ಸಹಕರಿಸದೆ ಇದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

seeking the love of a young woman

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close