Suddilive || Bhadravati
ಅಂಬೇಡ್ಕರ್ ಜಯಂತಿ ಮತ್ತು ಅಗ್ನಿಶಾಮಕ ಸೇವಾ ಸಪ್ತಾಹ ಕಾರ್ಯಕ್ರಮ-Ambedkar Jayanti and Fire Service Week Program
ಇಂದು ಭದ್ರಾವತಿ ಅಗ್ನಿಶಾಮಕ ಠಾಣೆಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಆಚರಣೆ ಹಾಗೂ ಅಗ್ನಿಶಾಮಕ ಸೇವಾ ಸಪ್ತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಬೈಕ್ ಜಾಥಾ ಹಾಗೂ ಹಳ್ಳಿಗಳಲ್ಲಿ ಅಗ್ನಿ ಸುರಕ್ಷತೆಯ ಬಗ್ಗೆ ಕರಪತ್ರ ಹಾಗೂ ಉಪನ್ಯಾಸ ಪ್ರಾಥ್ಯಕ್ಷತೆ ನೀಡುವುದರ ಮುಖಾಂತರವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಹಾಗೂ ಅಗ್ನಿಶಾಮಕ ಸೇವಾ ಸಪ್ತಹ ಅಂಗವಾಗಿ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಸಪ್ತಾಹ ಕಾರ್ಯಕ್ರಮವು 14.04.2025 ರಿಂದ ದಿನಾಂಕ 20.04.2025 ರವರೆಗೆ ಒಂದು ವಾರಗಳ ಕಾಲ ಅಗ್ನಿ ಸುರಕ್ಷತೆಯ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
Ambedkar Jayanti and Fire Service Week Program