ಉದ್ಯಮಿಗೆ ಐದು ಬಾರಿ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್-Money demanded

 Suddilive || Shivamogga

ಉದ್ಯಮಿಗೆ ಐದು ಬಾರಿ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್ -Called the businessman five times and demanded money

Money, demand


ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಹಣದ ಬೇಡಿಕೆಯಿಟ್ಟ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಜೆ.ಸಿ ನಗರದಲ್ಲಿ ಪಾತ್ರೆ ಅಂಗಡಿಯಿಟ್ಟುಕೊಂಡು ಜೀವನ ನಡೆಸುತ್ತಿದ್ದ ಮಾಲೀಕರಿಗೆ ಅವರ ಸಂಬಂಧಿಯಿಂದಲೇ ಐದು ಬಾರಿ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ. ಹಣ ಕೊಡದಿದ್ದರೆ ಜೈಲಿನಿಂದ ಹೊರಗಡೆ ಬಂದ ಮೇಲೆ ನೋಡಿಕೊಳ್ಳುವ ಧಮ್ಕಿ ಹಾಕಿದ್ದಾನೆ. 

ಭದ್ರಾವತಿ ಗ್ರಾಮಾಂತರ ಭಾಗದಲ್ಲಿ ಮಾರ್ಚ್ 25 ರಂದು ದರೋಡೆ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ಕವಿರಾಜ್ ಮತ್ತು ಆತನ ಕಡೆಯವರು ಜೈಲಿಗೆ ಕಳುಹಿಸಲಾಗಿತ್ತು.  ಜೈಲಿನಿಂದ ಹೊರಗೆ ಬಂದ ಕವಿರಾಜ್  ತಮ್ಮ‌ಸಂಬಂಧಿಗೆ ಕರೆ ಮಾಡಿ ಹಣದ ಬೇಡಿಯನ್ನಿಟ್ಟಿದ್ದಾನೆ. 

ಹಣ ನೀಡದಿದ್ದರೆ ಜೈಲಿನಿಂದ ಬಿಡುಗಡೆಯಾಗಿ ಬಂದ ಮೇಲೆ ನೋಡಿಕೊಳ್ಳುವ ಬೆದರಿಯನ್ನಿಟ್ಟಿದ್ದ.  ಪಾತ್ರೆ ಅಂಗಡಿಯ ಮಾಲೀಕ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವಿಚಾರವಾಗಿ ಆತನನ್ನ ವಶಕ್ಕೆ ಪಡೆದ ದೊಡ್ಡಪೇಟೆ ಪೊಲೀಸರು. ಸೂಕ್ತ ವಿಚಾರಣೆ ನಡೆಸಿ ಕಳುಹಿಸಿದ್ದಾರೆ. 

Called the businessman five times and demanded money

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close