Suddilive || Shivamogga
ಉದ್ಯಮಿ ಕುಸಿದು ಬಿದ್ದು ಸಾವು -Businessman collapses and dies
ಲಾಡ್ಜ್ ವೊಂದರಲ್ಲಿ ಉದ್ಯಮಿಯೊಬ್ಬರು ಅಸಹಜ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ರೂಮಿನ ಕೊಠಡಿಯಲ್ಲಿಯೇ ಉದ್ಯಮಿ ಕುಸಿದು ಸಾವನ್ನಪ್ಪಿದ್ದಾರೆ.
ಕೊಠಡಿಯ ಬಾತ್ ರೂಮ್ ಗೆ ತೆರಳುವ ವೇಳೆ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನ ಬಸವರಾಜ್ (45) ಎಂದು ಗುರುತಿಸಲಾಗಿದೆ.
ಏ.11 ರಿಂದ ಶಿವಮೊಗ್ಗದ ಪ್ರತಿಷ್ಠಿತ ಲಾಡ್ಜ್ ನಲ್ಲಿ ಬಸವರಾಜ್ ತಂಗಿದ್ದರು. ಹುಬ್ಬಳ್ಳಿಯಿಂದ ಬಂದ ಇವರು ಉದ್ಯಮಕ್ಕಾಗಿ ಶಿವಮೊಗ್ಗದಲ್ಲಿ ನೆಲೆಸಿದ್ದರು. ಇವರ ಮೃತ ದೇಹವನ್ನ ಮೆಗ್ಗಾನ್ ನ ಪರೀಕ್ಷ ಕೇಂದ್ರದಲ್ಲಿ ಇರಿಸಲಾಗಿದೆ. ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.