Suddilive || Shivamogga
ಸಂಸದರ ಮನೆಗೆ ಮುತ್ತಿಗೆ ಯತ್ನ-Attempted siege of MP's house
ಕೇಂದ್ರ ಸರ್ಕಾರ ಜಾರಿನಿರ್ದೇಶನಾಲಯವನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನ ಖಂಡಿಸಿ ಇಂದು ಕೆ.ರಂಗನಾಥ್ ಅವರ ನೇತೃತ್ವದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವಿನೋಬ ನಗರದಲ್ಲಿರುವ ಸಂಸದ ರಾಘವೇಂದ್ರ ಅವರ ಮನೆಗೆ ಮುತ್ತಿಗೆಯತ್ನ ನಡೆದಿದೆ. ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ ನ್ಯಾಷನಲ್ ಹೆರಾಲ್ಡ್ ವಿಚಾರದಲ್ಲಿ ನ್ಯಾಯಾಲಯ ಜಾರಿನಿರ್ದೇಶನ ಸಲ್ಲಿಸಿರುವ ವರದಿಯನ್ನಮನ್ನಣೆ ಮಾಡಿತ್ತು. ನ್ಯಾಯಾಲಯದ ತೀರ್ಮಾನದ ಹಿಂದೆ ರಾಜಕೀಯ ಲೆಕ್ಕಾಚಾರವಿದ್ದು ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಇಡಿಯ ಚಾರ್ಚ್ ಶೀಟ್ ಗೆ ಮನ್ನಣೆ ದೊರೆತಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಆಗ್ರಹಿಸಿದೆ.
ವಿನೋಬನಗರದ ಚೌಕಿ ಬಳಿ ಪ್ರತಿಭಟನಾಕಾರರನ್ನ ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಯಲ್ಲಿ ಗಿರೀಶ್ ಭಾಗಿಯಾಗಿದ್ದರು. ಇದಕ್ಕೂ ಮುನ್ನ ಯುವಕಾಂಗ್ರೆಸ್ ನ ಹರ್ಷಿತ್ ಗೌಡರ ನೇತೃತ್ವದಲ್ಲಿ ಇಡಿ ದುರ್ಬಳಕೆ ವಿರುದ್ಧ ಅಂಚೆ ಕಚೇರಿ ಮುತ್ತಿಗೆಯತ್ನ ನಡೆಸಿದ್ದರು. ಕೋಟೆ ಪೊಲೀಸರು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್ ಸಂಸದರ ಮನೆ ಮುತ್ತಿಗೆ ಯತ್ನ ನಡೆಸಿದ್ದಾರೆ.
Attempted siege of MPs house