ಪ್ರಬಲ ವಿರೋಧ ಬಂದರೆ ಜಾತಿಗಣತಿ ವರದಿ ಕೈಬಿಡೋದು ಒಳ್ಳೆಯದು-ಬೇಳೂರು-drop the caste census report

Suddilive || Shivamogga

ಪ್ರಬಲ ವಿರೋಧ ಬಂದರೆ ಜಾತಿಗಣತಿ ವರದಿ ಕೈಬಿಡೋದು ಒಳ್ಳೆಯದು-ಬೇಳೂರು-It would be better to drop the caste census report if there is strong opposition - Belur

Caste, census

ಜಾತಿಗಣತಿಗೆ ಪ್ರಬಲ ವಿರೋಧ ಬಂದರೆ ಕೈಬಿಡುವಂತೆ ಸಿಎಂಗೆ ಶಾಸಕ ಗೋಪಾಲಕೃಷ್ಣ ಬೇಳೂರು ಕಿವಿಮಾತು ಹೇಳಿದ್ದಾರೆ. ಬೇರೆ ಬೇರೆ ವರ್ಗದವರನ್ನ ವಿರೋಧ ಮಾಡಿಕೊಂಡು ಜಾರಿ ಮಾಡೋದು ಒಳ್ಳೆಯದಲ್ಲ ಎಙದು ಸಹ ನುಡಿದಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಬೇಳೂರು ಮತ್ತೊಂದು ಸರಿ ಚರ್ಚೆ ಮಾಡೋದು ಒಳ್ಳೆಯದು. ಸಂಪುಟ ಸಭೆ, ಎಲ್ಲಾ ಶಾಸಕರ ಸಭೆ ಕರಿಬೇಕು. ಮುಂದಿನ ನಿರ್ಧಾರ ಮಾಡೋ ಬದಲು ಎಲ್ಲರನ್ನು ಕರೆದು ಒಮ್ಮತದ ತೀರ್ಮಾನ ಮಾಡಲಿ.ಬಹುತೇಕ ಕಡೆ ಸಮೀಕ್ಷೆ ಸರಿಯಾಗಿ ಅಗಿಲ್ಲ ಎಂದು ಆಗ್ರಹಿಸಿದ್ದಾರೆ. 

ಈ ಬಗ್ಗೆ ಹಲವು ಶಾಸಕರು ವಿರೋಧ ಮಾಡಿದ್ದಾರೆ. ಕೆಲವು ಜಾತಿಯವರು ನಮಗೆ ಬೇಡ ಅಂತಿದ್ದಾರೆ. ಎಲ್ಲಾ ವರ್ಗದ ವಿರೋಧ ಕಟ್ಟಿಕೊಳ್ಳುವುದು ಬೇಡ. ಜಾತಿ ಗಣತಿ ವರದಿಯನ್ನು ಸದ್ಯಕ್ಕೆ ನಿಲ್ಲಿಸೋದೆ ಒಳ್ಳೆಯದು. ಆನಂತರ ಪರಿಶೀಲಿಸಿ, ಮಾಡಲಿ ಎಂದ ಬೇಳೂರು ನುಡಿದಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣ

ನ್ಯಾಷನಲ್ ಹೆರಾಲ್ಡ್ ವಿಷಯದಲ್ಲಿ ರಾಜಕೀಯ ನಡೆಸಲಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರನ್ನು ಬದಿಗೆ ಸರಿಸುವ ಚಿಂತನೆ ಅವರದ್ದಾಗಿದೆ. ಇಡಿ ಹಾಗೂ ಐಟಿ ಮೋದಿ ಅವರದ್ದೇ. ಕಾಂಗ್ರೆಸ್ ನಾಯಕರನ್ನ ನೆಲಸಮ ಮಾಡಲು ಹೊರಟ್ಟಿದ್ದಾರೆ ಎಂದು ಗುಡುಗಿದರು. 

ಆದರೇ, ಇದ್ಯಾವುದು ನಡೆಯಲ್ಲ. ಇದು ಪ್ರಜಾಪ್ರಭುತ್ವ ದೇಶ. ಸುಪ್ರೀಂ ಕೋರ್ಟ್ ರಾಜ್ಯಪಾಲರಿಗೆ ಹೇಗೆ ಚಾಟಿ ಬೀಸಿದೆ ಗೊತ್ತಲ್ಲಾ. ಎಲ್ಲಾ ರಾಜ್ಯ ಸರ್ಕಾರವನ್ನು ಮುಗಿಸಲು ಹೊರಟರು. ಆದರೆ, ಯಾವುದು ನಡೆಯಲ್ಲ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಅಧಿಕಾರಯುತವಾಗಿ ಕೆಲಸ ಮಾಡುತ್ತವೆ. ಬಿಜೆಪಿಯವರಿಗೆ ಕಡಿವಾಣ ಹಾಕಲು ಕೋರ್ಟ್ ಇದೆ ಎಂದರು. 

ಖಂಡಿತಾ ಇದು ರಾಜಕೀಯ ಪ್ರೇರಿತ ಎಂದ ಬೇಳೂರು. ಮೂಡಾ - ಇಡಿ ತನಿಖೆ ವಿಚಾರವೂ ರಾಜಕೀಯ ಪ್ರೇರಿತವಾಗಿದೆ. ಎಲ್ಲವೂ ರಾಜಕೀಯ ಮಯವಾಗಿದೆ. ಮೂಡಾ ಸೇರಿದಂತೆ ಎಲ್ಲವೂ ಅದೇ ಮಾಡ್ತಿರೋದು. ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಕೇಂದ್ರದವರು ನಿರಂತರ ಪ್ರಯತ್ನ ಮಾಡ್ತಾರೆ ಎಂದು ಆರೋಪಿಸಿದರು. 

ಸಿಎಂ ಕೆಳಗಿಳಿಸಬೇಕು., ನಾವು ಮುಂದೆ ಬರಬೇಕು ಎನ್ನುವ ಉದ್ದೇಶ ಅವರದ್ದು. ವಿಜಯೇಂದ್ರ ಇಟ್ಟುಕೊಂಡು ಇವರು ಮುಂದೆ ಬರ್ತಾರ..?ಅವರ ಪಕ್ಷದಲ್ಲೇ ಸಾಕಷ್ಟು ಗೊಂದಲ ಇದೆ. ಮೊದಲು ಅದನ್ನ ನಿವಾರಿಸಿಕೊಳ್ಳಲಿ ನಂತರ ಸಿಎಂ ಗಾದಿ ಕುರಿತು ಯೋಚಸಲಿ ಎಂದು ಸಲಹೆ ನೀಡಿದರು. 

drop the caste census report

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close