Suddilive || Shivamogga
ಅಂಚೆಕಚೇರಿಗೆ ಮುತ್ತಿಗೆಯತ್ನ-Attempted siege of the post office
ಜಾರಿನಿರ್ದೇಶನಾಲಯ ಹಾಗೂ ತನಿಖಾ ಸಂಸ್ಥೆ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಬಿ ಜೆ ಪಿ ಸರಕಾರದ ವಿರುದ್ಧ ಶಿವಮೊಗ್ಗ ಜಿಲ್ಲೆ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಅಂಚೆ ಕಚೇರಿ ಮುತ್ತಿಗೆ ಹಾಕಿ ಒಳನುಗ್ಗಲು ಯತ್ನಿಸಿದವರನ್ನ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್ ಹೆರಾಲ್ಡ್ ಸಂಸ್ಥೆ ಯ ಆಸ್ತಿ ಗಳನ್ನು ಮುಟ್ಟು ಗೋಲು ಹಾಕಿ ಕೊಳ್ಳಲು ಪ್ರಯತ್ನಿಸುತ್ತಿದೆ ಇದನ್ನು ಜಿಲ್ಲಾ ಯುವ ಕಾಂಗ್ರೇಸ್ ಖಂಡಿಸಿದೆ.
ಈ ಸಂದರ್ಭದಲ್ಲಿ KPCC ಪ್ರಧಾನ ಕಾರ್ಯದರ್ಶಿ ಎನ್ ರಮೇಶ್ ಮಾತನಾಡಿ ಕಾಂಗ್ರೇಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮುಂದುವರಿಸಿದೆ ಇವರ ಒಡೆತನದಲ್ಲಿ ಇರುವ ನೇಷ್ನಲ್ ಹೆರಾಲ್ಡ್ ಸಂಸ್ಥೆ ಯನ್ನೇ ಮುಚ್ಚಿ ಹಾಕುವ ಹುನ್ನಾರ ನೆಡೆಸುತ್ತಿದ್ದು ಈಗಾಗಲೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಇಡಿ ಆರೋಪ ಪಟ್ಟಿ ಸಲ್ಲಿಸಿದೆ ಇದನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ ಎಂದರು.
ಬ್ಲಾಕ್ ಕಾಂಗ್ರೆಸ್ ನ ಶಿವಕುಮಾರ್ ಮಾತನಾಡಿ ಬಿ ಜೆ ಪಿ ಸರ್ಕಾರ ಅಧಿಕಾರಕ್ಕೆ ಬಂದ್ ಮೇಲೆ ಕಾಂಗ್ರೆಸ್ ನಾಯಕರು ಸೇರಿದಂತೆ ವಿರೋಧ ಪಕ್ಷ ದ ನಾಯಕರು ಗಳ ವಿರುದ್ಧ ಇಡಿ ಐಟಿ ಮುಂತಾದ ತನಿಖಾ ಸಂಸ್ಥೆ ಗಳನ್ನು ಮುಂದಿಟ್ಟು ಕೊಂಡು ದಾಳಿ ನೆಡೆಸಲು ಮುಂದಾಗಿದೆ ಕೇಂದ್ರ ಸರ್ಕಾರ ಈ ತನಿಖೆ ಸಂಸ್ಥೆಗಳ ಜುಟ್ಟನ್ನು ತನ್ನ ಕೈನಲ್ಲಿ ಇಟ್ಟುಕೊಂಡು ಷಡ್ಯಂತರದ ಮೂಲಕ ವಿರೋಧ ಪಕ್ಷಗಳನ್ನು ಬಗ್ಗು ಬಡಿಯಲು ಮುಂದಾಗಿದೆ
ಕೂಡಲೇ ರಾಷ್ಟ್ರ ಪತಿಗಳು ಮದ್ಯಪ್ರವೇಶ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಕ್ರಮ ತೆಗೆದು ಕೊಳ್ಳ ಬೇಕು ಮತ್ತು ದ್ವೇಷ ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ PLD ಬ್ಯಾಂಕ್ ಅಧ್ಯಕ್ಷರಾದ ವಿಜಯಕುಮಾರ್, ಚೇತನ್, ಮಧುಸೂದನ್, ಇಮ್ರಾನ್, ಅಕ್ಬರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ಚರಣ್, ಪ್ರವೀಣ್, ಗಿರೀಶ್, ಸಕ್ಲೇನ್, ಅನಿಲ್ ಪಾಟೀಲ್, ಧನುಷ್, ಮಲಗಪ್ಪ ಶಿವು, ಆಕಾಶ್, NSUI ಜಿಲ್ಲಾಧ್ಯಕ್ಷ ವಿಜಯ್, ರವಿ ಕಟಿಕೆರೆ, ಚಂದ್ರ ಜಿ ರಾವ್, ಸುಭಾನ್, ಅಭಿ, ಆದಿತ್ಯ, ವರುಣ್ ವಿ ಪಂಡಿತ್ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
Attempted siege of the post office