Suddilive || Shivamogga
ಪ್ರತಿಷ್ಠಿತ ಕಾಲೇಜಿನ ವಿರುದ್ಧ ಬಸವನಾಗಿದೇವ ಸ್ವಾಮಿಗಳು ಸುದ್ದಿಗೋಷ್ಟಿ-Basavanagideva Swamigalu holds press conference against prestigious college
ಶಾಲಾ ಶುಲ್ಕವನ್ನ ಬಾಕಿ ಉಳಿಸಿಕೊಂಡ ಬಾಲಕನಿಗೆ ಪ್ರತಿಷ್ಠಿತ ಶಾಲೆಯು ಜಾತಿ ನಿಂದನೆ, ಹಲ್ಲೆ, ಕೊಲೆ ಬೆದರಿಕೆ ಹಾಕಿರುವ ಘಟನೆಯ ವಿರುದ್ಧ ಚಿತ್ರದುರ್ಗದ ಛಲವಾದಿ ಮಹಾಸಂಸ್ಥಾಪನ ಮಠ ಶ್ರೀ ಬಸವನಾಗಿದೇವ ಸ್ವಾಮಿಗಳು ಸುದ್ದಿಗೋಷ್ಟಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ಕುರಿತು ಒಂದು ತಿಂಗಳ ಹಿಂದೆ ಶಾಲಾ ಆಡಳಿತ ಮಂಡಳಿ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಮಗುವಿನ ವಿಚಾರದಲ್ಲಿ ಎಲ್ಲಾ ಅಧಿಕಾರಿಗಳು ವಿಫಲರಾಗಿದ್ದಾರೆ. ನಾನು ಮಾನವೀಯತೆಯಾಗಿ ಮಗುವಿಗೆ ಬೆನ್ನು ನಿಂತಿದ್ದೇನೆ. ಎಕ್ಸಾಂ ಬರೆಯಲೂ ಮಗುವಿಗೆ ಶಾಲೆ ಆಡಳಿತ ಮಂಡಳಿ ಅವಕಾಶ ನೀಡಿಲ್ಲ ಇದು ಖಂಡನೀಯ ಎಂದರು.
ಘಟನೆನೆ ನಡೆದಿಲ್ಲ ಎಂದು ಶಾಲೆಗಳು ಹೇಳುತ್ತಿದೆ. ಹಾಗಾದರೆ ಮಗುವಿಗೆ ಮೂರು ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲವೇಕೆ ಎಂದು ಪ್ರಶ್ನಿಸಿದರು. ಶುಲ್ಕ ಕಟ್ಟಿಲ್ಲ ಎಂದು ತಲೆಯ ಕೂದಲು ಕತ್ತರಿಸಿದ ಘಟನೆ ತಲೆತಗ್ಗಿಸುವ ವಿಷಯವಾಗಿದೆ ಎಂದರು.
ಶಾಲೆಯವರಿಗೆ ನಿರೀಕ್ಷಣಾ ಜಾಮೀನು ದೊರೆತಿದೆ. ಇದು ತನಿಖೆಯ ಅಪ್ರಮಾಣಿಕತೆ ಮತ್ತು ಅಸಮರ್ಥ್ಯ ಇರುವುದಕ್ಕೆ ಕಂಡುಬಂದಿರುತ್ತದೆ. ಇಲ್ಲಿ ಹಣ ಮತ್ತು ರಾಜಕೀಯ ವ್ಯಕ್ತಿಗಳ ಪಾತ್ರ ಇದೆ. ಸರ್ಕಾರಿ ಅಧಿಕಾರಿಗಳ ಕರ್ತವ್ಯ ಲೋಪ ಹಾಗೂ ಕರ್ತವ್ಯ ನಿರ್ಲಕ್ಷವಾಗಿದೆ. ತನಿಖೆಯಲ್ಲಿ ಅಧಿಕಾರಿಗಳು ಸಾಕ್ಷಿ ನಾಶಮಾಡುವ ಹುನ್ನಾರವಾಗಿದೆ ಎಂದು ದೂರಿದರು.
Basavanagideva Swamigalu