Suddilive || Shivamogga
ವಿಮಾನ ನಿಲ್ದಾಣದಲ್ಲಿ ಆಟೋಗಳ ಹಾವಳಿ-Autos aplenty at the airport
ಶಿವಮೊಗ್ಗ ವಿಮಾನ ನಿಲ್ದಾಣ ಕೇವಲ ತಂತ್ರಜ್ಞಾನದಲ್ಲಿ ಅಷ್ಟೇ ಅಲ್ಲ ನಿರ್ವಹಣೆಯಲ್ಲೂ ವಿಫಲವಾಗಿದೆ. ಟ್ಯಾಕ್ಸಿಗಳು, ಬಸ್ ವ್ಯವಸ್ಥೆ ಇರಬೇಕಿದ್ದ ಜಾಗದಲ್ಲಿ ಆಟೋಗಳ ಹಾವಳಿ ಹೆಚ್ಚಾಗಿದೆ.
ನಿಲ್ದಾಣದ ಒಳಗೆ ಪ್ಯಾಸೇಂಜರ್ ಗಳನ್ನ ಬಿಡುವ ಮತ್ತು ಕೂರಿಸಿಕೊಂಡು ಬರುವ ವ್ಯವಸ್ಥೆ ಮಾಡಿಕೊಡಲಾಗಿದೆ. ಏರ್ ಪೋರ್ಟ್ ನಲ್ಲಿ ನೈಟ್ ಲ್ಯಾಂಡಿಗ್ ಸಮಸ್ಯೆ ಮಾತ್ರವಲ್ಲ ಗುಜರಿ ಅಂಗಡಿಗೂ ಕಡೆಯಾದಂತೆ ಕಂಡು ಬರುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಜಟಕಾ ಬಂಡಿನೂ ಒಳಗೆ ಬಿಡಲು ಏರ್ ಪೋರ್ಟ್ ಅಥಾರಿಟಿ ಸಿದ್ದವಿದೆ ಎಂದರೆ ಅಚ್ಚರಿಪಡಬೇಕಿಲ್ಲ.
ಅಷ್ಟು ಹದಗೆಟ್ಟು ಹೋದ ವ್ಯವಸ್ಥೆ ಕಂಡು ಬರುತ್ತಿದೆ. 600 ಕೋಟಿ ರೂ. ವೆಚ್ಚದಲ್ಲಿ 777 ಎಕರೆಯ ಈ ವಿಮಾನ ನಿಲ್ದಾಣದಲ್ಲಿ ಹದಗೆಟ್ಟ ವ್ಯವಸ್ಥೆಗಳಿವೆ ಎಂಬುದು ಸಾಬೀತಾಗಿದೆ. ಮೋರ್ ಓವರ್! ಆಟೋಗಳು ನಗರದ ಕೇಂದ್ರ ಸ್ಥಾನದಿಂದ 10 ಕಿಮಿ ವರೆಗೆ ಬಾಡಿಗೆ ಹೋಗಬಹುದು.
ಅಂದರೆ ಪಾನೀಯ ನಿಗಮದ ವರೆಗೆ 10 ಕಿಮಿ ಆಗಲಿದೆ. ಆದರೆ ವಿಮಾನ ನಿಲ್ದಾಣ 13.8 ಕಿಮಿ ದೂರವಿದೆ. ಇಲ್ಲಿಯವರೆಗೆ ಆಟೋಗಳು ಚಲಿಸಲು ಅನುಮತಿ ನೀಡಲಾಗಿದೆ ಎಂದರೆ ಆರ್ ಟಿ ಒ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದೇ ಅರ್ಥ. ವಿಮಾನ ಹತ್ತಲು ಬಳಸುವ ವಾಹನಗಳಿಗೆ ಸಧ್ಯಕ್ಕೆ ಆಟೋ ಬಳಸದೆ ಇರುವುದು ನಮ್ಮ ಮತ್ತು ನಿಮ್ಮೆಲ್ಲರ ಪುಣ್ಯ ಸಹ ಹೌದು!
ಈ ವಿಚಾರವಾಗಿ ಇಂದು ಶಿವಮೊಗ್ಗ ಏರ್ ಪೋರ್ಟ್ ನ ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರ ಸಂಘ ಆರ್ ಟಿ ಒ ಅಧಿಕಾರಿಗಳನ್ನ ಭೇಟಿಯಾಗಿ ವಿಮಾನ ನಿಲ್ದಾಣದ ವರೆಗೆ ಆಟೋ ಪರ್ಮಿಟ್ ಇಲ್ಲವಾದರೂ ಬಳಸಲಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಿಸಿದೆ. ನಮ್ಮ ಹೊಟ್ಟೆಯ ಮೇಲೆ ಆಟೋದವರು ಗದಾಪ್ರಹಾರ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.
Autos aplenty at the airport